Saturday, June 21, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ರಾಜ್ಯ

ದಾವಣಗೆರೆಯಲ್ಲಿ ಮೊದಲನೇ ದಿನ ಯಶಸ್ವಿಗೊಂಡ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನ.. ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೂ ಫ್ರೀ ಬಸ್ ಪಾಸ್ ಕೊಡ್ತಿವಿ ಎಂದು ಭರವಸೆ ಕೊಟ್ರು ಸಿಎಂ ಸಿದ್ದರಾಮಯ್ಯ..!

Power Samachara News by Power Samachara News
February 3, 2024
in ರಾಜ್ಯ, Home, ದಾವಣಗೆರೆ, ಪ್ರಮುಖ ಸುದ್ದಿ
0
ದಾವಣಗೆರೆಯಲ್ಲಿ ಮೊದಲನೇ ದಿನ ಯಶಸ್ವಿಗೊಂಡ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನ..  ಬಜೆಟ್ ನಲ್ಲಿ ಗ್ರಾಮೀಣ ಪತ್ರಕರ್ತರಿಗೂ ಫ್ರೀ ಬಸ್ ಪಾಸ್ ಕೊಡ್ತಿವಿ ಎಂದು ಭರವಸೆ ಕೊಟ್ರು ಸಿಎಂ ಸಿದ್ದರಾಮಯ್ಯ..!
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 03-02-2024

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದಿಂದ 38ನೇ ರಾಜ್ಯ ಸಮ್ಮೇಳನ ಅದ್ದೂರಿಯಾಗಿ ಉದ್ಘಾಟನೆಯಾಗಿದೆ, ದಾವಣಗೆರೆ ನಗರದ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು, ಸಮ್ಮೇಳನಕ್ಕೂ ಮುಂಚೆ ಅದ್ದೂರಿಯಾಗಿ ದಾವಣಗೆರೆಯಲ್ಲಿ ಮೆರವಣಿಗೆ ನಡೆಸಲಾಯಿತು. ಉದ್ಘಾಟನೆ ಬಳಿಕ ವಿವಿಧ ಗೋಷ್ಠಿಗಳು ಜರುಗಿದವು.

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೌಢ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಗ್ಯಾರಂಟಿ ಎಂದು ಕರೆಯಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಇರುವ ಈ ಯೋಜನೆಯನ್ನು ಬಿಟ್ಟಿ ಗ್ಯಾರಂಟಿ ಎಂದು ಕರೆಯದೆ, ನೀವೇ ಪರಿಶೀಲಿಸಿ ಬರೆಯಿರಿ. ಏನನ್ನಾದರೂ ಪ್ರಕಟಿಸುವ ಮೊದಲು ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು.

ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಗಂಡ-ಹೆಂಡತಿ ಜಗಳವನ್ನು ಇಡೀ ದಿನ ತೋರಿಸುವುದಕ್ಕಿಂತ, ಸಮಾಜದ ಬೆಳೆವಣಿಗೆಗೆ ಅಡ್ಡಿ ಆಗಿರುವ ಪಟ್ಟ ಭದ್ರರನ್ನು ಗುರುತಿಸಿ ಬರೆಯಿರಿ. ಇದರಿಂದ ಸಮಾಜಮುಖಿ ಪತ್ರಿಕೋದ್ಯಮ ಸಾಧ್ಯ ಎಂದರು.

ಹಣವಂತರು, ಅತೀ ಶ್ರೀಮಂತರ ಕೈಯಲ್ಲಿ ಪತ್ರಿಕೋದ್ಯಮ ಸಿಲುಕಿದೆ. ಹೀಗಾಗಿ ಶ್ರೀಮಂತರ ಹಿತಾಸಕ್ತಿ ಕಾಯುವ , ಬಡವರ ಹಿತಾಕ್ತಿಗೆ ವಿರುದ್ಧವಾಗಿ ಬರೆಯುವ ಅಪಾಯ ಇರುತ್ತದೆ. ಇದನ್ನು ಪರಿಶೀಲಿಸಿಕೊಳ್ಳಿ. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು, ಬೆಂಬಲಿಸುವವನು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಘನತೆ ತರುವಂತೆ ಮಾಡಬೇಕು ಎಂದು ವಿನಂತಿಸಿದರು.

ಸ್ವಾತಂತ್ರ್ಯಾಪೂರ್ವದ ಪತ್ರಿಕೋದ್ಯಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎನ್ನುವ ಆಶಯ ಪ್ರಧಾನವಾಗಿ ಕೆಲಸ ಮಾಡಿತ್ತು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವವನ್ನು ಕಾಯುವ, ರಕ್ಷಿಸುವ ಆಶಯ ಪ್ರಮುಖವಾಗಿದೆ ಎಂದು ವಿವರಿಸಿದರು.

ಜನ ಸಾಮಾನ್ಯರು ಪತ್ರಿಕಾ ವೃತ್ತಿ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಈಗ ತಂತ್ರಜ್ಞಾನ , ವಿಜ್ಞಾನ ಬಹಳ ಬೆಳೆದಿದ್ದು ಇದರ ಪ್ರಯೋಜನವನ್ನು ಪತ್ರಿಕಾವೃತ್ತಿ ಬಳಸಿಕೊಳ್ಳಬೇಕಿದೆ. ಆದರೆ ಸತ್ಯನಿಷ್ಠೆಯನ್ನು ಯಾವುದೇ ಕಾರಣಕ್ಕೂ ಪತ್ರಕರ್ತರು ಬಿಡಬಾರದು ಎಂದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಈ ಬಜೆಟ್ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಭರವಸೆ ನೀಡಿದರು.

ಪತ್ರಿಕಾ ವೃತ್ತಿ ಸಮಾಜದ ಅಸಮಾನತೆ ಹೋಗಲಾಡಿಸಲು, ಅವಕಾಶ ವಂಚಿತರ ಪರವಾಗಿ, ಮೀಸಲಾತಿಯ ಆಶಯಗಳ ಪರವಾಗಿ ಇರಬೇಕು. ಇದರಿಂದ ಸಾಮಾಜಿಕ ನ್ಯಾಯಯನ್ನು ದ್ವನಿ ಇಲ್ಲದವರಿಗೆ ಕೊಡಲು ಸಾಧ್ಯ. ಹೀಗಾದಾಗ ಬಸವಣ್ಣನವರ ಸಮ ಸಮಾಜದ ಆಶಯ ಈಡೇರಲು ಸಾಧ್ಯ. ಪತ್ರಕರ್ತರು ಇದಕ್ಕೆ ಪೂರಕವಾಗಿ ವಸ್ತುನಿಷ್ಠವಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಸಹಯೋದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು KUWJ ಅಧ್ಯಕ್ಷರಾದ ಶಿವಾನಂದ ತಗಡೂರು ವಹಿಸಿದ್ದರು.

ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ , ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಮಾಯ್ಕೊಂಡ ಬಸಂತಪ್ಪ, ಡಿ.ಜಿ.ಶಾಂತನಗೌಡರು, ಇನ್ ಸೈಟ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಜಿ.ಬಿ.ವಿನಯ್ ಕುಮಾರ್ ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಇ.ಎಂ.ಮಂಜುನಾಥ್ ಸಮ್ಮೇಳನದ ಆಶಯಗಳನ್ನು ಆಡಿದರು.

Tags: ೩೮ ರಾಜ್ಯ ಸಮ್ಮೇಳನDavanagereem manjunathkuwjkv prabhakarShamanuru shivashankarappashamanuru shivashankarappa parvathamma kalyana mantapashivananda tagaduruSS MALLIKARJUNಉಚಿತ ಬಸ್ ಪಾಸ್ಎಸ್ ಎಸ್ ಮಲ್ಲಿಕಾರ್ಜುನ್ಕೆ.ವಿ ಪ್ರಭಾಕರ್ದಾವಣಗೆರೆಪತ್ರಕರ್ತರುಶಿವಾನಂದ ತಗಡೂರುಶ್ಯಾಮನುರು ಶಿವಶಂಕರಪ್ಪ ಕಲ್ಯಾಣ ಮಂಟಪಶ್ಯಾಮನೂರು ಶಿವಶಂಕರಪ್ಪಸಿಎಂ ಸಿದ್ದರಾಮಯ್ಯ

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In