<strong>POWER SAMACHARA | KANNADA NEWS | BREKING NEWS| 08-09-2023..</strong> <strong>ದಾವಣಗೆರೆ:</strong> ಸಿನಿಮಾ ಸ್ಟೈಲ್ ನಲ್ಲಿ ಯುವತಿ ಕಿಡ್ನಾಪ್ ಗೆ ಯತ್ನಿಸಿರುವ ಘಟನೆ ದಾವಣಗೆರೆಯ ತೋಳ ಹುಣಸೆಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.. <img class="aligncenter wp-image-2390 size-full" src="https://powersamachara.com/wp-content/uploads/2023/09/girl-kidnap-2.jpg" alt="" width="870" height="570" /> ಕಾರ್ ನಲ್ಲಿ ಬಲವಂತವಾಗಿ ಎತ್ತಾಕಿಕೊಂಡು ಹೋಗುತ್ತಿದ್ದ ವಿಡಿಯೋ ವೈರಲ್ ಆಗಿದೆ, ಇಬ್ಬರು ಯುವಕರು ಸೇರಿದಂತೆ ನಾಲ್ಕೈದು ಜನ ಯುವತಿಯನ್ನ ಕಾರ್ ಗೆ ಹಾಕಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ, ಈ ವೇಳೆ ರಕ್ಷಣೆಗಾಗಿ ಯುವತಿ ಚೀರಾಡಿದ್ದಾಳೆ, ತಕ್ಷಣಕ್ಕೆ ಬಂದ ವಿವಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗ ಕಾರ್ ಗೆ ಅಡ್ಡಲಾಗಿ ನಿಂತು ಯುವತಿಯ ರಕ್ಷಣೆ ಮಾಡಿದ್ದಾರೆ, ಬಳ್ಳಾರಿ ಮೂಲದ ಯುವತಿ ದಾವಣಗೆರೆಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಓದುತ್ತಿದ್ದಾಗಿ ತಿಳಿದು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಯುವತಿಯ ಹೇಳಿಕೆ ಪಡೆದು ವಿಶ್ವವಿದ್ಯಾಲಯಕ್ಕೆ ದಾವಣಗೆರೆ ಗ್ರಾಮಾಂತರ ಠಾಣಾ ಪೊಲೀಸರು ಕಳುಹಿಸಿದ್ದಾರೆ.. <img class="aligncenter wp-image-2391 size-full" src="https://powersamachara.com/wp-content/uploads/2023/09/girl-kidnap-1.jpg" alt="" width="870" height="570" /> <h2>ಘಟನೆ ಹಿನ್ನಲೆ ಏನೂ..?</h2> ಕೌಟುಂಬಿಕ ಸಮಸ್ಯೆ ಮತ್ತು ಸಂಘರ್ಷವೇ ಘಟನೆಗೆ ಕಾರಣ ಎನ್ನಲಾಗಿದೆ, ವೈರಲ್ ವಿಡಿಯೋದಲ್ಲಿ ಬಾಲ್ಯ ವಿವಾಹ ಮಾಡಿರುವ ಕುರಿತು ಯುವತಿ ಹೇಳಿಕೆ ನೀಡಿದ್ದಾಳೆ, ನನ್ನನು ಕರೆದುಕೊಂಡು ಹೋಗಿ ಆತನ ಬಳಿ ಬಿಡುತ್ತಾರೆ, ಅವನ ಜೊತೆ ನನಗೆ ಬದುಕಲು ಇಷ್ಟವಿಲ್ಲ, ಆತನಿಗೆ ಬೇರೆಯವರ ಜೊತೆ ಅಫೇರ್ ಇದೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ, ಅವನ ಜೊತೆ ಕಳಿಸುವ ವಿಚಾರಕ್ಕೆ ನಾನು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದೆ, ನನಗೆ ಅವನ ಜೊತೆ ಬದುಕಲು ಇಷ್ಟ ಇಲ್ಲ ಎಂದು ಯುವತಿ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ, ಇನ್ನೂ ತಾಯಿ ಮತ್ತು ಪುತ್ರಿ ಪರಸ್ಪರ ಆಪಾದನೆ ಮಾಡಿಕೊಂಡಿದ್ದಾರೆ, ಕಿಡ್ನಾಪ್ ವೇಳೆ ಸ್ಥಳೀಯರ ಆಗಮನದಿಂದ ಯುವತಿ ಬಚಾವ್ ಆಗಿದ್ದಾಳೆ, ಯುವತಿ ತಂದೆ ತಾಯಿಗೆ ಸ್ಥಳಿಯರು ಕ್ಲಾಸ್ ತೆಗೆದುಕೊಂಡಿದ್ದಾರೆ..