POWER SAMACHARA | KANNADA NEWS | BREKING NEWS| 16-10-2023..
ದಾವಣಗೆರೆ : ಐದು ವರ್ಷದ ಮಗಳನ್ನೂ ಸೊಂಟಕ್ಕೆ ಕಟ್ಟಿಕೊಂಡ ತಾಯಿ ಸೂಳೆಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಈ ಘಟನೆ ನಡೆದಿದ್ದು, ಕವಿತಾ (27) ಹಾಗೂ ನಿಹಾರಿಕಾ (05) ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು ಎಂದು ಗುರುತಿಸಲಾಗಿದೆ..
ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರ ಪತ್ನಿ ಕವಿತಾ ಎಂದು ಹೇಳಲಾಗಿದೆ, ಕಳೆದ ಶುಕ್ರವಾರ ಮಗಳು ನಿಹಾರಿಕಾಳೊಂದಿಗೆ ಕವಿತಾ ಕಾಣೆಯಾಗಿದ್ದಳು, ಈ ಬಗ್ಗೆ ಕವಿತಾ ಪತಿ ಮಂಜುನಾಥ್ ದೂರು ನೀಡಿದ್ದರು, ಆದರೆ ಇಂದು ಸೂಳೆಕೆರೆಯಲ್ಲಿ ತಾಯಿ ಮಗಳ ಶವ ಪತ್ತೆಯಾಗಿದೆ, ಮಗಳನ್ನು ಸೊಂಟಕ್ಕೆ ವೇಲ್ ನಿಂದ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ..
ಎರೇಹಳ್ಳಿಯ ಕವಿತಾ ಹೊನ್ನೆಬಾಗಿಯ ಮಂಜುನಾಥ್ ನೊಂದಿಗೆ 6ವರ್ಷದ ಹಿಂದೆ ಮದ್ವೆ ಆಗಿತ್ತು, ದಂಪತಿಗಳಿಗೆ ಐದು ವರ್ಷದ ನಿಹಾರಿಕಾ ಎಂಬ ಮಗಳಿದ್ದಳು, ಕಳೆದ ಕೆಲ ವರ್ಷಗಳಿಂದ ಪತಿ ಮತ್ತು ಆತನ ಕುಟುಂಬ ದಿಂದ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಆರೋಪ ಇತ್ತು ಎನ್ನಲಾಗಿದೆ, ಪತಿ ಹಾಗೂ ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಕವಿತಾಳ ಮನೆಯವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..