<strong>POWER SAMACHARA | KANNADA NEWS | BREKING NEWS| 30-08-2024</strong> <strong>ದಾವಣಗೆರೆ:</strong> ಚುನಾವಣೆಯಲ್ಲಿ ಆಮಿಷಾ ಒಡ್ಡಿ ಗೆಲುವು ಸಾಧಿಸಿದ್ದಾರೆ ಎಂದು ಕೆಲವರು ಕೋರ್ಟ್ ಮೊರೆ ಹೋಗಿದ್ದಕ್ಕಾಗಿ ಹೈಕೋರ್ಟ್ ನೋಟಿಸ್ ನೀಡಿದ ವಿಚಾರವಾಗಿ ದಾವಣಗೆರೆಯಲ್ಲಿ ಮೊದಲ ಭಾರೀಗೆ ಪ್ರತಿಕ್ರಿಯಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇರುವುದನ್ನು ನಾನು ಚುನಾವಣೆಯಲ್ಲಿ ಹೇಳಿದ್ದೇನೆ, ಪ್ರಣಾಳಿಕೆಯಲ್ಲಿರುವುದನ್ನು ಜನ್ರೀಗೆ ತಿಳಿಸಿದ್ದೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಇರುವ ಅಂಶಗಳನ್ನು ಈಡೇರಿಸುತ್ತೇವೆ ಎಂದು ಹೇಳಿದ್ದೇ, ಅದರೆ ಈ ವಿಚಾರವನ್ನು ಅಂದು ವಿರೋಧಿಸದೆ ಇಂದು ವಿರೋಧಿಸುತ್ತಿರುವುದು ಏಕೆ ಎಂದು ಪರೋಕ್ಷವಾಗಿ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ದ ಕಿಡಿಕಾರಿದ್ದಾರೆ.... <img class="aligncenter wp-image-3071 size-full" src="https://powersamachara.com/wp-content/uploads/2024/08/gayathri-vs-prabha.jpg" alt="" width="748" height="548" /> ಇದು ರಾಜ್ಯ ಸರ್ಕಾರದ ಯೋಜನೆ ಅಲ್ಲ, ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂತು ಎಂದರೆ ಯುವಕರಿಗೆ, ಮಹಿಳಾ, ರೈತರಿಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಹೇಳಲಾಗಿತ್ತು. ಸೋತಾದ ಬಳಿಕ ಅವರು ಅವರದ್ದೇ ಹೇಳುತ್ತಿದ್ದಾರೆ, ನೋಡೊಣ ಏನ್ ಆಗುತ್ತೋ ಎಂದರು. ಜನ್ರೀಗೆ ಗೊತ್ತಿದೆ, ಅವರು ಸೋತಾದ ಮೇಲೆ ಈ ರೀತಿ ಮಾತನಾಡುವುದು ಸರಿಯಲ್ಲ, ಹೈಕೋರ್ಟ್ ನೋಟಿಸ್ ಬಗ್ಗೆ ನಾನು ಮಾತನಾಡುವುದಿಲ್ಲ, ನನಗೆ ನೋಟಿಸ್ ಕೊಟ್ಟಿಲ್ಲ, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಸಹ ಮೂರು ಭಾರೀ ಸೋತಿದ್ದಾರೆ, ಇಪ್ಪತ್ತೈದ ವರ್ಷಗಳ ಬಳಿಕ ಕಾಂಗ್ರೆಸ್ ಗೆದ್ದಿದೆ, ಯಾಕೆ ಸೋತೆವು ಅನ್ನೋದು ಅವರು ಮನನ ಮಾಡಿಕೊಳ್ಳಬೇಕು ಎಂದರು.. <h3><strong>ಸಿದ್ದರಾಮಯ್ಯ ಅವರಿಗೆ ಜಯ ಸಿಗಲಿದೆ..</strong></h3> ಸಿದ್ದರಾಮಯ್ಯ ಅವರಿಗೆ ಜಯ ಸಿಗಲಿದೆ. ಅವರ ಪರ ನಾವಿದ್ದೇವೆ, ಆದ್ರೇ ಪ್ರಾಸಿಕ್ಯೂಶನ್ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಪರ ಇಡೀ ಹೈಕಮಾಂಡ್ ನಿಂತಿದೆ ಎಂದರು..