POWER SAMACHARA | KANNADA NEWS | 11-05-2023
ದಾವಣಗೆರೆ: ಕಾತುರದಿಂದ ಕಾಯುತ್ತಿದ್ದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದೆ, ದಾವಣಗೆರೆ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಭದ್ರವಾಗಿದೆ..
ಸ್ಟ್ರಾಂಗ್ ರೂಂನಲ್ಲಿ ಮತಪೆಟ್ಟಿಗಳನ್ನ ಭದ್ರವಾಗಿಡಲಾಗಿದೆ, ಸ್ಟ್ರಾಂಗ್ ರೂಂ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ, ಜಿಲ್ಲೆಯಲ್ಲಿ 77.21 ರಷ್ಟು ಮತದಾನ ಆಗಿದ್ದು, 1113394 ಮಂದಿ ಮತದಾನ ಮಾಡಿದ್ದಾರೆ, ಇನ್ನೂ ಚುನಾವಣೆ ಶಾಂತಿಯುತವಾಗಿ ನಡೆದಿದೆ, ಯಾವುದೇ ಸಮಸ್ಯೆ ಆಗದಂತೆ ಫಲಿತಾಂಶವನ್ನು ಸಹ ನೀಡಬೇಕು ಎಂದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಿದ್ದತೆ ನಡೆಸಿದೆ, ಶನಿವಾರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಇನ್ನೂ ಚುನಾವಣೆ ಮುಗಿಸಿರುವ ಅಭ್ಯರ್ಥಿಗಳು ಇವತ್ತು ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ..