<strong>POWER SAMACHARA | KANNADA NEWS | BREKING NEWS| 21-09-2024</strong> <strong>ದಾವಣಗೆರೆ :</strong> ಬಾರ್ ಒಂದರಲ್ಲಿ ಕುಡಿತಾ ಕೂತಿದ್ದ ವ್ಯಕ್ತಿಗೆ ಮನಸೋ ಇಚ್ಚೆ ಚಾಕು ಚುಚ್ಚಿ ಭೀಕರ ಹತ್ಯೆ ಮಾಡಿರುವ ಘಟನೆ ದಾವಣಗೆರೆಯ ನಿಟುವಳ್ಳಿ ರಸ್ತೆಯ ಕೆಟಿಜೆ ನಗರದಲ್ಲಿರುವ ಪ್ರಕಾಶ್ ಬಾರ್ ನಲ್ಲಿ ನಡೆದಿದೆ.. <img class="aligncenter wp-image-3096 size-full" src="https://powersamachara.com/wp-content/uploads/2024/09/bar-murder.jpg" alt="" width="750" height="550" /> ಕುಮಾರ್(36) ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದ್ದು, ಗೌತಮ್ (38) ಚಾಕು ಹಾಕಿದ ಕೊಲೆ ಅರೋಪಿಯಾಗಿದ್ದಾನೆ, ಕುಮಾರ್, ಇಂದು ಸಂಜೆ ಬಾರ್ ನಲ್ಲಿ ಸ್ನೇಹಿತರೊಂದಿಗೆ ಕುಡಿಯುತ್ತಾ ಕೂತಿದ್ದ ಎನ್ನಲಾಗಿದೆ, ಹಿಂದಿನಿಂದ ಬಂದ ಗೌತಮ್ (38) ಎಂಬಾತ ಮನಸೋ ಇಚ್ಚೆ ಚಾಕು ಚುಚ್ಚಿದ್ದು, ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಿಟ್ಟುವಳಿ ಹೊಸ ಬಡಾವಣೆ ನಿವಾಸಿ ಗೌತಮ್ಮ ಅಂಬ್ಯೂಲೆನ್ಸ್ ಚಾಲಕನಾಗಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನುವುದು ಮಾತ್ರ ತಿಳಿದು ಬಂದಿಲ್ಲ, ಚಾಕು ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನ ಕೆಟಿಜೆ ನಗರ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ..