POWER SAMACHARA | KANNADA NEWS | BREKING NEWS| 25-12-2023..
ದಾವಣಗೆರೆ; ರೈತ ದೇಶದ ಬೆನ್ನೆಲುಬು ಅಂತಾ ಕರೀತಾರೆ, ಆದ್ರೆ ಒಂದಿಲ್ಲೊಂದು ಸಮಸ್ಯೆಗೆ ಸಿಲುಗಿ ರೈತನಿಗೆ ತನ್ನ ಬೆನ್ನೆಲುಬು ಮುರಿದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತಲೇ ಇರುತ್ತೆ, ಒಂದು ಪ್ರಕೃತಿ ಮುನಿಸಿಗೆ ರೈತ ಹಾಳಾದ್ರೆ, ಇನ್ನೊಂದು ಕಡೇ ಜೊತೆಗೆದ್ದ ಜನರಿಂದಲೇ ಬೆಳೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತೆ, ಇಲ್ಲೊಂದು ಗ್ರಾಮದಲ್ಲಿ ದುರುಳರ ಅಟ್ಟಹಾಸಕ್ಕೆ ಸ್ವಚ್ಚೆಂದವಾಗಿ ಬೆಳೆದಿದ್ದ ಅಡಿಕೆ ತೋಟ ನಾಶವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ….
ಹೌದು.. ಈ ಮನಕಲುಕುವ ಘಟನೆ ನಡೆದಿದ್ದು, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿಯಲ್ಲಿ. ಗ್ರಾಮದ ಪರಮೇಶಪ್ಪ, ನಾಗಮ್ಮ ದಂಪತಿಗಳು ಎರಡು ಎಕರೆಯಲ್ಲಿ ಸುಮಾರು ಎರಡು ವರ್ಷದಿಂದ ಒಂದುವರೆ ಸಾವಿರ ಅಡಿಕೆ ಗಿಡಗಳನ್ನೂ ಕಷ್ಟಪಟ್ಟು ಮಕ್ಕಳಂತೆ ಸಾಕಿದ್ದರು, ಅಡಿಕೆಗೆ ಉತ್ತಮ ದರ ಸಿಗುತ್ತಿದೆ ಎಂದು ಭತ್ತದ ಬದಲು ಎರಡು ವರ್ಷಗಳ ಹಿಂದೆ ಅಡಿಕೆ ಕೂರಿಸಿದ್ರು, ಎರಡು ವರ್ಷದ ಅಡಿಕೆ ಗಿಡಗಳು ತುಂಬಾ ಚೆನ್ನಾಗಿ ಬೆಳೆಯುತ್ತಿದ್ದವು, ಇನ್ನೆರಡು ವರ್ಷ ಆಗಿದ್ದರೆ ಫಸಲು ಕೈ ಸೇರುತ್ತಿತ್ತು, ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ಬರೋಬ್ಬರಿ ಒಂದುವರೆ ಸಾವಿರ ಅಡಿಕೆ ಗಿಡಗಳು ನಾಶವಾಗಬಿಟ್ಟಿದ್ದು, ಇಡೀ ಕುಟುಂಬ ಕಣ್ಣೀರಿಡುತ್ತಿದೆ..
ಅಷ್ಟಕ್ಕೂ ಅಡಿಕೆ ಗಿಡ ಕಡಿದಿದ್ದು ಯಾರು, ಯಾಕೆ ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲ, ಜಮೀನು ವ್ಯಾಜ್ಯದಿಂದ ಸಂಬಂಧಿಕರಿಂದಲೇ ಹೀಗಾಗಿರಬಹುದು ಅಥವಾ ಹಳೇ ವೈಷ್ಯಮ್ಯದಿಂದ ಅಡಿಕೆ ಗಿಡ ಕಡಿಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ, ಪರಮೇಶಪ್ಪ ಅವರ ಪತ್ನಿ ನಾಗಮ್ಮ, ನೀರು ಇಲ್ಲದ ಸಂದರ್ಭದಲ್ಲಿ ಕೊಡದಲ್ಲಿ ನೀರು ತಂದು ಭಾರೀ ಕಷ್ಟ ಪಟ್ಟು ಅಡಿಕೆ ಗಿಡ ಉಳಿಸಿದ್ದರು, ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೊಲದಲ್ಲೇ ಇದ್ದು ಅಡಿಕೆ ಗಿಡ ಉಳಿಸಿ, ಬೆಳೆಸಿದ್ದರು, ಆದರೆ ದುರುಳರ ದುಷ್ಕ್ಯ್ರತ್ಯಕ್ಕೆ ಇಡೀ ತೋಟ ನಾಶ ಅಗಿದೆ, ಎರಡೂ ಎಕರೆಯಲ್ಲಿನ ಅಡಿಕೆ ಗಿಡಗಳನ್ನೂ ಕತ್ತರಿಸಿ ಹಾಕಲಾಗಿದೆ, ಘಟನೆಯಿಂದ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತೆ ಆಗಿದೆ, ಇನ್ನೂ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಗ್ ಸ್ಕ್ವಾಡ್ ಮತ್ತು ಬೆರಳಚ್ಚು ತಜ್ಞರು ಎಂಟ್ರಿಯಾಗಿದ್ದರು, ಕೊಂಚ ವಾಸನೆ ಕಂಡು ಹಿಡಿದು ಹೊರಟ್ಟಿದ್ದ ಡಾಗ್ ಸ್ವ್ಕಾಡ್ ಗೆ ಮತ್ತೆ ದಾರಿ ಸಿಗಲಿಲ್ಲ, ಆದರೂ ಕೆಲ ಸುಳಿವು ಸಿಕ್ಕಿದೆ ಎನ್ನಲಾಗಿದೆ..ದ್ವೇಷ ಇದ್ದರೆ ಎದುರು ಬದರು ಹೊಡೆದಾಡಲಿ, ಈ ರೀತಿ ಫಸಲು ಹಾಳು ಮಾಡುವ ನೀಚ ಕೆಲಸಕ್ಕೆ ಮುಂದಾಗಬಾರದು ಎಂದು ಗ್ರಾಮಸ್ಥರು ಸಹ ಮರುಕ ವ್ಯಕ್ತಪಡಿಸಿದ್ದಾರೆ…
ಒಟ್ಟಾರೆ ದಾವಣಗೆರೆ ಜಿಲ್ಲೆಯಾದ್ಯಂತ ಇಂತಹ ಪ್ರಕರಣಗಳು ಮರುಕಳುಹಿಸುತ್ತಲೇ ಇವೆ, ಕಿಡಿಗೇಡಿಗಳು ಹಳೇ ದ್ವೇಷಗಳಿಗೆ, ಜಮೀನು ವ್ಯಾಜ್ಯಗಳ ಹಿನ್ನಲೆ ಇಟ್ಟುಕೊಂಡು ಅಡಿಕೆ ತೋಟಗಳನ್ನು ನಾಶ ಮಾಡುವುದು, ಅಡಿಕೆ ಗಿಡ ಬುಡದ ಸಮೇತ ಸುಟ್ಟು ಹೋಗುವ ಹಾಗೇ ಔಷಧಿ ಹಾಕುವಂತಹ ದುಷ್ಟ ಕೆಲಸಗಳಿಗೆ ಕೈ ಹಾಕುತ್ತಿರುವುದು ದುರಂತವೇ ಸರಿ.. ಮುಕ್ತೇನಹಳ್ಳಿಯಲ್ಲಿ ಮಕ್ಕಳಂತೆ ಸಾಕಿದ್ದ ಅಡಿಕೆ ಗಿಡಗಳು ನಾಶವಾಗಿದ್ದು, ಪೊಲೀಸರು ದುರುಳರ ಎಡೆಮುರಿ ಕಟ್ಟಿ, ತಕ್ಕ ಪಾಠ ಕಲಿಸ್ಬೇಕಿದೆ..