POWER SAMACHARA | KANNADA NEWS | BREKING NEWS| 18-11-2023..
ದಾವಣಗೆರೆ ; ವಿಜಯೇಂದ್ರ, ಆರ್ ಅಶೋಕ್ ಜೋಡೆತ್ತುಗಳು, ಸಿದ್ದರಾಮಯ್ಯ, ಡಿಕೆಶಿ ಕಳ್ಳೆತ್ತುಗಳು ಎಂದು ದಾವಣಗೆರೆ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪರೋಕ್ಷವಾಗಿ ಸಿಎಂ, ಡಿಸಿಎಂ ಗೆ ಮಾಜಿ ಸಚಿವ ಶ್ರೀ ರಾಮುಲು ಟಾಂಗ್ ನೀಡಿದ್ದಾರೆ..
ಕಾಂಗ್ರೆಸ್ ಸರ್ಕಾರ 60% ಸರ್ಕಾರ
ಜೋಡೆತ್ತುಗಳು ಜನರ ಪರ ಹೋರಾಟ ಮಾಡುತ್ತವೆ, ಕಳ್ಳೆತ್ತುಗಳ ಬಗ್ಗೆ ಜನ ಹುಷಾರಾಗಿ ಇರಬೇಕು, ರಾಜ್ಯ ಸರ್ಕಾರದ ಆಡಳಿತ ಕುಸಿದಿದೆ, ನಿಂತ ನೀರಾಗಿದೆ, ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ, ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ, ಕಾಂಗ್ರೆಸ್ ಸರ್ಕಾರ 60% ಸರ್ಕಾರವಾಗಿದೆ, ಜನರು ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತಾರೆ ಎಂದು ಗುಡುಗಿದ್ದಾರೆ..
ವಿಪಕ್ಷ ನಾಯಕನ ಆಯ್ಕೆಯಲ್ಲಿ ಸ್ವಪಕ್ಷದಿಂದ ಅಪಸ್ವರ ವಿಚಾರವಾಗಿ ಮಾತನಾಡಿರುವ ಶ್ರೀ ರಾಮುಲು, ರಾಜ್ಯಾಧ್ಯಕ್ಷ ಆಯ್ಕೆ ಮಾಡಿದ ಸಂದರ್ಭದಲ್ಲಿ ಹೀಗೆ ಮಾತನಾಡುತ್ತಿದ್ದರು, ಕೇಂದ್ರ ಹಾಗೂ ರಾಜ್ಯ ನಾಯಕರು ಅಳೆದು ತೂಗಿ ಆಯ್ಕೆ ಮಾಡಿದ್ದಾರೆ, ಯತ್ನಾಳ್ ಅವರು ಕೂಡ ನಮ್ಮ ನಾಯಕರು ಅನುಭವಿ ನಾಯಕರು, ಯಾವುದೇ ತೀರ್ಮಾನ ತೆಗೆದುಕೊಂಡಾಗ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನವನ್ನು ಕೂಡ ಬಿಜೆಪಿ ಕೊಟ್ಟಿದೆ ಎಂದರು..
ಜಮೀರ್ ರಾಜೀನಾಮೆ ನೀಡಲಿ..
ಸಚಿವ ಜಮೀರ್ ಅಹಮ್ಮದ್ ವಿವಾದಾತ್ಮಕ ಹೇಳಿಕೆ ವಿಚಾರ, ಜಮೀರ್ ಗೆ ರಾಜಕೀಯ ಅನುಭವ ಕಡಿಮೆ ಇದೆ, ಸಂವಿಧಾನದಲ್ಲಿ ಜಾತಿ ಧರ್ಮ ಎಳೆದು ತಂದಿರುವುದು ಸರಿಯಲ್ಲ, ಸ್ವೀಕರ್ ಸ್ಥಾನವನ್ನು ಯಾವುದೇ ಪಕ್ಷಕ್ಕೆ ಜಾತಿ ಧರ್ಮಕ್ಕೆ ಹೋಲಿಸುವುದು ಸರಿಯಲ್ಲ, ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿರುವ ಜಮೀರ್ ಮೊದಲು ರಾಜೀನಾಮೆ ನೀಡಲಿ ಎಂದು ಕುಟುಕಿದರು..
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಂದು ವಿಪಕ್ಷಗಳ ಟೀಕೆ ವಿಚಾರ ಮಾತನಾಡಿರುವ ಶ್ರೀ ರಾಮುಲು,
ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ರಾಜ್ಯಾದ್ಯಕ್ಷ ಸ್ಥಾನ ನೀಡಿಲ್ಲ, ಅವರ ಸಂಘಟನೆ , ಪಕ್ಷದಲ್ಲಿನ ಶ್ರಮವನ್ನು ನೋಡಿ ಸ್ಥಾನ ನೀಡಿದ್ದಾರೆ, ಯಡಿಯೂರಪ್ಪ ನವರ ಸಲಹೆ ಸಹಕಾರ ಬಿಜೆಪಿ ಗೆ ಇದೆ, ಅದರಂತೆ ರಾಜ್ಯಾಧ್ಯಕ್ಷ ರು ಕೂಡ ಕೆಲಸ ಮಾಡುತ್ತಿದ್ದಾರೆ ಎಂದರು..
ಯತಿಂದ್ರ ಸೂಪರ್ ಸಿಎಂ
ಯತಿಂದ್ರ ಸೂಪರ್ ಸಿಎಂ ಎಂದು ಬೆಳಗಾವಿಯಲ್ಲಿ ವರ್ಗಾವಣೆ ಬಗ್ಗೆ ಹೇಳಿದ್ದೆ, ಅದಕ್ಕೆ ಡಿಸಿಎಂ ಅವ್ರು ರಿಯಾಕ್ಷನ್ ಕೊಟ್ಟು ಶಾಲೆಗಳಿಗೆ ಸಿಎಸ್ ಆರ್ ಫಂಡ್ ಅಂತ ತಿರುಚಿದರು, ಆದರೆ ಯಾರ ಹೆಸರು ಹೇಳಿದರೊ ಅವರ ಹೆಸರು ಟ್ರಾನ್ಸವರ್ ಲೀಸ್ಟ್ ನಲ್ಲಿ ಬಂದಿದೆ, ಈ ಕಾಂಗ್ರೆಸ್ ಸರ್ಕಾರ 60% ಸರ್ಕಾರ, ಇದರ ಬಗ್ಗೆ ಕೆಂಪಣ್ಣನವರು ಧ್ವನಿ ಎತ್ತಬೇಕು ಅವರು ಎಲ್ಲಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ..
ಬಳ್ಳಾರಿ ಸಂಸದ ದೇವೆಂದ್ರಪ್ಪ ಪುತ್ರನ ಕೇಸ್ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಸಂಸದರು ಸ್ಪಷ್ಟನೆ ಕೊಟ್ಟಿದ್ದಾರೆ, ನೋಡೋಣ ಮುಂದೆ ಏನಾಗುತ್ತೊ, ನಾನು ಎಂಪಿ ಎಲೆಕ್ಷನ್ ಸ್ಪರ್ಧೆಗೆ ತೀರ್ಮಾನ ಮಾಡಿಲ್ಲ ಎಂದು ಶ್ರೀ ರಾಮುಲು ಸ್ಪಷ್ಟನೆ ನೀಡಿದ್ದಾರೆ..