<p style="text-align: left;"><strong>POWER SAMACHARA | KANNADA NEWS | 10 04-2023</strong></p> <strong>ದಾವಣಗೆರೆ: </strong>ಅಮುಲ್ ಹಾಲಿನ ಉತ್ಪನ್ನ ಆಗಮನ ಹಿನ್ನಲೆ ಯಾವುದೇ ಕಾರಣಕ್ಕು ಅಮುಲ್ ಉತ್ಪನ್ಮ ಕೊಳ್ಳಬೇಡಿ ಎಂದು ದಾವಣಗೆರೆಯಲ್ಲಿ ರೈತ ಸಂಘ ಕೈ ಮುಗಿದು ಕೇಳಿಕೊಂಡಿದೆ.. <img class="size-medium wp-image-879 alignnone" src="https://powersamachara.com/wp-content/uploads/2023/04/IMG-20230410-WA0075-300x146.jpg" alt="" width="300" height="146" />ಈ ಬಗ್ಗೆ ರಾಜ್ಯಾಧ್ಯಕ್ಷ ನಾಗೇಂದ್ರ ಹೇಳಿಕೆ ನೀಡಿದ್ದು, ಇದೇ 15 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಚುನಾವಣೆ ಮುಗಿದ ಬಳಿಕ ಉಗ್ರ ಹೋರಾಟ, ನಂದಿನಿ ಉತ್ಪನ್ನವನ್ನ ಬಿಜೆಪಿ ಮುಗಿಸಲು ಹೊರಟಿದೆ, ಈಗಾಗಿ ಎಲ್ಲರು ನಂದಿನಿ ಉತ್ಪನ್ನವನ್ನೆ ಖರೀದಿಸಬೇಕು ಎಂದು ಮನವಿ ಮಾಡಿದೆ.. <h2>14 ಕ್ಷೇತ್ರಗಳಲ್ಲಿ ಸರ್ವೋದಯ ಪಾರ್ಟಿ ಸ್ಪರ್ಧೆ..</h2> ಸರ್ವೋದಯ ಕರ್ನಾಟಕ ಪಕ್ಷದಿಂದ 14ಅಭ್ಯರ್ಥಿಗಳು ಕಣಕ್ಕೆ ಇಳಿಸಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿಕೆ ನೀಡಿದ್ದಾರೆ.. ರಾಜ್ಯ ರೈತ ಸಂಘದ ಆಶ್ರಯದಲ್ಲಿ ಚುನಾವಣೆಗೆ ಸ್ಪರ್ಧೆ ನಡೆಸಲಾಗುವುದು, ಮಂಡ್ಯ, ಮೇಲುಕೋಟೆ, ಚಿತ್ರದುರ್ಗ, ಚಾಮರಾಜನಗರ ಸೇರಿ 14 ಕ್ಷೇತ್ರಗಳಲ್ಲಿ ಸ್ಪರ್ಧೆ ನೀಡಲು ಮುಂದಾಗಿದ್ದೇವೆ, ಎಲ್ಲಾ ರಾಜಕೀಯ ಪಕ್ಷಗಳು ರೈತರಿಗೆ ಕಂಟಕವಾಗಿದೆ.. ಅದರಲ್ಲೂ ಬಿಜೆಪಿ ಪಕ್ಷದಿಂದ ಮಾರಕ ಕಾಯ್ದೆಗಳು ಬಂದಿವೆ, ಬಿಜೆಪಿ ಪಕ್ಷವನ್ನ ಜನರು ಮೊದಲು ತಿರಸ್ಕರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ..