<strong>POWER SAMACHARA | KANNADA NEWS | BREKING NEWS| 31-07-2024</strong> <strong>ದಾವಣಗೆರೆ :</strong> ಜಿಂಕೆ ಕೇಸ್ ನಲ್ಲಿ ಬೊಮ್ಮಾಯಿ ಮುಂದೆ ಕಣ್ಣೀರು ಹಾಕಿದ್ದು ಯಾರು ಅಂತ ಪ್ರಶ್ನಿಸಿದ್ದ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ದಾವಣಗೆರೆಯಲ್ಲಿ ಕಾಂಗ್ರೆಸ್ ನ ಹಿರಿಯ ಶಾಮನೂರು ಶಿವಶಂಕರಪ್ಪ ಕೆಂಡಾಮಂಡಲರಾಗಿದ್ದಾರೆ. ಸೋತೆನೆಂದು ಗೊಳೋ ಅಂತ ಅಳಬೇಡವೋ ಅಳಿಯ, ನಾವು ಬಸವರಾಜ್ ಬೊಮ್ಮಾಯಿ ಹತ್ರ ಹೋಗಿ ಕಣ್ಣೀರಾಕಿಲ್ಲ, ನಾವು ಕಣ್ಣೀರು ಹಾಕೋರಲ್ಲ, ಸೆಡ್ಡು ಹೊಡೆಯೋ ಜನ ಎಂದು ಕೌಂಟರ್ ಕೊಟ್ಟಿದ್ದಾರೆ.. <img class="aligncenter wp-image-3063 size-full" src="https://powersamachara.com/wp-content/uploads/2024/07/shamanur-siddeshvar-talk-fight.jpg" alt="" width="748" height="548" /> ದಾವಣಗೆರೆ ದೂಡಾ ಕಚೇರೆಯಲ್ಲಿಂದು ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ದಿನೇಶ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಅಡಿಕೆ ಸೇಲ್ಸ್ ಟ್ಯಾಕ್ಸ್ ಕದ್ದು ಹಣ ಮಾಡಿದಿಯಾ, ಬಸ್ ನಿಲ್ದಾಣದಲ್ಲಿ ಹಣ ಕೊಳ್ಳೆ ಹೊಡಿದಿದ್ದೀಯಾ, ಭೈರತಿ ಬಸವರಾಜ್ ಜೊತೆ ಸೇರಿ ದಾವಣಗೆರೆ ಕೊಳ್ಳೆ ಹೊಡೆದ್ದಿಯಾ ಎಂದು ಪರೋಕ್ಷವಾಗಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ದ ಕಿಡಿಕಾರಿದ್ದಾರೆ.. ನಿನ್ನ ಸಾಹುಕಾರಿಕೆ ಬಹಳ ದಿನ ಉಳಿಯಲ್ಲ, ದಾವಣಗೆರೆಯಲ್ಲಿ ಮೊದಲು ಸಾಹುಕಾರರು ಯಾರು ಗೊತ್ತಾ, ಭೀಮ ಸಮುದ್ರದಿಂದ ನಿಮ್ಮ ಅಪ್ಪನ್ನ ದಾವಣಗೆರೆಗೆ ಕರೆದುಕೊಂಡು ಬಂದಿದ್ದೇ ನಾವು, ಇದನ್ನ ಸಿದ್ದೇಶ್ವರ್ ಮರೆದಿದ್ದಾನೆ, ಇವರ ಅಪ್ಪ ಹೇಗೆ ಗೆದ್ದ ಗೊತ್ತಾ ಎಂದು ಸ್ಪೋಟಕ ಹೇಳಿಕೆ ನೀಡುವ ಮೂಲಕ ಹಲವು ವರ್ಷಗಳ ಪ್ರಶ್ನೆಗೆ ಶಾಮನೂರು ಸ್ಪಷ್ಟನೆ ಕೊಟ್ಟಿದ್ದಾರೆ.. ನಾವಾಗಲಿ ನನ್ನ ಮಕ್ಕಳಾಗಲಿ ನಿನ್ನಂತ ಕೆಟ್ಟ ಕೆಲಸ ಮಾಡಿಲ್ಲ, ಸೋತೆನೆಂದು ಬೇಜಾರಾಗದೇ ಅಳುತ್ತಾ ಕೂರೋದು ಬೇಡ ಅಂತ ನನ್ನ ಅಳಿಯನಿಗೆ ಬುದ್ದಿವಾದ ಹೇಳುತ್ತೇವೆ ಎಂದು ಕಿಚಾಯಿಸಿದ್ದಾರೆ. ಏನೇ ಚರ್ಚೆ ಇದ್ದರು ಬೇಕಿದ್ದರೆ ಎದುರ ಬದುರು ಬರಲಿ, ಗುಂಡಾಗಳನ್ನ ಕಟ್ಟಿಕೊಂಡು ಎಕ್ಸ್ ಎಂಪಿ ಓಡಾಡ್ತಾ ಇರ್ತಾನೆ, ಎಚ್ಚರದಿಂದ ಮಾತನಾಡಬೇಕು, ಬಾಯಿ ಸೇರಿದಂತೆ ಎಲ್ಲವನ್ನು ಮುಚ್ಚಿಕೊಂಡು ಇರಬೇಕು ಅಂತಾ ಎಚ್ಚರಿಕೆ ಕೊಡ್ತಾ ಇದ್ದೇನೆ ಎಂದು ಗುಟುರು ಹಾಕಿದ್ದಾರೆ.. ಬೈಯ್ಯೋ ತನಕ ಬೈಯ್ದು ಹೀಗ ಯಡಿಯೂರಪ್ಪಗೆ ಬೈದಿಲ್ಲ ಅಂತಾ ಹೇಳ್ತಾನೆ, ದುಡ್ಡು ಇಲ್ಲ ಅಂತಾ ಐದು ಕೋಟಿ ಇಸ್ಕೊಂಡು ಬಂದಿದ್ದಾನೆ, ಚುನಾವಣೆ ನಿಯಮ ಉಲ್ಲಂಘಿಸಿದ್ದಾರೆ ಎಂದು ನಮ್ಮ ಎಂಪಿ ಮೇಲೆ ಕೇಸ್ ಹಾಕಿಸಿದ್ದಾನೆ, ಅದು ಕೋರ್ಟ್ ನಲ್ಲಿ ನಿಲ್ಲೋದಿಲ್ಲ, ಜಾಸ್ತಿ ಜನ ಅವನ ವಿರುದ್ದವೇ ಆಗುತ್ತಾರೆ, ಬಿಜೆಪಿಯನ್ನ ಎರಡು ಭಾಗ ಮಾಡಿದ್ದಾನೆ, ಇನ್ಮೇಲೆ ನಾಲ್ಕು ಭಾಗ ಮಾಡುತ್ತಾನೆ, ಸೋತ ಮೇಲೆ ಮನೆಲಿ ಕೂತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇನ್ನೂ ದಾವಣಗೆರೆಗೆ ನಗರಕ್ಕೆ ಐನೂರು, ಗ್ರಾಮಾಂತರಕ್ಕೆ 1000ಮನೆ ಮಂಜೂರು ಆಗಿದೆ ಅಭಿವೃದ್ದಿ ಕೆಲಸಗಳು ದಾವಣಗೆರೆಯಲ್ಲಿ ಆಗುತ್ತಿವೆ, ಈ ಹಿಂದೇ ದೂಡಾದ ಬಿಜೆಪಿಯ ಅಧ್ಯಕ್ಷರು ಪತ್ನಿ, ಸಂಬಂಧಿಕರ ಹೆಸರಿಗೆ ಸೈಟ್ ಮಾಡಿಸಿಕೊಂಡು ಹೋಗಿದ್ದಾರೆ, ಆದರೆ ದಿನೇಶ್ ಶೆಟ್ಟಿ ಆಗೇ ಮಾಡೋದಿಲ್ಲ, ಅವರು ಬಡವರಿಗೆ ನಿವೇಶನ ಒದಗಿಸಿಕೊಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ..