POWER SAMACHARA | KANNADA NEWS | BREKING NEWS| 20-11-2023..
ದಾವಣಗೆರೆ: ಮುರುಘಾ ಮಠದ ಹಾಸ್ಟೆಲ್ನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಶ್ರೀ ಒಂದು ವರ್ಷ ಎರಡೂವರೆ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಬೇಲ್ ಮೇಲೆ ಬಿಡುಗಡೆಗೊಂಡ ನಾಲ್ಕೇ ದಿನಕ್ಕೆ ಸೋಮವಾರ ಮಧ್ಯಾಹ್ನ ಮತ್ತೆ ನ್ಯಾಯಾಂಗ ಬಂಧನಕ್ಕೆ ಚಿತ್ರದುರ್ಗ ಕೋರ್ಟ್ ಆದೇಶ ಮಾಡಿತ್ತು, ಚಿತ್ರದುರ್ಗ ಪೊಲೀಸರು ಸಹ ಶಿವಮೂರ್ತಿ ಶ್ರೀಯನ್ನ ಬಂಧಿಸಿ ಕರೆದೊಯ್ದಿದ್ದರು, ಆದರೆ ಕೊನೆಗಳಿಗೆ ಬಂಧನಕ್ಕೆ ಟ್ವಸ್ಟ್ ಸಿಕ್ಕಿದೆ..
ಹೌದು..ಮುರುಘಾ ಮಠದ ಮಹಿಳಾ ವಿದ್ಯಾರ್ಥಿ ನಿಯಲಯದ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪದಡಿ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು, ಈ ದೂರಿನ ಆಧಾರದ ಮೇಲೆ ನಜರ್ಬಾದ್ ಪೊಲೀಸ್ ಠಾಣೆ ಅ.ಸಂ:155/2022 ಕಲಂ:-376(2) (ಎನ್) 376(3) ರೆ/ವಿ 149 ಐಪಿಸಿ ದಾಖಲಾಗಿತ್ತು. ಐಪಿಸಿ ಮತ್ತು ಕಲಂ:5(ಎಲ್) 6, 17, ಫೋಕ್ಸೋ ಆಕ್ಟ್-2012 ಅಡಿ ಪ್ರಕರಣ ದಾಖಲಾಗಿತ್ತು, ಪ್ರಕರಣವನ್ನು ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರಕರಣ ವರ್ಗಾವಣೆ ನೀಡಿದ್ದರು, ಘಟನೆಗೆ ಸಂಬಂಧಿಸಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಫೋಕ್ಸ್ ಆಕ್ಟ್-2012ರ ಅಡಿ ಪ್ರಕರಣ ದಾಖಲಾಗಿತ್ತು, ಪ್ರಕರಣವನ್ನೂ ಚಿತ್ರದುರ್ಗ ಉಪವಿಭಾಗದ ಡಿಎಸ್ಪಿ ತನಿಖೆ ನಡೆಸಿದ್ದರು, 2022 ಸೆಪ್ಟೆಂಬರ್ 1 ರಂದು ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀಯನ್ನು ಅರೆಸ್ಟ್ ಮಾಡಿದ್ದರು. ಅರೆಸ್ಟ್ ಮಾಡಿದ ಒಂದು ವಾರದ ಬಳಿಕ ಮತ್ತೊಂದು ಫೋಕ್ಸೋ ಕೇಸ್ ದಾಖಲಾಗಿತ್ತು, ಅದುವೇ ಮಠದ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮಕ್ಕಳ ಮೇಲು ಶಿವಮೂರ್ತಿ ಶ್ರೀ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿತ್ತು, ಒಂದನೇ ಫೋಕ್ಸೋ ಕೇಸ್ ನಲ್ಲಿ ಶಿವಮೂರ್ತಿ ಶ್ರೀಗೆ ಹೈ ಕೋರ್ಟ್ ನಲ್ಲಿ ಬೇಲ್ ಸಿಕ್ಕಿತ್ತು.. ಆದರೆ ಎರಡನೇ ಫೋಕ್ಸೋ ಕೇಸ್ ಕಗ್ಗಂಟಾಗಿ ಕೂತಿತ್ತು, ಶಿವಮೂರ್ತಿ ಚಿತ್ರದುರ್ಗದ ಜೈಲಿನಿಂದ ಬಿಡುಗಡೇ ಕೇವಲ ನಾಲ್ಕೇ ದಿನದಲ್ಲಿ ಮತ್ತೆ ಬಂಧನದ ವಾರೆಂಟ್ ಕೋರ್ಟ್ ಆದೇಶ ನೀಡಿದ್ದು ಸ್ವಾಮಿಜಿ ಮತ್ತೆ ಜೈಲು ಸೇರಿದ್ದಾರೆ..
ಸರ್ಕಾರಿ ಪರ ವಕೀಲರು ಹೇಳಿದ್ದೇನು..!?
ಇನ್ನೂ ಈ ಬಗ್ಗೆ ಮಾತನಾಡಿರುವ ಚಿತ್ರದುರ್ಗ ಕೋರ್ಟ್ ನ ಸರ್ಕಾರಿ ವಕೀಲ ಜಗದೀಶ್, ಶಿವಮೂರ್ತಿ ಸ್ವಾಮಿ ವಿರುದ್ಧದ 2ನೇ ಫೋಕ್ಸೋ ಕೇಸಲ್ಲಿ ಜಾಮೀನು ಪಡೆದಿಲ್ಲ, ಬಂಧನ ವಾರೆಂಟ್ ಜಾರಿಗೆ ನಾವು ಮನವಿ ಸಲ್ಲಿಸಿದ್ದೆವು, ನಮ್ಮ ಮನವಿ ಪುರಸ್ಕರಿಸಿದ ಕೋರ್ಟ್ ಬಂಧನ ವಾರೆಂಟ್ ಜಾರಿಗೊಳಿಸಿದೆ, ಶಿವಮೂರ್ತಿ ಸ್ವಾಮಿ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು, ಹೀಗಾಗಿ ಚಿತ್ರದುರ್ಗ ಪೊಲೀಸರು ಬಂಧಿಸಿ ಜಡ್ಜ್ ಮುಂದೆ ಹಾಜರು ಪಡಿಸಿದ್ರು, ವಿಚಾರಣೆಯಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಿತ್ತು, ಆದೇಶ ಹಿನ್ನಲೆ ಶಿವಮೂರ್ತಿ ಶ್ರೀಗಳನ್ನ ದಾವಣಗೆರೆ ನಗರದ ವಿರಕ್ತ ಮಠದಲ್ಲಿ ಚಿತ್ರದುರ್ಗದ ಪೊಲೀಸರು ಬಂಧಿಸಿ ಆಸ್ಪತ್ರೆಯಲ್ಲಿ ಮೆಡಿಕಲ್ ರಿಪೋರ್ಟ್ ನಡೆಸಿ ನಂತರ ಚಿತ್ರದುರ್ಗ ಕಾರಾಗೃಹಕ್ಕೆ ಕಳುಹಿಸಿ ಬಂದಿದ್ದರು..
ಬಿಡುಗಡೆ ಆದೇಶ ಉಲ್ಟಾಪಟ್ಟ..!
ಮಧ್ಯಾಹ್ನ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಶಿವಮೂರ್ತಿ ಶ್ರೀ ಬಂಧನಕ್ಕೆ ಆದೇಶ ಮಾಡಿತ್ತು, ಆದರೆ ಸಂಜೆ ವೇಳೆ ಹೈ ಕೋರ್ಟ್ ನಿಂದ ಮುರುಘಾ ಶ್ರೀಗಳಿಗೆ ರಿಲೀಫ್ ಸಿಕ್ಕಿದೆ, ಚಿತ್ರದುರ್ಗ ಕೋರ್ಟ್ ನೀಡಿದ್ದ ನ್ಯಾಯಾಂಗ ಬಂಧನಕ್ಕೆ ಹೈ ಕೋರ್ಟ್ ತಡೆ ನೀಡಿದೆ, ಚಿತ್ರದುರ್ಗ ಜೈಲರ್ ಗೆ ಶಿವಮೂರ್ತಿ ಶ್ರೀಯನ್ನ ಬಿಡುಗಡೆ ಮಾಡುವಂತೆ ನ್ಯಾಯಮೂರ್ತಿಗಳಾದ ಸೂರಜ್, ಗೋವಿಂದರಾಜ್ ಪೀಠದಿಂದ ಆದೇಶ ಸಿಕ್ಕು, ಫೋಕ್ಸೋ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ..
ಇವತ್ತು ಒಂದಿನ ಜೈಲು ವಾಸ..
ಒಟ್ಟಾರೆ ಬರೋಬ್ಬರಿ 1ವರ್ಷ ಎರಡೂವರೆ ತಿಂಗಳು ಬಳಿಕ ಮುರುಘಾ ಸ್ವಾಮಿಜಿ ರಿಲೀಸ್ ಆಗಿ ವಿರಕ್ತ ಮಠದ ರೆಸ್ಟ್ ಮಾಡುತ್ತಾ ಇದ್ದರು, ಆದರೆ ಒಮ್ಮೆಲೆ ಸ್ವಾಮಿಜಿ ಅರೆಸ್ಟ್ ಅಂತಾ ಆದೇಶ ಆಗಿದ್ದು, ಎಲ್ಲರಿಗೂ ಶಾಕ್ ಆಗಿತ್ತು, ಮತ್ತೆ ಸಂಜೆ ವೇಳೆ ಬಿಡುಗಡೆಗೆ ಹೈ ಕೋರ್ಟ್ ಆದೇಶ ನೀಡಿದ್ದು, ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿದಂತಾಗಿತ್ತು, ಇನ್ನೂ ಇಂದು ಬಿಡುಗಡೆ ಮಾಡಲು ಸಮಯ ಆಗಿರೋದ್ರಿಂದ ಇವತ್ತು ಒಂದಿನ ಸ್ವಾಮಿಜಿ ಜೈಲು ವಾಸ ಅನುಭವಿಸುವ ಲಕ್ಷಣ ಇದ್ದು, ನಾಳೆ ಬಿಡುಗಡೆ ಆಗ್ತಾರ ಅಥವಾ ಮತ್ತೆ ಪಿಪಿ ಅಬ್ಜಕ್ಷನ್ ಹಾಕ್ತಾರ ಕಾದು ನೋಡಬೇಕಿದೆ..