POWER SAMACHARA | KANNADA NEWS | BREKING NEWS| 10-01-2024
ಚಿತ್ರದುರ್ಗ; ಕಣ್ಣು ಹರಿಯದಿದ್ದಡೇನು, ಕರಳು ಹರಿಯದೇ ಎಂಬ ಮಾತಿದೆ, ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಲೋಕರೂಢಿ ಮಾತು ಕೂಡ ಇದೆ ಆದರೆ ಇಲ್ಲೊಬ್ಬ ರಾಕ್ಷಸಿ ತಾಯಿ ತನ್ನ ಕಂದನನ್ನೆ ಕತ್ತು ಹಿಸುಕಿ ಕೊಂದು ಬಿಟ್ಟಿದ್ದಾಳೆ. ಯಾವ ಹೆತ್ತ ತಾಯಿಯೇ ಆಗಲಿ, ಹೆತ್ತ ಮಕ್ಕಳನ್ನು ಸಾಯಿಸುವ ಹಂತಕ್ಕೆ ಹೋಗುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಏನು ಹರಿಯದ ಕಂದನನ್ನು ಕೊಂದೆ ಬಿಟ್ಟಿದ್ದಾಳೆ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರ ಈ ಸ್ಟೋರಿ ನೋಡಿ..
ಗೋವಾ ಟ್ರಿಪ್ ಗೆ ಅಂತ ತನ್ನ ಮಗುವನ್ನ ಕರೆದುಕೊಂಡು ಹೋಗಿದ್ದ ತಾಯಿ, ಬರುವಾಗ ತನ್ನ ಕಂದಮ್ಮನನ್ನು ಕೊಂದು ಸೂಟ್ಕೇಸ್ ನಲ್ಲಿ ತುಂಬಿಕೊಂಡು ಬೆಂಗಳೂರಿಗೆ ವಾಪಸ್ ಆಗುವಾಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ. ಕೊಲ್ಕತ್ತಾ ಮೂಲದ ಸುಚನಾ ಸೇಠ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಬಳಿಕ ಮೈಂಡ್ ಫುಲ್ ಎಐ ಲ್ಯಾಬ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸ್ತಿದ್ಲು. ಕಳೆದ ಎರಡ್ಮೂರು ವರ್ಷಗಳ ಹಿಂದೆ ಗಂಡ ಹೆಂಡತಿ ಮಧ್ಯೆ ಕೌಟುಂಬಿಕ ಕಲಹದ ಕಾರಣ ಗಂಡ ವೆಂಕಟರಾಮನ್ ಗೆ ಡಿವೋರ್ಸ್ ನೀಡಿದ್ದಳು ಎನ್ನಲಾಗಿದೆ. ಆ ಬಳಿಕ ನಾಲ್ಕು ವರ್ಷದ ಮಗನ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದ ಸುಚನ ಕಳೆದ ವಾರ ಗೋವಾ ಗೆ ಟ್ರಿಪ್ ಹೋಗಿದ್ದಾಳೆ. ಗೋವಾದ ಸೋಲ್ ಬ್ಯಾನಿಯನ್ ಗ್ರ್ಯಾಂಡ್ ಅಪಾರ್ಟ್ಮೆಂಟ್ ನಲ್ಲಿ ಶನಿವಾರ ಈಕೆ ವಾಸ್ತವ್ಯ ಹೂಡಿದ ವೇಳೆ ಮಗನನ್ನು ಕೊಂದು ಪರಾರಿಯಾಗಲು ಹೋಗಿ ಈಗ ಪೊಲೀಸರಿಗೆ ಲಾಕ್ ಆಗಿದ್ದಾಳೆ.
ಇನ್ನೂ ಅಪಾರ್ಟ್ಮೆಂಟ್ ನಲ್ಲಿ ಉಳಿದಿದ್ದ ಸುಚನಾ ನಿನ್ನೆ ಅಪಾರ್ಟ್ಮೆಂಟ್ ಚೆಕ್ ಔಟ್ ಮಾಡುತ್ತೇನೆ ಎಂದು ಹೇಳಿದ್ದಾಳೆ. ಆಗ ಹೋಟೆಲ್ ಸಿಬ್ಬಂದಿ ಒಪ್ಪಿ ಚೆಕ್ ಔಟ್ ಮಾಡುವ ವೇಳೆ ತಮ್ಮ ಮಗ ಎಲ್ಲಿ ಎಂದು ಕೇಳಿದ್ದಾರೆ. ಆಗ ಸುಚನಾ ತಮ್ಮ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ಹೇಳಿದ್ದಾರೆ. ಓಕೆ ಎಂದ ಹೋಟೆಲ್ ಸಿಬ್ಬಂದಿ ಮೇಡಂ ಬೆಂಗಳೂರಿಗೆ ಪ್ಲೈಟ್ ಬುಕ್ ಆಗಿದೆ ನಿಮಗೆ ಎಂದು ಹೇಳಿದ್ದಾರೆ. ಆದರೂ ಆಕೆ ಒಪ್ಪದೇ ಕಾರಿನಲ್ಲಿ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆಗ ಅಪಾರ್ಟ್ಮೆಂಟ್ ಸಿಬ್ಬಂದಿ ಅನುಮಾನದಲ್ಲಿ ಕಾರ್ ಬುಕ್ ಮಾಡಿ ಕಳಿಸಿದ್ದಾರೆ. ಬಳಿಕ ಸುಚನ ಉಳಿದಿದ್ದ ಕೊಠಡಿಗೆ ಹೋಗಿ ನೋಡಿದಾಗ ರಕ್ತದ ಕಲೆಗಳು ಕಂಡು ಬಂದಿದ್ದು, ಕೂಡಲೇ ಸ್ಥಳೀಯ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗೋವಾ ಪೊಲೀಸರು ಟ್ಯಾಕ್ಸಿ ಡ್ರೈವರ್ ನ ಸಂಪರ್ಕಿಸಿ, ಹತ್ತಿರದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡುವಂತೆ ಸೂಕ್ಷ್ಮವಾಗಿ ತಿಳಿಸಿದಾಗ. ಹತ್ತಿರದಲ್ಲಿ ಇದ್ದ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆಗೆ ಬಂದು ಕಾರು ನಿಲ್ಲಿಸಿ, ಮಾಹಿತಿ ನೀಡಿದ ಹಿನ್ನಲೆ ಕಾರಿನಲ್ಲಿದ್ದ ಸೂಟ್ಕೇಸ್ ಪರಿಶೀಲನೆ ನಡೆಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿ, ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೇರಳ ಮೂಲದ ವೆಂಕಟರಮಣ ಹಾಗೂ ಕೋಲ್ಕತ್ತಾದ ಸುಚನಾ ಸೇಥ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಪರಿಚಯವಾಗಿ 2010ರ ನವೆಂಬರ್ನಲ್ಲಿ ಮದುವೆಯೂ ಆಗಿತ್ತು. ಇದಾದ ನಂತರ ವೆಂಕಟರಮಣ ಹೊರ ದೇಶಕ್ಕೆ ಹೋಗಿರುವುದು ನಡೆದಿತ್ತು. ಸುಚನಾ ಕೂಡ ಕಂಪೆನಿಯೊಂದನ್ನು ಬಿಟ್ಟು ತಮ್ಮದೇ ಸಂಸ್ಥೆ ಹುಟ್ಟು ಹಾಕಿದ್ದರು. ಇದರ ನಡುವೆ 2019ರ ಆಗಸ್ಟ್ನಲ್ಲಿ ಮಗ ಜನಿಸಿದ್ದ. ಇದಾದ ನಂತರವೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮಿತಿ ಮೀರಿತ್ತು. ಮಗುವಿನ ನಿರ್ವಹಣೆ ವಿಚಾರದಲ್ಲಿ ನಿರಂತರ ಜಗಳ ನಡೆಯುತಿತ್ತು. ಇದು ಮಿತಿ ಮೀರಿ ಸುಚನಾ 2021ರ ಮಾರ್ಚ್ನಲ್ಲಿಯೇ ವೆಂಕಟರಮಣರಿಂದ ದೂರಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದುದು ತನಿಖೆ ವೇಳೆ ಗೊತ್ತಾಗಿದೆ.
ಬಳಿಕ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯೂ ಕೆಲ ದಿನಗಳ ಹಿಂದೆ ನಡೆದಿತ್ತು. ಆದರೆ ವಿಚ್ಛೇದನದ ಪ್ರಕರಣ ಇನ್ನೂ ಮುಗಿದಿಲ್ಲ.ಆದರೂ ವಾರದಲ್ಲಿ ಒಂದು ದಿನ ಮಗನನ್ನು ನೋಡಿಕೊಂಡು ಹೋಗಲು ನ್ಯಾಯಾಲಯ ವೆಂಕಟರಮಣಗೆ ಅನುಮತಿ ನೀಡಿತ್ತು.ಒಂದು ವರ್ಷದಿಂದ ವೆಂಕಟರಮಣ ಬೆಂಗಳೂರಿನಲ್ಲಿದ್ದ ಮಗನನ್ನು ನೋಡಿಕೊಂಡು ಹೋಗುವುದು ಮುಂದುವರಿದಿತ್ತು. ಸುಚನಾ ತನ್ನ ಮಗನ ನಿರ್ವಹಣೆಗೆ ಮಾಸಿಕ 2.50 ಲಕ್ಷ ರೂ.ಗಳನ್ನು ವೆಂಕಟರಮಣ ನೀಡುವಂತೆ ನ್ಯಾಯಾಲಯದ ಮುಂದೆ ಮನವಿಯನ್ನೂ ಸಲ್ಲಿಸಿದ್ದರು. ವೆಂಕಟರಮಣಗೆ ಇದ್ದ ವೇತನ ಸಹಿತ ಎಲ್ಲಾ ವಿವರಗಳನ್ನು ಆಕೆ ಸಲ್ಲಿಸಿದ್ದರು.
ಬಳಿಕ ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯೂ ಕೆಲ ದಿನಗಳ ಹಿಂದೆ ನಡೆದಿತ್ತು. ಆದರೆ ವಿಚ್ಛೇದನದ ಪ್ರಕರಣ ಇನ್ನೂ ಮುಗಿದಿಲ್ಲ.ಆದರೂ ವಾರದಲ್ಲಿ ಒಂದು ದಿನ ಮಗನನ್ನು ನೋಡಿಕೊಂಡು ಹೋಗಲು ನ್ಯಾಯಾಲಯ ವೆಂಕಟರಮಣಗೆ ಅನುಮತಿ ನೀಡಿತ್ತು.ಒಂದು ವರ್ಷದಿಂದ ವೆಂಕಟರಮಣ ಬೆಂಗಳೂರಿನಲ್ಲಿದ್ದ ಮಗನನ್ನು ನೋಡಿಕೊಂಡು ಹೋಗುವುದು ಮುಂದುವರಿದಿತ್ತು. ಸುಚನಾ ತನ್ನ ಮಗನ ನಿರ್ವಹಣೆಗೆ ಮಾಸಿಕ 2.50 ಲಕ್ಷ ರೂ.ಗಳನ್ನು ವೆಂಕಟರಮಣ ನೀಡುವಂತೆ ನ್ಯಾಯಾಲಯದ ಮುಂದೆ ಮನವಿಯನ್ನೂ ಸಲ್ಲಿಸಿದ್ದರು. ವೆಂಕಟರಮಣಗೆ ಇದ್ದ ವೇತನ ಸಹಿತ ಎಲ್ಲಾ ವಿವರಗಳನ್ನು ಆಕೆ ಸಲ್ಲಿಸಿದ್ದರು.
ಉಸಿರುಗಟ್ಟಿಸಲು ಹೋಗಿ ಕೊಂದೇ..!
ಇನ್ನೂ ಗೋವಾ ಪೊಲೀಸರಿಗೆ ಹೇಳಿಕೆ ನೀಡಿರುವ ಸುಚನಾ, ಕೊಲೆ ಮಾಡಲು ಹೋಗಿರಲಿಲ್ಲ, ಉಸಿರುಗಟ್ಟಿಸಲು ಹೋಗಿದ್ದೆ, ಆದರೆ ಸಾವನ್ನಪ್ಪಿದ ಎಂದಿದ್ದಾಳೆ, ಇನ್ನೂ ಡೈವೋರ್ಸ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು ವಾರಕ್ಕೆ ಒಂದು ವಾರಕ್ಕೆ ಒಂದು ಭಾರೀ ಪತಿಗೆ ಮಗುವಿನ ಮುಖ ತೋರಿಸಬೇಕಿತ್ತು, ಇದರಿಂದ ಈಕೆ ಬೇಸರಗೊಂಡಿದ್ದಳು, ಇದನ್ನ ತಪ್ಪಿಸಬೇಕು ಎಂಬ ಉದ್ದೇಶದಿಂದ ಕೊಲೆ ಮಾಡುವ ಹಂತಕ್ಕೆ ಹೋಗಿರಬಹುದು ಎಂದು ಹೇಳಲಾಗಿದೆ..
ಒಟ್ನಲ್ಲಿ ಗೋವಾದಲ್ಲಿ ಮಗನನ್ನು ಕೊಂದು, ಬೆಂಗಳೂರಿನಲ್ಲಿ ತಲೆ ಮರೆಸಿಕೊಳ್ಳಲು ಹೊರಟಿದ್ದ ಕ್ರೂರ ತಾಯಿಯನ್ನು ಅಪಾರ್ಟ್ಮೆಂಟ್ ಸಿಬ್ಬಂದಿಯ ಜಾಗರೂಕತೆಯಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಮಗುವಿನ ತಂದೆ ವೆಂಕಟರಾಮನ್ ಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಇನ್ನು ಪ್ರಕರಣದ ಸತ್ಯಾಂಶ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ..