POWER SAMACHARA | KANNADA NEWS | BREKING NEWS| 20-11-2023…
ದಾವಣಗೆರೆ: ಚಿತ್ರದುರ್ಗ ಜಿಲ್ಲಾ ಸತ್ರ ನ್ಯಾಯಾಲಯ 14ನೇ ದಿನ ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನಲೆ ವಿರಕ್ತ ಮಠಕ್ಕೆ ರಾತ್ರಿ 10ಗಂಟೆಗೆ ಮುರುಘಾ ಮಠದ ಶಿವಮೂರ್ತಿ ಶ್ರೀ ವಾಪಾಸಾಗಿದ್ದಾರೆ..
ದಾವಣಗೆರೆ ನಗರದ ದೊಡ್ಡಪೇಟೆಯ ವಿರಕ್ತ ಮಠಕ್ಕೆ ಸ್ವಾಮಿಜಿ ವಾಪಾಸ್ ಆದರೂ, ಬಂಧನಕ್ಕೆ ತಡೆಯಾಜ್ಞೆ ಹಿನ್ನಲೆ ಸ್ವಾಮಿಜಿ ಬಿಡುಗಡೆಗೊಂಡಿದ್ದಾರೆ, ಇನ್ನೂ ಈ ವೇಳೆ ಪ್ರತಿಕ್ರಿಯೆಗೆ ಶಿವಮೂರ್ತಿ ಶ್ರೀ ನಿರಾಕರಿಸಿದ್ದಾರೆ. ನಾನು ಏನೂ ಹೇಳೋದಿಲ್ಲ, ನಾನು ನಾಳೆ ಮಾತನಾಡುತ್ತೇನೆ ಎಂದು ಸ್ಪಷ್ಟನೆ ಕೊಡದೇ ರೂಂಗೆ ಶಿವಮೂರ್ತಿ ಸ್ವಾಮಿಜಿ ತೆರಳಿದ್ದಾರೆ..
ಸದ್ಯ ನೋ ಕಮೆಂಟ್ಸ್ ಎಂದ ಮುರುಘಾ ಶ್ರೀ..
ಚಿತ್ರದುರ್ಗದ ಜಿಲ್ಲಾ ಕಾರಗೃಹದಲ್ಲಿ ಬಿಡುಗಡೆಯಾದ ಬಳಿಕ ಮುರುಘಾ ಶ್ರೀ ಮಾಧ್ಯಮಗಳ ಜೊತೆ ಮಾತನಾಡಿದ್ದು, ನಾವು ಸೂಕ್ತವಾದ ಸಂದರ್ಭದಲ್ಲಿ ವಿಚಾರ ಹಂಚಿಕೊಳ್ಳುತ್ತೇವೆ, ನಾವು ಈಗ ಮತ್ತೆ ಮೌನಕ್ಕೆ ಸರಿಯುತ್ತಿದ್ದೇವೆ, ಇಂದು ಚಿತ್ರದುರ್ಗ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಂಧನ ವಾರೆಂಟ್ ವಿಚಾರವಾಗಿ ಮುಂದೆ ಮಾತಾಡುತ್ತೇವೆ, ಸದ್ಯ ನೋ ಕಾಮೆಂಟ್ಸ್ ಎಂದು ಮುರುಘಾಶ್ರೀ ಹೇಳಿಕೆ ನೀಡಿದ್ದಾರೆ..