POWER SAMACHARA | KANNADA NEWS | BREKING NEWS| 29-08-2023..
ದಾವಣಗೆರೆ: ಆ ದೇವಸ್ಥಾನಗಳನ್ನ ಅಲ್ಲಿನ ಗ್ರಾಮಸ್ಥರು ಕಷ್ಟಪಟ್ಟು ನಿರ್ಮಿಸಿದ್ದರು, ಅಷ್ಟೆ ಭಕ್ತಿ ಭಾವದಿಂದ ಪೂಜಿಸುತ್ತಿದ್ದರು, ಅಲ್ಲಿನ ಪೂಜಾರಿ ಕೂಡ ದೇವಸ್ಥಾನಗಳನ್ನು ಅಚ್ಚುಕಟ್ಟಾಗಿ ಇಟ್ಟಿದ್ದ, ಆದರೆ ಒಂದು ದಿನ ಪೂಜಾರಿ ಮನೆಯಲ್ಲಿ ಸಾವಾಗಿದ್ದು, ಇಡೀ ಗ್ರಾಮ ಪೂಜಾರಿ ಮನೆಯಲ್ಲಿ ಶೋಕದಲ್ಲಿ ಮುಳುಗಿದ್ದರು, ಈ ಕ್ಷಣವನ್ನೆ ಬಂಡವಾಳವಾಗಿಸಿಕೊಂಡ ಖದೀಮರು ದೇವರನ್ನೆ ಕದ್ದೋಯ್ದಿದ್ದಾರೆ..
ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು
ಹೌದು. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊದಲೆಲ್ಲ ಮನೆಗಳಲ್ಲಿ, ಬ್ಯಾಂಕ್ ಗಳಲ್ಲಿ ದರೋಡೆ, ಕಳ್ಳತನ ಆಗುತ್ತಿದ್ದವು, ಅಲ್ಲೆಲ್ಲ ಸಿಸಿ ಟಿವಿ, ಸೆಕ್ಯುರಿಟಿ ನೇಮಕವಾದ ಬಳಿಕ ಕಳ್ಳರು ತನ್ನ ರೂಟನ್ನ ಚೇಂಜ್ ಮಾಡಿಕೊಂಡಿದ್ದಾರೆ, ದೇವಸ್ಥಾನಗಳಿಗೆ ಕನ್ನ ಹಾಕುವುದು, ಗದ್ದೆಗಳಲ್ಲಿ ಮೋಟರ್ ಖದಿಯುವುದು ಹೆಚ್ಚಾಗಿದೆ, ಅದರಂತೆ ರಾಜಹಳ್ಳಿ ಗ್ರಾಮದಲ್ಲಿ ಗರ್ಭ ಗುಡಿಯಲ್ಲಿದ್ದ ದೇವರನ್ನೇ ಖತರ್ನಾಕ್ ಕಳ್ಳರು ಎಗರಿಸಿದ್ದಾರೆ, ರಾಜನಹಳ್ಳಿಯಲ್ಲಿ ಒಂದುವರೆ ವರ್ಷದಲ್ಲಿ ಕಳ್ಳರು ಮೂರು ದೇವಸ್ಥಾನಗಳನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ಯಲ್ಲಪ್ಪ ಆರೋಪಿಸಿದ್ದರು..
ಪೂಜಾರಿ ಮನೆಯಲ್ಲಿ ಸಾವು: ಇತ್ತ ಕಳ್ಳರ ಕೈ ಚಳಕ..
ಒಂದು ವರ್ಷದ ಹಿಂದೆ ಗ್ರಾಮದ ಅಂಬಾಭವಾನಿ ದೇವಸ್ಥಾನದ ಹುಂಡಿ ಕಳ್ಳರು ಹೊತ್ತೋಯ್ದಿದ್ದರು, ಕಳೆದೆರಡು ತಿಂಗಳ ಹಿಂದೆ ಗ್ರಾಮದ ಹೃದಯ ಭಾಗದ ಚಂದ್ರಗುತ್ತಿ ದೇವಸ್ಥಾನದ ಹುಂಡಿ ಒಡೆದು 5 ಲಕ್ಷ ರೂ ಕಳ್ಳತನ ಮಾಡಲಾಗಿತ್ತು, ಈ ಬಾರಿ ದೇವರ ಮೂರ್ತಿಯನ್ನೆ ಕಳ್ಳರು ಕದ್ದೊಯ್ದಿದ್ದಾರೆ, ಕಳೆದೆರಡು ದಿನಗಳ ಹಿಂದೆ ಚಂದ್ರಗುತ್ತಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲಿ ಗ್ರಾಮದ ಮಧ್ಯಭಾಗದಲ್ಲಿ ಇರುವ ಬೀರಪ್ಪ ದೇವಸ್ಥಾನದಲ್ಲಿ ಕಳ್ಳರು ಕನ್ನ ಹಾಕಿದ್ದಾರೆ, ದೇವಸ್ಥಾನದಲ್ಲಿದ್ದ ಎಲ್ಲಾ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ, ಪಲ್ಲಕ್ಕಿಯಲ್ಲಿಡುವ ಬೀರಪ್ಪ ದೇವರ ಮೂರ್ತಿ ಸೇರಿ ಅಲಂಕಾರದ ಆಭರಣ ಕಳುವು ಮಾಡಲಾಗಿದೆ, ಸುಮಾರು 8ರಿಂದ 9, ಲಕ್ಷ ಮೌಲ್ಯದ 12 kgಯಷ್ಟು ಬೆಳ್ಳಿ ಕಳ್ಳತನ ಮಾಡಲಾಗಿದೆ, ದೇವಸ್ಥಾನದ ಪೂಜಾರಿಗಳ ಮನೆಯಲ್ಲಿ ಸಾವು ಸಂಭವಿಸಿತ್ತು, ಅಲ್ಲಿ ಗ್ರಾಮದವರೆಲ್ಲ ಸೇರಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡುತ್ತಿದ್ದರು, ದೇವಸ್ಥಾನ ಬಳಿ ಯಾರು ಇಲ್ಲದನ್ನು ನೋಡಿ ಖದೀಮರು ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಕೆಲವೇ ನಿಮಿಷಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ, ಇನ್ನೂ ಸ್ಥಳಕ್ಕೆ ಹರಿಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಕಳ್ಳರನ್ನು ಹಿಡಿದು, ದೇವಸ್ಥಾನಗಳಿಗೆ ಸರಿಯಾದ ರಕ್ಷಣೆ ಒದಗಿಸುವಂತೆ ರೈತ ಸಂಘದ ಮುಖಂಡ ಪರಶುರಾಮ್ ಒತ್ತಾಯಿಸಿದ್ದಾರೆ..
ಒಟ್ಟಾರೆ ಎಲ್ಲರನ್ನು ಕಾಯುವ ದೇವರನ್ನೆ ಖದೀಮರು ಬಿಟ್ಟಿಲ್ಲ, ದೇವಸ್ಥಾನ, ಹೊಲಗಳಲ್ಲಿ ಖದೀಮರ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಿಗೆ, ರೈತರಿಗೆ ತಲೆ ನೋವು ತರಿಸಿದೆ. ಇನ್ನಾದರು ಪೊಲೀಸ್ ಇಲಾಖೆ ಖದೀಮರ ಎಡೆಮುರಿ ಕಟ್ಟಬೇಕಿದೆ..