POWER SAMACHARA | KANNADA NEWS | BREKING NEWS| 03-04-2024
ದಾವಣಗೆರೆ: ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ ಎಂಬ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ವಿಶೇಷವಾಗಿ ದಾವಣಗೆರೆಯಲ್ಲಿ ಹೋರಾಟ ನಡೆಸಿದೆ..
ನಗರದ ಜಯದೇವ ವೃತ್ತದಲ್ಲಿ ಶಾಮಿಯಾನ ಹಾಕಿ ಸಿಲಿಂಡರ್ ಇಟ್ಟು, ತರಕಾರಿ ಕಟ್ ಮಾಡಿ ಅಡುಗೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಅಡುಗೆಗೂ ಸಿದ್ಧ, ಜನಸೇವೆಗೂ ಬದ್ಧ ಎಂಬ ಹೆಸರಿನಲ್ಲಿ ಆಂದೋಲನ ಮಾಡಲಾರಂಭಿಸಿದ್ದು, ಜಯದೇವ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು ಅಡುಗೆ ಮಾಡಿ ಡಿಫರೆಂಟ್ ಆಗಿ ಪ್ರತಿಭಟಿಸಿದರು. ಶಾಮನೂರು ಶಿವಶಂಕರಪ್ಪರು ಕೂಡಲೇ ದೇಶದ ಎಲ್ಲಾ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತೆಯರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಅಡುಗೆಗೆ ಲಾಯಕ್ಕು ಎಂಬ ಮಾತು ಆಡುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಡೀ ಮಹಿಳಾ ಸಮುದಾಯ ಅವಮಾನಿಸಿದ್ದಾರೆ. ಯಾರೇ ಆಗಲಿ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಹೇಳಿಕೆ ನೀಡಬಾರದು, ಮಾತನಾಡಬಾರದು. ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಿದರೆ ಎಲ್ಲರೂ ಊಟ ಮಾಡಲು ಸಾಧ್ಯ. ಇದನ್ನು ಅವರು ಅರಿತು ಕೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಎಸ್. ಟಿ. ವೀರೇಶ್, ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಕೆ. ಬಿ. ಕೊಟ್ರೇಶ್, ದೂಡಾ ಮಾಜಿ ಅಧ್ಯಕ್ಷ ಎ. ವೈ. ಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲ ಕುಮಾರ್ ನಾಯ್ಕ, ಕೆ.ಎನ್.ಕಲ್ಲೇಶ್, ಶಂಕರ್ ಗೌಡ ಬಿರಾದಾರ, ಕುಂಬಾರ ನಾಗರಾಜ್, ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್, ಗಾಯತ್ರಿ ಖಂಡೋಜಿರಾವ್, ಗೌರಮ್ಮ, ದೇವಿರಮ್ಮ, ಯಶೋಧ, ದ್ರಾಕ್ಷಾಯಣಮ್ಮ, ಸುಧಾ ಜಯರುದ್ರೇಶ್,
ರೇಣುಕಾ ಶ್ರೀನಿವಾಸ್, ರೂಪಾ ಕಾಟೆ, ಜ್ಯೋತಿ ಸಿದ್ದೇಶ್, ನಾಗರತ್ನ ಕಾಟೆ, ಪುಪ್ಟಾ ದುರುಗೇಶ್, ಗಾಯತ್ರಿ ಖಂಡೋಜಿರಾವ್, ಮಹೇಂದ್ರ ಸೇರಿದಂತೆ ಮತ್ತಿತರರಿದ್ದರು.