POWER SAMACHARA | KANNADA NEWS | BREKING NEWS| 03-02-2024
ದಾವಣಗೆರೆ ; ಜಿಲ್ಲೆಯ ಹೊನ್ನಾಳಿಯ ಪ್ರಮುಖ ವೃತ್ತದಲ್ಲಿ ಕನಕದಾಸರ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು..
ಪ್ರತಿಮೆ ಅನಾವರಣದ ಬಳಿಕ ಶಾಲಾ ಮೈದಾನದಲ್ಲಿ ವೇದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಹೊನ್ನಾಳಿ ಶಾಸಕ ಶಾಂತನಗೌಡ, ಶಾಸಕ ಕೆ ಎಸ್ ಬಸವoತಪ್ಪ, ಹೊನ್ನಾಳಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಭಾಗೀಯಾಗಿದ್ದರು..
ಸಭಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅದ್ಭುತವಾಗಿ ಭಾಷಣ ಮಾಡಿದರು, ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ್ದಾರೆ, ಆದರೆ ಕನಕದಾಸರು ಕುರುಬರಾಗಿ ಉಳಿದಿರಲಿಲ್ಲ, ವಿಶ್ವಮಾನವರಾದರು, ಎಲ್ಲರು ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ, ಜಾತಿ ವ್ಯವಸ್ಥೆ ಪರಿಣಾಮ ಅಲ್ಪಮಾನವರಾಗಿ ಬಿಡುತ್ತೇವೆ, ಬುದ್ದ, ಅಂಬೇಡ್ಕರ್, ಗಾಂಧಿ ಬೋಧನೆ ಮಾಡಿದ್ದು ವಿಶ್ವಮಾನವ ಆಗಲು ಪ್ರಯತ್ನ ಮಾಡಿ ಎಂದಿದ್ದು, ನಾವು ಮನುಷ್ಯರಾಗಿ ಇರಬೇಕೆ ಹೊರತು ಪರಸ್ಪರ ದ್ವೇಷ ಮಾಡಬಾರದು ಎಂದರು..
ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯಾದರೇನು ಬಲ್ಲಿರ ಎಂಬುದು ಕನಕದಾಸರ ಕೀರ್ತನೆಯಾಗಿದೆ, ಜಾತಿವಾದಿಗಳಿಗೆ ಕನಕರು ಈ ಪ್ರಶ್ನೆ ಕೇಳುತ್ತಾರೆ, ನನ್ನ ಶರೀರದಲ್ಲಿ ರಕ್ತ ಹರಿತಾ ಇದೇ, ನನಗೆ ಆಪರೇಷನ್ ಆದರೆ ರಕ್ತ ಬೇಕಾಗುತ್ತದೆ, ನಾನು ನನ್ನ ಕುರುಬ ಜಾತಿಯ ರಕ್ತವನೇ ಕೇಳ್ತಿನಾ ರೇಣುಕಾಚಾರ್ಯ, ಕುರುಬರೇ ರಕ್ತ ಕೊಡ್ರಿ ಅಂತೀನಾ, ರೇಣುಕಾಚಾರ್ಯ ನೀನು ಜಂಗಮ, ಜಂಗಮ ರಕ್ತ ಕೊಡು ಅಂತೀಯಾ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಪ್ರಶ್ನೆ ಮಾಡಿದರು..
ಕನಕರು ದಾಸ ಶ್ರೇಷ್ಟ ಅಷ್ಟೆ ಅಲ್ಲ ಸಮಾಜ ಸುಧಾರಕ ಕೂಡ, ಪಾಳೇಗಾರರಾಗಿದ್ರು ಬಳಿಕ ಎಲ್ಲಾ ತ್ಯಾಗ ಮಾಡಿ ದಾಸರಾದರು, ಕನಕ ನಾಯಕ ಕನಕ ದಾಸ ಆಗುತ್ತಾನೆ, ಕನಕದಾಸರು ಪಾಳೆಗಾರರ ವಂಶಕ್ಕೆ ಸೇರಿದವರು ಎಂದರು..
ರಾಮಧಾನ್ಯ ಚರಿತೆ ಸಾರ ಹೇಳಿದ ಸಿಎಂ..
ಅಕ್ಕಿ ಶ್ರೀಮಂತರ ಆಹಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು, ಕನಕದಾಸರ ರಾಮಧಾನ್ಯ ಚರಿತೆಯಲ್ಲಿ ರಾಗಿ ಶ್ರೇಷ್ಠ ಎಂದು ಹೇಳಲಾಗಿದೆ, ಅಕ್ಕಿ ಮೇಲೋ ರಾಗಿ ಮೇಲೊ ಎಂಬ ಚರ್ಚೆ ಬೀಳುತ್ತದೆ, ಆಗ ಅಕ್ಕಿ, ರಾಗಿಯನ್ನ ಪರೀಕ್ಷೆಗೆ ಒಳಪಡಿಸುತ್ತಾರೆ ಅಕ್ಕಿ ಆಳಾಗಿ ಹೋಗಿರುತ್ತದೆ, ರಾಗಿ ಚೆನ್ನಾಗಿ ಇರುತ್ತದೆ, ಇದು ಶ್ರೀ ರಾಮಚಂದ್ರನ ಹೆಸರು ಹೇಳೋರಿಗೆ ಗೊತ್ತಿದಿಯಾ ಎಂದು ಪ್ರಶ್ನೆ ಮಾಡಿದರು, ದುಡಿಯುವವರು ರಾಗಿ ಊಟ ಮಾಡುತ್ತಾರೆ, ರಾಗಿ ಶಕ್ತಿಯುತವಾಗಿ ಇರುತ್ತದೆ, ಶ್ರೀಮಂತರು ಅಕ್ಕಿ ಊಟ ಮಾಡುತ್ತಾರೆ ಎಂದು ಪದೇ ಪದೇ ಅಕ್ಕಿ ಶ್ರೀಮಂತರ ಆಹಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು ಚರ್ಚೆಗೆ ಗ್ರಾಸವಾಯಿತು..