POWER SAMACHARA | KANNADA NEWS | 13-04-2023
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾವು ರಂಗೇರತೊಡಗಿದೆ, ಇಂದು ಮಹಾನಗರ ಪಾಲಿಕೆಯಲ್ಲಿ ಮಾಜಿ ಸಚಿವ, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ..
ನಾಮಪತ್ರ ಸಲ್ಲಿಕೆ ವೇಳೆ ಪ್ರಭಾ ಮಲ್ಲಿಕಾರ್ಜುನ್, ವಕೀಲರಾದ ಸೈಯದ್ ಸಲೀಂ, ಜಿಎಚ್ ಗಣೇಶ್ ಕುಂದುವಾಡ, ಡಾ.ಹೆಚ್.ಬಿ.ಅರವಿಂದ್ ಸೇರಿದಂತೆ ಮತ್ತಿತರರಿದ್ದರು..
ಬಿಜೆಪಿಯಿಂದ ಹೊಟ್ಟೆಗೆ ಇಟ್ಟಿಲ್ಲದ ಪರಿಸ್ಥಿತಿ..
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನರು ಬಿಜೆಪಿ ಸರ್ಕಾರದ ವಿರುದ್ದ ಇದ್ದಾರೆ, ಹೊಟ್ಟೆಗೆ ಇಟ್ಟಿಲ್ಲದ ಪರಿಸ್ಥಿತಿ ಇದೆ, ಆದರೆ ಬಿಜೆಪಿಗರು ಮೋಜು ಮಸ್ತಿ ಮಾಡ್ತಾ ಇದ್ದಾರೆ, 40% ಲಂಚ ಹೊಡೆದು ತಿಂದು ತೇಗಿದ್ದಾರೆ, ಜನರು ತೀರ ಪಾತಾಳಕ್ಕೆ ಹೋಗಿದ್ದಾರೆ ಎಂದು ದೂರಿದರು, ನಾವು ವಿದ್ಯುತ್, ನಿರುದ್ಯೋಗ ಭತ್ಯೆ, ಅಕ್ಕಿ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದೇವೆ, ಮುಂದೇ ಕೊಡಿಸುವ ಜವಾಬ್ದಾರಿ ಹೊತ್ತು ನೀಡುತ್ತೇವೆ ಎಂದರು..
ಬಿಜೆಪಿ ಏಜೆಂಟ್ ತರ ಕೆಲಸ ಮಾಡುತ್ತಿರುವ ಜಿಲ್ಲಾಡಳಿತ..
ಆನ್ ಲೈನ್ ಪ್ರಚಾರಕ್ಕೆ ಬಿಜೆಪಿ ಅನುಮತಿ ಪಡೆದಿಲ್ಲ, ನಿನ್ನೆ ಸಿಕ್ಕಿ ಬಿದ್ದಿದ್ದಾರೆ, ಜಿಲ್ಲಾಡಳಿತ ಏನು ಮಾಡುತ್ತಿದೆ, ಇಂತಹ ಪ್ರಕರಣ ಮೇಲೆ ಕೇಸ್ ಹಾಕಲ್ಲ, ನಮ್ಮ ಮೇಲೆ ಸಣ್ಣಪುಟ್ಟ ಸಮಸ್ಯೆ ಇದ್ದರು ಕೇಸ್ ಹಾಕ್ತಾರೆ, ಜಿಲ್ಲಾಡಳಿತ ಬಿಜೆಪಿ ಏಜೆಂಟ್ ತರ ಕೆಲಸ ಮಾಡುತ್ತಿದೆ, ಈ ವಿಚಾರವನ್ನ ನಾವು ಇಲ್ಲಿಗೆ ಬಿಡುವುದಿಲ್ಲ, ತುಂಬಾ ಕಡೆ ಈ ತರ ಪ್ರಚಾರ ಮಾಡುತ್ತಿದ್ದಾರೆ, ಯಾರಿಗೆ ಅನುಮಾನ ಬಂದರೆ ನಮಗೆ ತಿಳಿಸಿ, ಬಿಹಾರ್ ದಿಂದ ಬಂದು ಬಿಜೆಪಿ ಪರ ಕಾಲ್ ಮಾಡುತ್ತಿದ್ದಾರೆ, 99 % ಸುಳ್ಳನ್ನು ಜನರಿಗೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು..
ನಮ್ಮ ಅಪ್ಪ ಆ ರೀತಿ ಹೇಳಿಲ್ಲ..
ಮಲ್ಲಿಕಾರ್ಜುನ್ ಖರ್ಗೆ ಅವರು ಸಿಎಂ ಆದರೆ ಒಳ್ಳೆಯದು ಎಂಬ ಶಾಸಕ ಶಾಮನೂರು ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದು, ನಮ್ಮ ತಂದೆಯವರು ಆ ರೀತಿ ಹೇಳಿಲ್ಲ, ಈ ಹೇಳಿಕೆ ತಿರುಚಲಾಗಿದೆ, ಸಿಎಂ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ, ಕಾಂಗ್ರೆಸ್ ಗೆ ದುಡಿದವರಿಗೆ ಸಿಎಂ ಪಟ್ಟ ಕೊಡುತ್ತಾರೆ ಎಂದರು. ಇನ್ನೂ ಲಿಂಗಾಯಿತರು ಹೆಚ್ಚು ಜನ ಗೆದ್ದರೆ ಲಿಂಗಾಯಿತರು ಸಿಎಂ ಆಗ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, 70 ಸ್ಥಾನವನ್ನ ಕೊಡಲು ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಕೇಳಿದ್ದಾರೆ, ಹೆಚ್ಚು ಸ್ಥಾನ ಗೆಲ್ಲಲು ಹೇಳಿದ್ದಾರೆ, ನಾನು ಸಿಎಂ ಆಗ್ತೇನೆ ಅಂತಾ ಅವರು ಹೇಳಿರುವುದು ಗೊತ್ತಿಲ್ಲ, ಮುಂದೇ ಕೇಳೋಣ ಬಿಡು ತಪ್ಪಿಲ್ಲ ಎಂದು ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದಾರೆ..