POWER SAMACHARA | KANNADA NEWS | BREKING NEWS| 19-07-2023..
ದಾವಣಗೆರೆ: ಅದಿನ್ನೂ ಹಾಲು ಕುಡಿಯುವ ಕಂದ, ತಾಯಿ ಆರೈಕೆಯಲ್ಲಿ ಬೆಳೆಯಬೇಕಿದ್ದ ಎಳೆ ಕೂಸು, ಮುದ್ದಾಗಿದ್ದ ಕಂದ ಇದ್ದಕ್ಕಿದ್ದಂತೆ ಕಣ್ಮರೆ ಆಗಿತ್ತು, ಕಂದನನ್ನ ಹುಡುಕುತ್ತಾ ಹೊರಟ್ಟಿದ್ದ ತಾಯಿಗೆ ಶಾಕ್ ಮೇಲೆ ಶಾಕ್ ಕಾದಿತ್ತು.. ಕಿಡ್ನಾಪ್ ಮಾಡಿದ್ದು ಯಾರು, ಏನಾಯ್ತು, ಯಾಕಾಯ್ತು ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಕ್ಕೆ ಇರಲಿಲ್ಲ, ಇತ್ತ ಎದೆಯಲ್ಲಿ ಹಾಲು ಹೆಚ್ಚಾಗಿ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದಳು, ಕೊನೆಗೆ ಏನಾಯ್ತು ಅನ್ನೋದು ಮಾತ್ರ ಇಂಟರೆಸ್ಟಿಂಗ್..
ಹೌದು.. ಅದು ಜಗತ್ತು ಏನು ಅಂತ ತಿಳಿಯದ ಎಳೆ ಕಂದ, ತಾಯಿ ಮಡಿಲಲ್ಲೇ ತನ್ನ ಜಗತ್ತು ಕಾಣುವ ವಯಸ್ಸು, ಎದೆಹಾಲು ಉಂಡು ಬೆಳೆಯಬೇಕಿದ್ದ 16 ತಿಂಗಳ ಮಗು, ಹೌದು ತಾಯಿಯೇ ತನ್ನ ಪ್ರಪಂಚ ಅಂತ ತಿಳಿದುಕೊಂಡ 16 ತಿಂಗಳ ಎಳೆ ಕಂದ ಅಪಹರಣಕ್ಕೆ ಈಡಾಗಿತ್ತು, ಇಡೀ ನಗರವನ್ನೆ ಹುಡುಗಿದ್ದರು ಸಿಕ್ಕಿರಲಿಲ್ಲ, ಈ ಘಟನೆ ನಡೆದಿದ್ದು ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ, ಘಟನೆ ನಡೆದಿದ್ದು 2023 ಜನೆವರಿ 27ರಂದು, ಅಂದು ಆ ಒಂದು ಮುಸ್ಲಿಂ ಕುಟುಂಬ ಕಣ್ಣಿರಲ್ಲಿ ಮುಳುಗಿತ್ತು. ಮಗು ಕಿಡ್ನಾಪ್ ಆಗಿದೆ ಎಂದು ಹರಿಹರ ಠಾಣೆಗೆ ಆಗಮಿಸಿ ನೂರು ಜಾನ್ ದೂರು ನೀಡಿದ್ದಳು, ಆದರೆ ಆ ದೂರನ್ನ ಪೊಲೀಸರು ಸ್ವೀಕರಿಸಿರಲಿಲ್ಲ.. ಪೊಲೀಸರು ಯಾಕೆ ದೂರು ದೂರು ಸ್ವೀಕರಿಸಲಿಲ್ಲ ಅನ್ನೋದು ಇಂಟರೆಸ್ಟಿಂಗ್…
ಘಟನೆ ಹಿನ್ನಲೆ ಏನೂ, ಕಿಡ್ನಾಪರ್ ಯಾರು…?
ಹರಿಹರದ ನೂರಜಾನ್, ಉತ್ತರ ಪ್ರದೇಶದ ಹಸೀಬ್ ಮದುವೆಯಾಗಿದ್ದರು, ಕೆಲ ತಿಂಗಳು ಉತ್ತರ ಪ್ರದೇಶದಲ್ಲೆ ವಾಸವಿದ್ದರು, ಬಳಿಕ ಹರಿಹರಕ್ಕೆ ದಂಪತಿಗಳು ವಾಪಾಸ್ ಆಗಿದ್ದರು, ನೂರು ಜಾನ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಹಸೀಬ್ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ, ದಿನ ಕಳೆದಂತೆ ಇಬ್ಬರಲ್ಲಿ ಹೊಂದಾಣಿಕೆ ಕೊರತೆ ಕಂಡು ಬಂದಿದೆ ಎನ್ನಲಾಗಿದೆ, ದಂಪತಿಗಳ ನಡುವೆ ನಿತ್ಯ ಸಣ್ಣ ಪುಟ್ಟ ಜಗಳ ಆಗುತ್ತಲೇ ಬರುತ್ತಿತ್ತು, ಇದರಿಂದ ಬೇಸತ್ತಿದ್ದ ಹಸೀಬ್ ಸ್ವಂತ ಊರು ಉತ್ತರ ಪ್ರದೇಶಕ್ಕೆ ಹೋಗೋಣ ಎಂದು ಪತ್ನಿಯನ್ನ ಕರೆದಿದ್ದ, ಇದಕ್ಕೆ ನೂರುಜಾನ್ ಒಪ್ಪಿರಲಿಲ್ಲ ಎನ್ನಲಾಗಿದೆ. ಇದನ್ನೆ ಮನಸ್ಸಿನಲ್ಲಿಟ್ಟು ಕೊಂಡಿದ್ದ ಹಸೀಬ್ ನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ..
ತಂದೆಯಿಂದಲೇ ಮಗನ ಕಿಡ್ನಾಪ್..!
ಜನೆವರಿ 27 ಶುಕ್ರವಾರದಂದು ನೂರಜಾನ್ ಪತಿಯ ತಲೆಯಲ್ಲಿ ಅದ್ಯಾವ ಭೂತ ಹೊಕ್ಕಿತ್ತು ಗೊತ್ತಿಲ್ಲ, ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ತನ್ನ ಸ್ವಂತ ಮಗುವನ್ನೆ ಅಪಹರಿಸಿಕೊಂಡು ಎಸ್ಕೇಪ್ ಆಗಿದ್ದ, ನಮಾಜ್ ಮುಗಿಸಿ ಮನೆಗೆ ಬಂದ ನೂರಜಾನ್ ತಂದೆಗೆ ಶಾಕ್ ಕಾದಿತ್ತು, ಮನೆಯಲ್ಲಿ ಮಗು ಇಲ್ಲದಿರುವುದನ್ನು ಗಮನಿಸಿ ತಕ್ಷಣ ತಮ್ಮ ಮಗಳು ನೂರಜಾನ್ ಗೆ ವಿಷಯ ತಿಳಿಸಿದ್ದಾರೆ, ಕಿರಾತಕ ತಂದೆಗೆ ಫೋನ್ ಮಾಡಿ ಕೇಳಿದರೆ ಇಲ್ಲೆ ಕಟಿಂಗ್ ಮಾಡಿಸಲು ಮಗು ಕರೆದುಕೊಂಡು ಬಂದಿದ್ದೇನೆ ಎಂದಿದ್ದಾನೆ, ಸಂಶಯಗೊಂಡ ನೂರಜಾನ್ ಮತ್ತು ಅವಳ ತಂದೆ ಹರಿಹರ ಪಟ್ಟಣದ ಕಟಿಂಗ್ ಶಾಪಗಳಿಗೆಲ್ಲಾ ಹೋಗಿ ನೋಡಿದ್ದಾರೆ, ಸಂಶಯಗೊಂಡು ಹರಿಹರ ಪೊಲೀಸ್ ಠಾಣೆಗೆ ಬಂದ ವಿಷಯ ತಿಳಿಸಿದ್ದಾರೆ, ನೂರಜಾನ್ ಕಡೆಯಿಂದ ಪತಿಗೆ ಪೋನ್ ಮಾಡಲು ಹೇಳಿ ಟ್ರ್ಯಾಪ್ ಮಾಡಿದಾಗ, ಮಗುವಿನ ಜೊತೆ ಆತ ಉತ್ತರ ಪ್ರದೇಶಕ್ಕೆ ಹೋಗುತ್ತಿರುವುದು ಗೊತ್ತಾಗಿದೆ, ಉತ್ತರ ಪ್ರದೇಶದ ಮನೆಯಲ್ಲಿ ಬಿಟ್ಟು ಸೌದಿ ಅರೇಬಿಯಾಗೆ ತಂದೆ ಹೋಗಿದ್ದ ಎಂದು ತಿಳಿದು ಬಂದಿದೆ, ಮಗುವನ್ನ ಉತ್ತರ ಪ್ರದೇಶದಲ್ಲಿ ಬಿಟ್ಟಿದ್ದನಾ ಅಥವಾ ಸೌದಿ ಅರೇಬಿಯಾಗೆ ಕರೆದುಕೊಂಡು ಹೋಗಿದ್ದನಾ ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿರಲಿಲ್ಲ, ತಂದೆಯೇ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದರಿಂದ ಕೇಸ್ ದಾಖಲಿಸಲು ಬರುವುದಿಲ್ಲ, ಇದನ್ನ ಕಿಡ್ನಾಪ್ ಅಂತಾ ಕರೆಯೋಗಲ್ಲ, ತಂದೆಯೇ ಕಿಡ್ನಾಪರ್ ಅಂತಾನೂ ಹೇಳೋಕೆ ಆಗಲ್ಲ, ನೀವು ಕೋರ್ಟ್ ಗೆ ಹೋಗಿ ಅಂತ ಹರಿಹರ ಪೊಲೀಸ್ ಹೇಳಿದ್ದಾರೆ. ಕಿಡ್ನಾಪ್ ಕೇಸ್ ದಾಖಲಿಸಬೇಕಾ, ಏನೂ ಹೇಗೆ ಎಂಬ ಪ್ರಶ್ನೆ ಹುಡುಕುತ್ತಾ ಹೊರಟ್ಟಿದ್ದ ನೂರಜಾನ್ ಗೆ ಸಿಕ್ಕಿದ್ದು ವಕೀಲ ವೃತ್ತಿ ಜೊತೆಗೆ ಪತ್ರಕರ್ತರಾಗಿರುವ ಇನಾಯುತ್ ವುಲ್ಲಾ, ಹಾಗೂ ಬಿಎಂ ಸಿದ್ದಲಿಂಗಸ್ವಾಮಿ..
ಎದೆಯ ಹಾಲು ಹೆಚ್ಚಾಗಿ ನೂರುಜಾನ್ ಗೆ ಅನಾರೋಗ್ಯ…!
ಡೈ ವೋರ್ಸ್ ಕೊಟ್ಟು ಮಗು ಕರೆದುಕೊಂಡು ಹೋಗು..!
ತಂದೆಯೆ ಮಗುವನ್ನ ಕರೆದುಕೊಂಡು ಹೋದರೆ ಕಿಡ್ನಾಪ್ ಆಗೋದಿಲ್ಲ, ಆದರೆ ಇಲ್ಲಿ ಕಿಡ್ನಾಪ್ ಎಂದು ಆರೋಪಿಸಿದ್ದು ನೂರುಜಾನ್, ಇತ್ತ ಮಗುವಿಗೆ ಎದೆ ಹಾಲು ಉಣಿಸದೇ ಇರೋದ್ರಿಂದ ತಾಯಿಗೆ ಹಾಲು ಹೆಚ್ಚಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು, ಮಗುವಿನ ನೆನಪಲ್ಲಿ ಮಾನಸಿಕವಾಗಿ ನೊಂದು, ಶಿಕ್ಷಕಿ ವೃತ್ತಿ ಬಿಟ್ಟಿದ್ದಳು, ಇದೆ ವೇಳೆ ಮಗು ಬೇಕಿದ್ದರೆ ಡೈವೋರ್ಸ್ ಕೊಟ್ಟು ಮಗು ತೆಗೆದುಕೊಂಡು ಹೋಗು ಅಂತ ಪಾಪಿ ಪತಿ ಹೇಳಿದ್ದನಂತೆ, ತೀವ್ರ ಆತಂಕಗೊಂಡು ನೂರಜಾನ್ ತನ್ನ ಮಗು ಕೊಡಿಸುವಂತೆ ಕೋರ್ಟ್ ಮೊರೆ ಇಟ್ಟಿದ್ದಾಳೆ, ಇದು ವಿಶೇಷ ಪ್ರಕರಣ ಎಂದು ಕೋರ್ಟ್ ಗೆ ವಕೀಲರು ಮತ್ತು ಪತ್ರಕರ್ತರಾದ ಇನಾಯುತ್ ವುಲ್ಲಾ, ಹಾಗೂ ಬಿಎಂ ಸಿದ್ದಲಿಂಗಸ್ವಾಮಿ ಮನವರಿಕೆ ಮಾಡಿಕೊಟ್ಟಿದ್ದಾರೆ, ಪತಿ, ಪತ್ನಿಯ ದಾಖಲಾತಿಗಳು ಉತ್ತರ ಪ್ರದೇಶದ ಅಡ್ರೆಸ್ ನಲ್ಲಿ ಇದ್ದಿದ್ದು ಮತ್ತಷ್ಟು ತಲೆ ನೋವಿಗೆ ಕಾರಣವಾಗಿತ್ತು..
