POWER SAMACHARA | KANNADA NEWS | BREKING NEWS| 03-06-2023

ದಾವಣಗೆರೆ : 2 ಸಾವಿರ ರೂ. ನೋಟು ಚಲಾವಣೆ ಸಂಬಂಧ ವಾಗ್ವಾದ ನಡೆದು ಕೊನೆಯಲ್ಲಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ನಗರದ ಶಾಮನೂರು ಬಳಿ ಇರುವ ಮಹಾನಂದಿ ಸರ್ವಿಸ್ ಸ್ಟೇಷನ್ ಬಂಕ್ ನಲ್ಲಿ ನಡೆದಿದೆ..

2 ಸಾವಿರ ರೂಪಾಯಿ ನೋಟು ಚಲಾವಣೆಯಲ್ಲಿದೆ ಅಂದಿದ್ದಕ್ಕೆ ಗ್ರಾಹಕನ ಮೇಲೆ ಪೆಟ್ರೋಲ್ ಬಂಕ್ ಸಿಬ್ಬಂದಿ ಓರ್ವ ಇಟ್ಟಿಗೆಯಿಂದ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ..

ಪೆಟ್ರೋಲ್ ಬಂಕ್ ನಲ್ಲಿ 2 ಸಾವಿರ ನೋಟು ಚಲಾವಣೆಯಲ್ಲಿ ಇಲ್ಲ ಅಂತ ಬೋರ್ಡ್ ಹಾಕಲಾಗಿತ್ತು, ಈ ರೀತಿ ಬೋರ್ಡ್ ಹಾಕಿದ್ದು ತಪ್ಪು, ನೋಟು ಚಲಾವಣೆಯಲ್ಲಿದೆ, ನೀವು ಬ್ಯಾಂಕಿಗೆ ಹಾಕಿಕೊಳ್ಳಿ ಎಂದು ಸ್ಥಳಿಯ ಪತ್ರಿಕೆ ವರದಿಗಾರನೋರ್ವ ತಿಳಿಸಿದ್ದು, ಗ್ರಾಹಕನ ಮಾತಿಗೆ ಕೆರಳಿದ ಬಂಕ್ ಸಿಬ್ಬಂದಿ ಇಟ್ಟಿಗೆಯಿಂದ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ, ನಂತರ ಸಮಾಧಾನಪಡಿಸಲಾಗಿದೆ ಎಂದು ತಿಳಿದು ಬಂದಿದೆ, ಇನ್ನೂ ಬಂಕ್ ಸಿಬ್ಬಂದಿ ಹಲ್ಲೆಗೆ ಯತ್ನಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ..