POWER SAMACHARA | KANNADA NEWS | BREKING NEWS| 07-04-2024
ದಾವಣಗೆರೆ: ಬೆಣ್ಣೆನಗರಿ ಬಿಜೆಪಿಯಲ್ಲಿ ತಣ್ಣಾಗಾಗಿದ್ದ ಬಂಡಾಯದ ಭೇಗುದಿ ಮತ್ತೆ ಕಿಡಿ ಹೊತ್ತಲು ಶುರು ಮಾಡಿದೆ, ಇತ್ತ ಕಾಂಗ್ರೆಸ್ ನಲ್ಲೂ ಬಂಡಾಯ ತಾರಕಕ್ಕೆ ಏರಿದ್ದು ಎರಡು ರಾಷ್ಟ್ರೀಯ ಪಕ್ಷಗಳಿಗೆ ರೆಬೆಲ್ಸ್ ಟೆನ್ಶನ್ ಮೇಲೆ ಟೆನ್ಶನ್ ಕೊಡ್ತಿದ್ದಾರೆ. ಕೈ ಬಂಡಾಯ ಅಭ್ಯರ್ಥಿ ಜೊತೆ ಸಿಎಂ ಸಂಧಾನ ಯತ್ನ ನಡೆಸಿದ್ರು ವಿಫಲ ಆಗಿದೆ ಎನ್ನಲಾಗಿದೆ..
ಹೌದು.. ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಹೇಳತೀರದಾಗಿದೆ, ಕೆಎಸ್ ಈಶ್ವರಪ್ಪ ಬಂಡಾಯದ ಬೆಂಕಿ ಹೆಚ್ಚಾಗುತ್ತಲೇ ಇದೆ, ಇತ್ತ ಬಿಜೆಪಿ ಭದ್ರಕೋಟೆ ಬೆಣ್ಣೆನಗರಿ ದಾವಣಗೆರೆಯಲ್ಲಿ ತಣ್ಣಗಾಗಿದ್ದ ಬಂಡಾಯ ಮತ್ತೆ ಕಿಡಿ ಹೊತ್ತಲು ಶುರು ಮಾಡಿದೆ, ಸತತ ನಾಲ್ಕು ಭಾರೀ ಅನಾಯಾಸವಾಗಿ ಗೆದ್ದು ಬಂದಿದ್ದ ಜಿಎಂ ಸಿದ್ದೇಶ್ವರ್ ಗೆ ರೆಬೆಲ್ಸ್ ಟೆನ್ಶನ್ ಮೇಲೆ ಟೆನ್ಶನ್ ತರಿಸಿದೆ. ಬಿಎಸ್ ಯಡಿಯೂರಪ್ಪ ಬಂದು ಬಂಡಾಯ ಶಮನ ಮಾಡಿದ್ರು, ಒಳಗಿನ ಕಿಡಿ ತಣ್ಣಗೆ ಆದಂತಿಲ್ಲ, ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ, ಕರುಣಾಕರ ರೆಡ್ಡಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆ ಹೋಗಿಲ್ಲ, ಹೀಗಾಗಿ ಮತ್ತೊಮ್ಮೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ದಾವಣಗೆರೆಗೆ ಭೇಟಿ ನೀಡಿ ಸಂಧಾನದ ತೇಪೆ ಹಚ್ಚಿ ಹೋಗಿದ್ದಾರೆ..
ಕೈ ನಲ್ಲೂ ಬಂಡಾಯದ ಬೇಗುಧಿ, ಸಿಎಂ ಸಂಧಾನ ಫೇಲ್…
ಇತ್ತ ಸತತ ಆರು ಭಾರೀ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈ ಭಾರೀ ಶತಾಯಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆ, ಕಾಂಗ್ರೆಸ್ ನಿಂದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಪ್ರಚಾರ ನಡೆಸ್ತಾ ಇದ್ದಾರೆ, ಆದರೆ ಅಹಿಂದ ಸಮುದಾಯದ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ವಿನಯ್ ಕುಮಾರ್ ಪಾದಯಾತ್ರೆ ಮೂಲಕ ಗಮನ ಸೆಳೆದಿದ್ದರು, ಆದರೆ ವಿನಯ್ ಗೆ ಟಿಕೆಟ್ ಕೈ ತಪ್ಪಿತ್ತು, ಈ ಹಿನ್ನಲೆ ಟಿಕೆಟ್ ವಂಚಿತ ವಿನಯ್ ಕುಮಾರ್, ದುಡುಕಿನ ನಿರ್ಧಾರ ತೆಗೆದುಕೊಳ್ಳದೇ ಜಿಲ್ಲೆಯಾದ್ಯಂತ ಅಭಿಪ್ರಾಯ ಸಂಗ್ರಹ ಮಾಡಿದ್ರು, ಈ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವಂತೆ ಸಲಹೆ ಬಂದ ಹಿನ್ನಲೆ ಪಕ್ಷೇತರ ಸ್ಪರ್ಧೆಗೆ ವಿನಯ್ ರೆಡಿ ಆಗಿದ್ರು, ಆದರೆ ಇತ್ತ ಸ್ವತಃ ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೆಂಗಳೂರಿನ ಸಂಧಾನ ಸಭೆ ನಡೆದಿದೆ, ಎಲ್ಲರು ಸಂಧಾನ ಅಂತಲೇ ಭಾವಿಸಿದ್ರು ಆದರೆ ಮತ್ತೆ ವಿಡಿಯೋ ಬಿಡುಗಡೆ ಮಾಡುವ ಮೂಲಕ ವಿನಯ್ ಕುಮಾರ್ ಟ್ವಿಸ್ಟ್ ಕೊಟ್ಟಿದ್ದಾರೆ. ಯಾವುದೇ ಸಂಧಾನ ಆಗಿಲ್ಲ, ಸಿಎಂ ಜೊತೆ ಸೌಜನ್ಯದ ಭೇಟಿ ಆಗಿದೆ, ಪಕ್ಷೇತರ ಸ್ಪರ್ಧೆ ಮಾಡಿದ್ರೆ ಗೆಲ್ಲೋದಾಗಿ ಸಿಎಂ ಗೆ ತಿಳಿಸಿದ್ದೇನೆ, ಅವರು ಇನ್ನೂ ಅವಕಾಶ ಇದೆ ಬೇಡ ಎಂದಿದ್ದಾರೆ, ಆದರೆ ನಾನು ಪಕ್ಷೇತರ ಸ್ಪರ್ಧೆಗೆ ತಯಾರಿದ್ದೇನೆ, ನಾಳೆ ಬೆಂಬಲಿಗರ ಸಭೆ ಕರೆದಿದ್ದೇನೆ ಎಂದು ತಿಳಿಸಿದ್ದು ಕಾಂಗ್ರೆಸ್ ಗೆ ಮತ್ತೆ ಟೆನ್ಶನ್ ಶುರುವಾಗಿದೆ..
ಒಟ್ಟಾರೆ ಗ್ಯಾರಂಟಿ ಅಲೆ ಮೂಲಕ ಈ ಭಾರೀಯಾದರು ಕಾಂಗ್ರೆಸ್ ಗೆಲ್ಲೋ ಉತ್ಸಹದಲ್ಲಿ ಇತ್ತು, ಆದ್ರೆ ವಿನಯ್ ಕುಮಾರ್ ಬಂಡಾಯದಿಂದ. ಎಲ್ಲಾ ತಲೆಕೆಳಗಾಗೋ ಲಕ್ಷಣ ಕಾಣ್ತಿದೆ, ವಿನಯ್ ಸ್ಪರ್ಧೆ ಮಾಡಿದ್ದೆ ಆದ್ರೆ ಅಹಿಂದ ಮತಗಳು ಚದುರಲಿದ್ದು ಕೈ ಪಕ್ಷಕ್ಕೆ ಹಿನ್ನಡೆಯಾಗೋದು ಪಕ್ಕಾ ಗ್ಯಾರಂಟಿ ಎಂದೇ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ..