POWER SAMACHARA | KANNADA NEWS | BREKING NEWS| 14-10-2023..
ದಾವಣಗೆರೆ: ಶಿವಮೊಗ್ಗ ರಾಗಿಗುಡ್ಡದಲ್ಲಿ ನಡೆದ ಕೋಮು ಕಿಚ್ಚು ಹಾರುವ ಮುನ್ನವೇ ಬೆಣ್ಣೆನಗರಿಯಲ್ಲಿ ದ್ವೇಷದ ಬೆಂಕಿ ಹೊತ್ತಿದೆ, ನಮ್ಮ ಏರಿಯಾದಲ್ಲಿ ಗಣೇಶ ಮೆರವಣಿಗೆ ನಡೆಸಬೇಡಿ ಎಂದು ಅನ್ಯ ಕೋಮಿನ ಜನರು ತಡೆದಿದ್ದಕ್ಕೆ ವಾಗ್ವಾದ, ತಳ್ಳಾಟ ನಡೆದಿದ್ದು, ರಾಜಕೀಯ ತಿರುವು ಪಡೆದಿದೆ..
ಈ ಘಟನೆ ನಡೆದಿದ್ದು ಬೆಣ್ಣೆನಗರಿ ದಾವಣಗೆರೆಯಲ್ಲಿ. ಹೌದು.. ಸೌಹಾರ್ದಯುತವಾಗಿ ನಡೆಯಬೇಕಿದ್ದ ಹಬ್ಬಗಳು ಇಂದು ಕೋಮು ದ್ವೇಷ, ರಾಜಕೀಯ ಜಿದ್ದಿಯಲ್ಲಿ ಮುಳುಗಿ ಹೋಗಿವೆ, ಯೆಸ್ ದಾವಣಗೆರೆಯಲ್ಲಿ ಆಗಿದ್ದು ಇದೇ, ಮೊನ್ನೆಯಷ್ಟೆ ಕೇಸರಿ ಧ್ವಜ ಕಟ್ಟಲು ಹೋಗಿದ್ದ ದಾವಣಗೆರೆ ನಗರದ ಬಸವರಾಜ್ ಪೇಟೆಯ ಪೃಥ್ವಿರಾಜ್ ಎಂಬ ಯುವಕ ಕ್ರೇನ್ ಗೆ ಸಿಲುಕಿ ಸಾವನ್ನಪ್ಪಿದ್ದ, ನಿನ್ನೆ ದಿನ ಪೃಥ್ವಿರಾಜ್ ಅಂತ್ಯಸಂಸ್ಕಾರ ನಡೆದಿತ್ತು, ನಿನ್ನೆ ದಿನವೇ ಪಕ್ಕದ ಏರಿಯಾದ ಮಹಾರಾಜ ಗಣೇಶ ಸಮಿತಿಯಿಂದ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು, ಪೃಥ್ವಿರಾಜ್ ಸಾವನ್ನಪ್ಪಿದ್ದ ಹಿನ್ನಲೆ ಅವರ ಮನೆಯ ಮುಂಭಾಗ ಮೆರವಣಿಗೆ ಹೋಗುವುದು ಬೇಡ ಎಂದು ಪಕ್ಕದ ಏರಿಯಾದಲ್ಲಿ ಮೆರವಣಿಗೆ ನಡೆಸಲು ಆಯೋಜಕರು ತೀರ್ಮಾನಿಸಿ ನಾಸೀರ್ ಮೆಡಿಕಲ್ ಶಾಪ್ ರಸ್ತೆಯಲ್ಲಿ ಮೆರವಣಿಗೆ ಹೋಗಿದೆ, ಇಲ್ಲಿದ್ದ ಮುಸ್ಲಿಂ ಯುವಕರ ಗುಂಪು ಈ ಏರಿಯಾದಲ್ಲಿ ಮೆರವಣಿಗೆ ನಡೆಸಬೇಡಿ ಎಂದು ವಾಗ್ವಾದ ನಡೆಸಿದ್ದು, ಕೆಲವೊತ್ತು ಎರಡು ಗುಂಪುಗಳ ನಡುವೆ ತಳ್ಳಾಟ, ನೂಕಾಟ ನಡೆದಿದೆ ಎನ್ನಲಾವಿದೆ, ಈ ವೇಳೆ ಕಲ್ಲು ತೂರಾಟ ಮಾಡಿ, ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಪರ ಮುಖಂಡರು ದೂರಿದ್ದಾರೆ..
ಘಟನೆ ಹಿನ್ನಲೆ ರೊಚ್ಚಿಗೆದ್ದ ಹಿಂದೂ ಪರ ಮುಖಂಡರು, ಕಾರ್ಯಕರ್ತರು ದಾವಣಗೆರೆಯಲ್ಲಿ ಬೃಹತ್ ಹೋರಾಟ ನಡೆಸಿದ್ರು, ಬಡಾವಣೆ ಪೊಲೀಸ್ ಠಾಣೆ ಎದುರು ಎಸ್ಪಿ ಬರಲೇ ಬೇಕು ಎಂದು ಧರಣಿ ಕೂತರು, ಹಿಂದೂ ರಾಷ್ಟ್ರದಲ್ಲಿ ಗಣೇಶ ಮೆರವಣಿಗೆ ಮಾಡುವುದೇ ತಪ್ಪಾ, ಅನ್ಯಕೋಮಿನ ಜನರು ನಮ್ಮ ಹಬ್ಬಗಳನ್ನು ವಿರೋಧಿಸಿದ್ದಾರೆ, ದಾವಣಗೆರೆಯಲ್ಲಿ ತಾಲಿಬಾನ್ ಸಂಸ್ಕೃತಿ ಆರಂಭವಾಗಿದಿಯಾ ? ಮೊಹರಂ ಹಾಗೂ ಈದ್ ಮಿಲಾದ್ ವೇಳೆ ಮುಸ್ಲಿಂ ರು ಬಾವುಟಗಳನ್ನ ಕಟ್ಟಿದ್ದರು, ಅವುಗಳಿಗೆ ನಾವು ವಿರೋಧ ಮಾಡಲಿಲ್ಲ, ಆದರೆ, ನಾವು ಗಣಪತಿ ಮೆರವಣಿಗೆ ಮಾಡುತ್ತಿದ್ದರೆ ಅಡ್ಡಿ ಪಡಿಸಿದ್ದಾರೆ, ಡಿಜೆ ಹಾಕಿದ್ದ ಯುವಕರಿಗೆ ತೊಂದರೆ ಮಾಡಿದ್ದಾರೆ, ದಾವಣಗೆರೆಯಲ್ಲಿ ತಾಲಿಬಾನ್ ಸಂಸ್ಕೃತಿ ಸೃಷ್ಟಿಯಾಗಿದೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ರೀತಿಯಾಗುತ್ತಿದೆ, ಇದಕ್ಕೆ ಸರ್ಕಾರ ಕೂಡ ಕುಮ್ಮಕ್ಕು ನೀಡುತ್ತಿದೆ, ಪೊಲೀಸರು ಮುಸ್ಲಿಂ ಬೆಂಬಲಿಗರಂತೆ ವರ್ತನೆ ಮಾಡಿದ್ದಾರೆ ಎಂದು ಹಿಂದೂ ಪರ ಕಾರ್ಯಕರ್ತರು ಆರೋಪ ಮಾಡಿದ್ದಾರೆ, ಇನ್ನೂ ಘಟನಾ ಸ್ಥಳದಲ್ಲೇ ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕಾರ್ಯಕರ್ತರು ಹೊರಟರು, ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಎಸ್ಪಿ, ಮನವಿ ಸ್ವೀಕಾರ ಮಾಡಿದರು, ಘಟನೆಗೆ ಕಾರಣವಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು..
ಒಟ್ಟಾರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆ ಬೂದಿ ಮುಚ್ಚಿದ ಕೆಂಡದಂತಾಗಿದೆ, ನಾಳೆ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಮೆರವಣಿಗೆ ಇದ್ದು ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ..