<strong>POWER SAMACHARA | KANNADA NEWS | BREKING NEWS| 13-09-2023..</strong> <strong>ದಾವಣಗೆರೆ</strong> : ನಗರದ ಹಳೇ ಕುಂದುವಾಡದಲ್ಲಿಂದು ಕುಂದುವಾಡ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆ ನಡೆಯಿತು, ಅಧ್ಯಕ್ಷರಾಗಿ ಎ ಎಸ್ ಸಿದ್ದೇಶ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ... <img class="aligncenter wp-image-2460 size-full" src="https://powersamachara.com/wp-content/uploads/2023/09/vssn-president-siddesh-select1.jpg" alt="" width="870" height="570" /> ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎಎಸ್ ಸಿದ್ದೇಶ್, ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲು ಸಹಕರಿಸಿದ ಹಳೇ ಕುಂದುವಾಡ, ಹೊಸ ಕುಂದುವಾಡ, ಸತ್ಯನಾರಾಯಣ ಕ್ಯಾಂಪ್ ನ ವಿಎಸ್ ಎಸ್ ಎನ್ ಸದಸ್ಯರಿಗೆ, ಪದಾಧಿಕಾರಿಗಳಿಗೆ ಧನ್ಯವಾದಗಳು. ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡು ಸಂಘದ ಅಭಿವೃದ್ದಿಗೆ ಶ್ರಮ ವಹಿಸುತ್ತೇನೆ. ಸರ್ಕಾರದಿಂದ ಬರುವಂತಹ ಎಲ್ಲಾ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ಜೊತೆಗೆ ರೈತರ ಹಿತ ಕಾಪಾಡಲು ಶ್ರಮ ವಹಿಸುತ್ತೇನೆ ಎಂದು ತಿಳಿಸಿದರು. <img class="aligncenter wp-image-2461 size-full" src="https://powersamachara.com/wp-content/uploads/2023/09/vssn-president-siddesh-select.jpg" alt="" width="870" height="570" /> ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ಎಂಎಸ್ ನಾಗರಾಜ್, ಜೆ ಮಹೇಶ್ವರಪ್ಪ, ಹೆಚ್ ಮಂಜುನಾಥ್, ಧರ್ಮರಾಜ್, ಚಿಕ್ಕಪ್ಪರ ಹನುಮಂತಪ್ಪ, ಬಣಕಾರ್ ಸಿದ್ದೇಶ್, ಮಾಜಿ ಅಧ್ಯಕ್ಷ ಅಕ್ಕಿ ಮಹಾಂತೇಶ್, ಬಾರಿಕರ್ ಚಂದ್ರಪ್ಪ, ಗ್ವಾರಪ್ಪರ ಹನುಮಂತಪ್ಪ, ಎಡಿ ಸತೀಶ್, ಸಹಕಾರಿ ಸಂಘದ ಕಾರ್ಯದರ್ಶಿ ರೇವಣಸಿದ್ದಪ್ಪ, ಗೋಪಾಲಪ್ಪ, ಬಳ್ಳಾರಿ ಲೋಕೇಶ್, ಮಡಿವಾಳಪ್ಪ, ಹನುಮಂತಪ್ಪ, ಸೇರಿದಂತೆ ಸಂಘದ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು..