POWER SAMACHARA | KANNADA NEWS | 14-04-2023
ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾವು ರಂಗೇರತೊಡಗಿದೆ, ಮಹಾನಗರ ಪಾಲಿಕೆಯಲ್ಲಿ ಮಾಜಿ ಸಚಿವ, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಎಸ್.ಎಸ್. ಮಲ್ಲಿಕಾರ್ಜುನ್ ಅವರು ಬರೋಬ್ಬರಿ ₹152 ಕೋಟಿ ಆಸ್ತಿ ಒಡೆಯ ಆಗಿದ್ದಾರೆ..
ಎಷ್ಟು ಬೆಳ್ಳಿ, ಎಷ್ಟು ಚಿನ್ನ..?
ಎಸ್ ಎಸ್ ಮಲ್ಲಿಕಾರ್ಜುನ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ 2017-18ನೇ ಸಾಲಿನಲ್ಲಿ ₹20.34 ಕೋಟಿ ರೂ ಆದಾಯ ಇದ್ದರೆ, 2021-2202ರಲ್ಲಿ ₹2.07 ರೂ. ಆದಾಯ ಇದೆ ಎಂದು ತೋರಿಸಿದ್ದಾರೆ. 16.545 ಕೆಜಿ ಚಿನ್ನ, 628.840 ಕೆ.ಜಿ. ಬೆಳ್ಳಿ ಇದೆ. ಚಿನ್ನಾಭರಣ ಸೇರಿದಂತೆ ಚರಾಸ್ತಿಯು ಮಲ್ಲಿಕಾರ್ಜುನ ಅವರಲ್ಲಿ 81.93 ಕೋಟಿ ಇದೆ. ಪ್ರಭಾ ಅವರಲ್ಲಿ ₹5.88 ಕೋಟಿ ಮೌಲ್ಯದ ಚರಾಸ್ತಿ ಇದೆ.
ನೂರಾರು ಎಕರೆ ಭೂಮಿ ಒಡೆಯ..
226.03 ಎಕರೆ ಕೃಷಿಭೂಮಿ, 22,17,055 ಚದರ ಅಡಿ ಕೃಷಿಯೇತರ ಭೂಮಿ ಸೇರಿದಂತೆ 70.77 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಎಸ್ ಎಸ್ ಎಂ ಹೊಂದಿದ್ದಾರೆ. 47.11 ಎಕರೆ ಕೃಷಿ ಭೂಮಿ, 11,050 ಕೃಷಿಯೇತರ ಭೂಮಿ ಸೇರಿದಂತೆ ₹30.61ಕೋಟಿ ಮೌಲ್ಯದ ಸ್ಥಿರಾಸ್ತಿ ಪ್ರಭಾ ಮಲ್ಲಿಕಾರ್ಜುನ್ ಅವರಿಗಿದೆ.
ಸಾಲವು ಇದೆ..!
₹23.60 ಕೋಟಿ ಸಾಲ ಮಲ್ಲಿಕಾರ್ಜುನ್ ಅವರಿಗಿದ್ದರೆ, ₹97.28 ಲಕ್ಷ ಸಾಲ ಪ್ರಭಾ ಅವರಿಗಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ..