POWER SAMACHARA | KANNADA NEWS | BREKING NEWS| 15-08-2023..
ದಾವಣಗೆರೆ: ರಿಯಲ್ ಸ್ಟಾರ್ ಉಪೇಂದ್ರ ಹೊಲಿಗೇರಿ ಎಂಬ ವಿವಾದಾತ್ಮಕ ಪದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು, ಈ ಪ್ರಕರಣದ ಬೆನ್ನಲ್ಲೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಕ್ಷೇಪಾರ್ಯ ಹೇಳಿಕೆ ನೀಡಿರುವ ವಿಡಿಯೋ ಒಂದು ವೈರಲ್ ಆಗಿದ್ದು ರಾಜಕೀಯ ತಿರುವು ಪಡೆದಿದೆ..
ನಟ ಉಪೇಂದ್ರ ಹೊಲಿಗೆರೆ ಪದ ಪ್ರಯೋಗಿಸಿದ್ದರಿಂದ ಉಪೇಂದ್ರ ಅವರ ಮೇಲೆ ಎಫ್ ಐಆರ್ ದಾಖಲಾಗಿತ್ತು, ಈ ಬೆನ್ನಲ್ಲೇ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಮಾತನಾಡಿರುವ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ, ಉತ್ತಮ ಪ್ರಜಾಕೀಯ ಪಕ್ಷ ದಾವಣಗೆರೆ ಫೇಸ್ ಬುಕ್ ಪೇಜ್ ನಿಂದ ವಿಡಿಯೋ ವೈರಲ್ ಮಾಡಲಾಗಿದೆ. ಈ ವಿಡಿಯೋದಿಂದ ಯಾರ ಭಾವನೆಗೂ ದಕ್ಕೆ ಆಗಿಲ್ಲ ಅಲ್ವಾ..!? ತಾಕತ್ತು, ದಮ್ಮು ಇದ್ದವರು ಇವರ ಮೇಲೆ ಕೇಸ್ ಹಾಕೊಳ್ಳಿ ಎಂದು ಕಾರ್ಯಕರ್ತರು ಬರೆದುಕೊಂಡು ಟಾಂಗ್ ನೀಡಿದ್ದಾರೆ.
ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲು..!?
ನಟ ಉಪೇಂದ್ರಗೆ ಒಂದು, ಸಚಿವ ಮಲ್ಲಿಕಾರ್ಜುನ್ ಗೆ ಒಂದು ಕಾನೂನಾ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಇನ್ನೂ ಉಪೇಂದ್ರ ಪ್ರಕರಣದಲ್ಲಿ ಉಪೇಂದ್ರ ಅವರ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಕಾರಿದ್ದರು, ಈ ಹಿನ್ನಲೆ ಪ್ರಿಯಾಂಕ್ ಖರ್ಗೆ ಅವರಿಗೆ ಎಸ್ ಎಸ್ ಮಲ್ಲಿಕಾರ್ಜುನ್ ಅವರ ವಿಡಿಯೋ ಹಾಕಿ ಟ್ಯಾಗ್ ಮಾಡಿ ಉತ್ತರಿಸಿ ಎಂದು ಪಟ್ಟು ಹಿಡಿದಿದ್ದಾರೆ. ವಿವಾದಾತ್ಮಕ ಹೇಳಿಕೆ ಹಿನ್ನಲೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮೇಲೆ ದಲಿತ ಸಂಘಟನೆಗಳು, ಮುಖಂಡರು ಕೇಸ್ ದಾಖಲಿಸ್ತಾವ ಅಥವಾ ಮೌನ ವಹಿಸುತ್ತಾವ ಕಾದು ನೋಡಬೇಕಿದೆ. ಇನ್ನೂ ಈ ಬಗ್ಗೆ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಿವಾಕರ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದ್ದು ದೂರು ದಾಖಲಾದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ..
ವಿಡಿಯೋದಲ್ಲಿ ಏನಿದೆ…!?
ಭಾರೀ ಸಂಚಲನಕ್ಕೆ ಕಾರಣವಾಗಿರುವ ವಿಡಿಯೋದಲ್ಲಿ ಏನಿದೆ ಎಂದು ಎಲ್ಲರಿಗೂ ಕುತೂಹಲ ಇದೆ, ಈ ವಿಡಿಯೋ ರಿಲೀಸ್ ಆದಾಗ ಅಂತಹದ್ದೇನು ವಿವಾದ ಕೇಳಿ ಬಂದಿರಲಿಲ್ಲ, ಆದರೆ ನಟ ಉಪೇಂದ್ರ ಪ್ರಕರಣ ಭಾರೀ ಸದ್ದು ಮಾಡಿದ ಬಳಿಕ ಈಗ ಈ ಹಳೇ ವಿಡಿಯೋ ಸಖತ್ ವೈರಲ್ ಆಗುತ್ತಿದೆ, ವಿಡಿಯೋ ವೈರಲ್ ನಿಂದ ಸಚಿವರಿಗೆ ಸಂಕಷ್ಟ ಕಾದಿದ್ಯಾ ಅನ್ನೋ ಪ್ರಶ್ನೆ ಎದುರಾಗಿದೆ, ಕಳೆದ ವಿಧಾನಸಭೆ ಚುನಾವಣೆ ಮುನ್ನ ಅಂದರೆ ಮೇ ತಿಂಗಳಿನಲ್ಲಿ ಈ ಒಂದು ಸಂದರ್ಶನ ಮಾಡಲಾಗಿತ್ತು, ಸಂದರ್ಶನದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಶ್ನೆ ಕೇಳುತ್ತಾ, ಅಶೋಕ ಥಿಯೇಟರ್ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನೂ ಎಂದು ಪ್ರಶ್ನೆ ಮಾಡುತ್ತಾರೆ, ಪ್ರಶ್ನೆಗೆ ಉತ್ತರಿಸಿದ ಎಸ್ ಎಸ್ ಮಲ್ಲಿಕಾರ್ಜುನ್, ಈ ಪ್ರಶ್ನೆ ಸಂಸದ ಸಿದ್ದೇಶ್ವರ್ ಗೆ ಕೇಳಬೇಕು. ಅಂಡರ್ ಪಾಸ್ ಗೆ ಎರಡು ಸರಿ ತಿರುಗಿ ಹೋಗಬೇಕು. ತಿರುವಿನಲ್ಲಿ ಜಾಸ್ತಿ ಜಾಗ ಬಿಡಬೇಕಿತ್ತು, ಇದೇ ರೀತಿ ಎಲ್ಲಾ ಕಡೇ ಹಾಳು ಮಾಡಿದ್ದಾರೆ, ಡಿಸಿಎಂ ಬಳಿಯ ಬ್ರಿಡ್ಜ್ ನ್ನು ಹಾಳು, ಆಗ ಕೇಂದ್ರದವರಿಗೆ ಕರೆದು ಬೈದಿದ್ದೆ, ನಿಮ್ಮ ಮನೆಗಿಂದ ಹಣ ಕೊಡುವುದಿಲ್ಲ, ಪ್ಲಾನಿಂಗ್ ಮಾಡುವುದಾದರೆ ಸರಿಯಾಗಿ ಮಾಡಿ, ಊರನ್ನು ಹೊಲಗೇರಿ ಮಾಡಬೇಡಿ, ಸ್ವಚ್ಚವಾಗಿಡಿ ಎಂದಿದ್ದೆ, ಬ್ರಿಡ್ಜ್ ಹಾವು ಹೋದಂತೆ ಆಗಿತ್ತು, ರಾಷ್ಟ್ರೀಯ ಹೆದ್ದಾರಿ ಬಳಿ ಬ್ರಿಡ್ಜ್ ಗಳನ್ನು ಹಾಳು ಮಾಡಿದ್ದಾರೆ, ಕಾರು ತೆಗೆದುಕೊಂಡು ಹೋದರೆ ಕೆಳಗೆ ಇಳಿದು ನೋಡಿಕೊಂಡು ಬಳಿಕ ಹೋಗಬೇಕು ಎಂದು ಸಂದರ್ಶನ ವೇಳೆ ಹೇಳಿದ್ದರು.. ಸದ್ಯ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ, ಉಪೇಂದ್ರ ಅಭಿಮಾನಿಗಳು ತಾಕತ್ತು ದಮ್ಮು ಇದ್ದರೆ ಇವರ ಮೇಲೆ ಕೇಸ್ ಹಾಕೊಳ್ಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದಾರೆ..
ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು..?