POWER SAMACHARA | KANNADA NEWS | BREKING NEWS| 01-10-2023..
ದಾವಣಗೆರೆ: ವಾಲ್ಮೀಕಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಜಿ ಮೇಲೆ ಹಲವು ಗಂಭೀರ ಆರೋಪ ಹಿನ್ನಲೆ ವಾಲ್ಮೀಕಿ ಶ್ರೀಗಳ ಡಿ ಎನ್ ಎ ಟೆಸ್ಟ್ ನಡೆಸಲು ಇಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಬೃಹತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ..
ಸ್ವಾಮೀಜಿ ಅನಧಿಕೃತವಾಗಿ ಮದುವೆಯಾಗಿದ್ದಾರೆ, ಮಕ್ಕಳಿದ್ದಾರೆ, ಎಂದು ಭಕ್ತರಿಂದ ಅಸಮಾಧಾನ ವ್ಯಕ್ತವಾಗಿತ್ತು, ಜೊತೆಗೆ ಮಠದಲ್ಲಿ ಅಕ್ರಮ ಚಟುವಟಿಕೆ, ಮಠದ ಆಸ್ತಿಯಲ್ಲಿ ಭ್ರಷ್ಟಾಚಾರ, ಆಡಳಿತ ಮಂಡಳಿಯಿಂದ ದುರಾಡಳಿತ ನಡೆಯುತ್ತಿದೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು, ಈ ಹಿನ್ನಲೆ ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗೊಂದಲದ ಹೇಳಿಕೆ ಕುರಿತಾಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ವಾಲ್ಮೀಕಿ ಶ್ರೀ ಸಮಾಜಕ್ಕೆ ಬಹಳಷ್ಟು ಕೆಲಸ ಮಾಡಿದ್ದಾರೆ, ಮೀಸಲಾತಿ ಪಡೆಯಲು ನಿರಂತರ ಧರಣಿ ಕೂತಿದ್ದಾರೆ, ಎತ್ತರದ ಸ್ಥಾನದಲ್ಲಿದ್ದಾಗ ಆರೋಪಗಳು ಸಾಮಾನ್ಯ, ಎಲ್ಲರನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ಕಷ್ಟಕರ ಕೆಲಸವಾಗಿದೆ, ಸ್ವಾಮೀಜಿ ಮೇಲೆ ಗಂಭೀರ ಆರೋಪಗಳಿಗೆ ಸ್ವಾಮೀಜಿಗಳೇ ಸೂಕ್ತ ಉತ್ತರ ಕೊಟ್ಟಿದ್ದಾರೆ, ಸ್ವಾಮೀಜಿ ಮದುವೆ ಮಕ್ಕಳ ಬಗ್ಗೆ ಆರೋಪ ಮಾಡಲಾಗಿದೆ, ಈ ಆರೋಪದಿಂದ ಮುಕ್ತವಾಗಲು ಡಿಎನ್ ಎ ಟೆಸ್ಟ್ ಮಾಡಿಸೋಣ, ಡಿಎನ್ ಎ ಟೆಸ್ಟ್ ಮಾಡಿಸಿದರೆ ಆರೋಪದ ಸತ್ಯಾಸತ್ಯತೆ ಗೊತ್ತಾಗಲಿದೆ, ಅದನ್ನು ಯಾವ ರೀತಿ ಮಾಡಿಸಬೇಕಾಗುತ್ತದೆ ಎಂಬ ಬಗ್ಗೆ ಟ್ರಸ್ಟ್ ನಲ್ಲಿ ಚರ್ಚಿಸಬೇಕಿದೆ, ಮೊದಲು ನಾವೇ ದೂರು ಕೊಡಬೇಕಾ ಏನೂ ಎತ್ತ ಅಂತಾ ನಿರ್ಧಾರ ಕೈಗೊಳ್ಳಬೇಕಿದೆ, ಮೂರು ತಿಂಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆಯಾಗಬೇಕಿದೆ ಎಂದ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಎಲ್ಲವು ಮುಕ್ತ ಮುಕ್ತ..!
ಇನ್ನೂ ಈ ಕುರಿತು ಸಭೆಯಲ್ಲಿ ಮಾತನಾಡಿದ ವಾಲ್ಮೀಕಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಜಿ, ಸುಖಾಸುಮ್ಮನೆ ಫೆಸ್ ಬುಕ್, ವಾಟ್ಸಾಪ್ ಗಳಲ್ಲಿ ಮಾನಹಾನಿ, ಸುಳ್ಳು ಆರೋಪ ಮಾಡಲಾಗುತ್ತಿದೆ, ಎಲ್ಲದಕ್ಕೂ ಮುಕ್ತವಾಗಿದ್ದೇವೆ, ಯಾವುದೇ ಅಕ್ರಮ ಮತ್ತೊಂದು ನಡೆದಿಲ್ಲ, ಧರ್ಮದರ್ಶಿಗಳು ಈ ಕುರಿತು ಏನೂ ಬೇಕಾದರು ನಿರ್ಣಯ ತೆಗೆದುಕೊಳ್ಳಲಿ ಎಂದರು..