POWER SAMACHARA | KANNADA NEWS | BREKING NEWS| 16-04-2024
ದಾವಣಗೆರೆ : ನಿಮ್ಮ ಪ್ರಧಾನಿ ಅಭ್ಯರ್ಥಿ ಹೆಸರೇಳಿ ನೋಡೋಣ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ..
ದಾವಣಗೆರೆ ಜಿ ಎಂಐಟಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಬಿಎಸ್ ವೈ, ಪ್ರಧಾನಿ ಅಭ್ಯರ್ಥಿ ಹೆಸರು ಹೇಳೋಕೆ ಆಗ್ತಾ ಇಲ್ಲ ಎಂದು ಲೇವಡಿ ಮಾಡಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆಯಾಗಿದೆ, ರಾಜ್ಯದಲ್ಲಿ ಎಲ್ಲಾ ಕಡೆ ಬೆಂಬಲ ಸಿಗುತ್ತಿದೆ, 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ, ದಾವಣಗೆರೆ ಅಭ್ಯರ್ಥಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮತ್ತೊಮ್ಮೆ ಬರಲು ಪ್ರಯತ್ನಿಸುತ್ತೇನೆ, ಮೋದಿ ಮತ್ತೊಮ್ಮೆ ಗೆದ್ದು ಪ್ರಧಾನಿ ಆಗಲಿದ್ದಾರೆ ಎಂದರು..
ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಲು ಜೇನಿನಂತೆ ಇರುತ್ತದೆ
ಬರುವ ದಿನಗಳಲ್ಲಿ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಲು ಜೇನಿನಂತೆ ಇರುತ್ತದೆ, ಗರೀಬ್ ಕಲ್ಯಾಣ ಯೋಜನೆ, ಅಯುಷ್ಮಾನ್ ಭಾರತ್ ಯೋಜನೆ, ಪಿಎಂ ಆವಾಜ್, ಹಲವು ಯೋಜನೆ ಜಾರಿ ಮಾಡಲಾಗಿದೆ, ಬಿಜೆಪಿ ಜೆಡಿಎಸ್ ಸೇರಿ 28 ಕ್ಷೇತ್ರ ಗೆಲ್ಲುತ್ತೇವೆ, ಪ್ರಧಾನಿ ಮೋದಿ ಮತ್ತು ದೇವೇಗೌಡರ ಸಹಮತದಿಂದ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ, ಮುಂದೆಯೂ ನಾವು ಜೆಡಿಎಸ್ ಜೊತೆ ಭಾಂದವ್ಯ ಮುಂದುವರೆಸುತ್ತೇವೆ ಎಂದರು..
ಮೋದಿ ಮುಂದೆ ಗ್ಯಾರಂಟಿ ಗೌಣ..
ಗ್ಯಾರಂಟಿಯಿಂದ ಬಿಜೆಪಿಗೆ ಹಿನ್ನಡೆ ವಿಚಾರ ಮಾತನಾಡಿದ ಬಿಎಸ್ ವೈ, ಯಾವ ಗ್ಯಾರಂಟಿನೂ ಎಫೆಕ್ಟ್ ಆಗಲ್ಲ, ಮೋದಿ ಮುಂದೇ ಗ್ಯಾರಂಟಿ ಗೌಣ, ಮೋದಿ ಮತ್ತೆ ಗೆದ್ದು ಪ್ರಧಾನಿಯಾಗಲಿದ್ದಾರೆ ಎಂದು ದಾವಣಗೆರೆಯಲ್ಲಿ ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು..
ಕಾಂಗ್ರೆಸ್ ನಿಂದ ಅಂಬೇಡ್ಕರ್ ಗೆ ಅಪಮಾನ..!
ಜೆಡಿಎಸ್ – ಬಿಜೆಪಿ ಒಟ್ಟಾಗಿ ಮೈಸೂರಿನಲ್ಲಿ ಯಶಸ್ವಿ ಸಮಾವೇಶ ಮಾಡಿದ್ದೇವೆ, ರಾಜ್ಯದಲ್ಲಿ ಎಲ್ಲೆಡೆ ಒಳ್ಳೆಯ ಸ್ವಾಗತ ಸಿಗುತ್ತಿದೆ, 28ಕ್ಕೆ 28 ಕ್ಷೇತ್ರ ಗೆಲ್ಲುವ ಪ್ರಯತ್ನ ಮಾಡುತ್ತೇವೆ, ಬಿಜೆಪಿ – ಜೆಡಿಎಸ್ ಹೊಂದಾಣಿಕೆಯಿಂದ ನಿಶ್ಚಿತ ಗುರಿ ಹೊಂದುವ ವಿಶ್ವಾಸ ಇದೆ, ಕಾಂಗ್ರೆಸ್ ಎಸ್ಸಿ, ಎಸ್ಟಿ ವಿರೋಧಿ ಧೋರಣೆ ಹೊಂದಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ರಿಗೆ ಭಾರತ ರತ್ನ ಕೊಡಲಿಲ್ಲ, ಗಾಂಧಿ ಕುಟುಂಬಕ್ಕೆ ಎಲ್ಲರಿಗೂ ಕೊಟ್ಟರು, ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಆರಡಿ ಮೂರಡಿ ಜಾಗ ಕೊಡಲಿಲ್ಲ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸ್ಮಾರಕಕ್ಕೆ ಜಾಗ ಕೊಟ್ಟಿದ್ದಾರೆ, ಅಂಬೇಡ್ಕರ್ ಗೆ ಅಪಮಾನ ಮಾಡಿದ್ದು ಸರಿನಾ, ಅಂಬೇಡ್ಕರ್ ಅವರಿಗೆ ಮೋದಿ ಸರ್ಕಾರ ಹೆಚ್ಚಿನ ಗೌರವ ಕೊಟ್ಟಿದೆ, ಅವರ ಹುಟ್ಟಿದ ಊರನ್ನೂ ಅಭಿವೃದ್ದಿ ಪಡಿಸಿದೆ, ಬೌದ್ದ ಧರ್ಮ ಸೇರಿದ ಜಾಗವನ್ನ ದೀಕ್ಷಾ ಭೂಮಿಯಾಗಿ ಅಭಿವೃದ್ದಿಪಡಿಸಿದೆ, ಲಂಡನ್ ನಲ್ಲಿ ಓದಿದ ಜಾಗವನ್ನ ಹಾಸ್ಟೇಲ್ ಮಾಡಿದೆ, ಮುಂಬೈನಲ್ಲಿರುವ ಸಮಾಧಿಯನ್ನ ಅಭಿವೃದ್ದಿಪಡಿಸಿದೆ, ಸಚಿವರಾಗಿ ಕೆಲಸ ಮಾಡಿದ ಮನೆಯನ್ನ ಮೂಸಿಯಂ ಮಾಡಿದೆ, ಆದರೆ ಕಾಂಗ್ರೆಸ್ ಹೆಜ್ಜೆ ಹೆಜ್ಜೆ ಗೂ ಅಂಬೇಡ್ಕರನ್ನ ಅಪಮಾನ ಮಾಡಿದೆ, ಎರಡು ಭಾರೀ ಸೋಲಿಸುವ ಪ್ರಯತ್ನ ಮಾಡಿದೆ, ಎಸ್ಸಿಗೆ ಮೀಸಲಿಟ್ಟ 11ಸಾವಿರ ಕೋಟಿ ಹಣ ಬೇರೆಡೆ ವರ್ಗಾಯಿಸಲಾಗಿದೆ, ಹೀಗೆ ದಲಿತರಿಗೆ ಒಂದಿಲ್ಲೊಂದು ಅನ್ಯಾಯ ಮಾಡಿದೆ ಎಂದು ದೂರಿದರು..