BIG EXCLUSIVE
ದಾವಣಗೆರೆ : ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನಲೆ ಹಳೇ ದಾವಣಗೆರೆ ಭಾಗದಲ್ಲಿ ಕೆಲವೊತ್ತು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ..
ದಾವಣಗೆರೆ ನಗರದ ವೆಂಕಟೇಶ್ವರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಬೇತೂರು ರಸ್ತೆ ಕ್ರಾಸ್ ಬಳಿಯ ಗಣೇಶ ವಿಸರ್ಜನೆ ಮೆರವಣಿಗೆ ಹೊರಟ್ಟಿತ್ತು, ಈ ವೇಳೆ ವೆಂಕಟೇಶ್ವರ ವೃತ್ತಕ್ಕೆ ಮೆರವಣಿಗೆ ಬಂದಾಗ ಅನ್ಯ ಕೋಮಿನ ಜನರು ಘೋಷಣೆ ಕೂಗಲಾರಂಭಿಸಿದರು, ಜೈ ಶ್ರೀ ರಾಮ್ ಎಂದು ಹಿಂದು ಪರ ಕಾರ್ಯಕರ್ತರಿಂದ ಘೋಷಣೆ ಕೂಗಿದ್ರೆ, ಇತ್ತ ಅಲ್ಲಾ ಹೂ ಅಕ್ಬರ್, ಜಿಂದಾಬಾದ್ ಜಿಂದಾಬಾದ್ ಇಸ್ಲಾಂ ಜಿಂದಾಬಾದ್ ಎಂದು ಮುಸ್ಲಿಂ ಯುವಕರು ಘೋಷಣೆ ಕೂಗಿದ್ರು, ಈ ವೇಳೆ ವಾಗ್ವಾದ ಉಂಟಾದ ಹಿನ್ನಲೆ ಅನ್ಯ ಕೋಮಿನವರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ, ಪೊಲೀಸ್ ಪೇದೆಗಳಾದ ರಘು, ಅನ್ನಪೂರ್ಣಗೆ ತಲೆಗೆ ಪೆಟ್ಟಾಗಿದ್ದು, ಗಾಯಗೊಂಡು ಆಸ್ಪತ್ರೆಗೆ ತೆರಳಿದ್ದಾರೆ, ಇನ್ನೂ ಮೆರವಣಿಗೆ ಉದ್ದಕ್ಕೂ ಕ್ರಾಸ್ ಬಳಿ ನಿಂತು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದೆ, ಸ್ವತಃ ಎಸ್ಪಿ ಉಮಾ ಪ್ರಶಾಂತ್ ಲಾಠಿ ಹಿಡಿದು ಜನರನ್ನೂ ಚದುರಿಸಿಲು ಮುಂದಾಗಿದ್ರೆ, ಜನರನ್ನೂ ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ, ಕಲ್ಲು ತೂರಿದ ಕಿಡಿಗೇಡಿಗಳನ್ನೂ ಬಂಧಿಸಿ ಎಂದು ಹಿಂದೂ ಪರ ಕಾರ್ಯಕರ್ತರು ಪಟ್ಟು ಹಿಡಿದು ಕೂತಿದ್ದಾರೆ..