ದಾವಣಗೆರೆ; ರಾಜ್ಯ ಚುನಾವಣೆ ಹಿನ್ನಲೆ ದಾಖಲೆ ಇಲ್ಲದ ಸುಮಾರು 32 ಲಕ್ಷ ರೂಪಾಯಿ ವಶ ಪಡೆಯಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇತೂರು ಚೆಕ್ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಕೆಎ 16-ಡಿ-3183 ವಾಹನದಲ್ಲಿ ಹಣ ಸಾಗಣೆ ಮಾಡುವ ವೇಳೆ ಜಪ್ತಿ ಮಾಡಲಾಗಿದೆ.
ಸರಿಯಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ಇದಾಗಿದ್ದು ಎನ್ನಲಾಗಿದ್ದು, ಸುಮಾರು 32,32,008 ರೂ.ವಶಕ್ಕೆ ಪಡೆದ ಚುನಾವಣೆ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆಗೆ ಹಣ ಹಸ್ತಾಂತರ ಮಾಡಿದ್ದಾರೆ, ಇನ್ನೂ ಎಸ್ ಎಸ್ ಟಿ ತಂಡಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಅವರು ಅಭಿನಂದನೆ ಸಲ್ಲಿಸಿದ್ದಾರೆ..