POWER SAMACHARA | KANNADA NEWS | 07-04-2023
ದಾವಣಗೆರೆ; ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಹಾಲಿ ಶಾಸಕ ಎಸ್ ರಾಮಪ್ಪ ಅವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಆಗುತ್ತೆ ಅಂತಾ ಅಂದುಕೊಂಡಿದ್ದ ಕಾರ್ಯಕರ್ತರಿಗೆ ಮತ್ತೆ ಹೈಕಮಾಂಡ್ ಶಾಕ್ ನೀಡಿದೆ
ಮಾಜಿ ಸಚಿವರೊಬ್ಬರ ಎಂಟ್ರಿ; ಆಕಾಂಕ್ಷಿಗಳಿಗೆ ದಿಗ್ಭ್ರಮೆ
ಅಷ್ಟಕ್ಕೂ ಹಾಲಿ ಶಾಸಕರಿರುವ ಕ್ಷೇತ್ರದಲ್ಲಿ ಯಾಕಿಷ್ಟು ಗೊಂದಲ ಅನ್ನೋದು ಮಾತ್ರ ಯಾರಿಗೂ ಅರ್ಥ ಆಗ್ತಿಲ್ಲ, ಒಂದು ಮಾಹಿತಿ ಪ್ರಕಾರ, ಮಾಜಿ ಸಚಿವ, ಕುರುಬ ಸಮಾಜ ಪ್ರಭಾವಿ ಮುಖಂಡ ಎಚ್ ಎಂ ರೇವಣ್ಣ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ ಎಂದು ತಿಳಿದು ಬಂದಿದ್ದು, ಪ್ರಬಲವಾಗಿಯೇ ಹೈಕಮಾಂಡ್ ಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಹಿಂದ ಮತಗಳ ಮೇಲೆ ರೇವಣ್ಣ ಕಣ್ಣು..?
ಮೊದಲಿನಿಂದಲು ಹರಿಹರದ ಹಾಲಿ ಶಾಸಕ ಎಸ್ ರಾಮಪ್ಪರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು, ಹಾಲಿ ಎಂಎಲ್ ಎ ಗಳ ಪೈಕಿ ರಾಮಪ್ಪರಿಗೆ ಟಿಕೆಟ್ ಸಿಗೋದಿಲ್ಲ ಎಂದು ಸಹ ಚರ್ಚೆಗಳು ನಡೆದಿತ್ತು, ಈ ಮಾಹಿತಿ ತಿಳಿದಿದ್ದ ಎಚ್ ಎಂ ರೇವಣ್ಣ, ಕುರುಬರು, ಮುಸ್ಲಿಂರು ಹೆಚ್ಚಾಗಿರೋ ಹರಿಹರ ಕ್ಷೇತ್ರದಲ್ಲಿ ಗೆಲ್ಲಲು ಅವಕಾಶ ಇದೆ ಎಂದು ಕ್ಷೇತ್ರಕ್ಕೆ ಕಾಲಿಡಲು ಮನಸ್ಸು ಮಾಡಿ, ಸದ್ಯ ಹೈಕಮಾಂಡ್ ಗೆ ಟಿಕೆಟ್ ಗಾಗಿ ಪ್ರಬಲವಾಗಿ ಪಟ್ಟು ಹಿಡಿದು ಕೂತಿದ್ದಾರೆ, ಹೀಗಾಗಿಯೆ ಟಿಕೆಟ್ ಪೆಂಡಿಂಗ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿರುವ ಹೊಸ ಅಪ್ಡೇಟ್.. ಇದಕ್ಕೆ ಹಿಂಬು ನೀಡುವಂತೆ ಇತ್ತೀಚೆಗಷ್ಟೆ ಎಂಎಲ್ ಸಿ ಹೆಚ್ ವಿಶ್ವನಾಥ್ ಅವರೊಂದಿಗೆ ಬೆಳ್ಳೂಡಿ ಕನಕ ಮಠಕ್ಕೆ ಭೇಟಿ ನೀಡಿದ ಹೆಚ್ ಎಂ ರೇವಣ್ಣ, ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿಯವರ ಆಶೀರ್ವಾದ ಪಡೆದಿದ್ದಾರೆ, ಟಿಕೆಟ್ ಸಿಕ್ಕರೆ ತಮ್ಮ ಆಶೀರ್ವಾದ ಇರಲಿ ಎಂದು ಗುರುಗಳಿಗೆ ವಿಷಯ ಮುಟ್ಟಿಸಿ ಬಂದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ..
ಹರಿಹರ ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆ
ಜಾತಿವಾರು ಲೆಕ್ಕಾಚಾರ(ಅಂದಾಜು)
ಲಿಂಗಾಯತ – 55000
ಕುರುಬ – 40000
ಮುಸ್ಲಿಂ – 40000
ಎಸ್ಸಿ – 22000
ಎಸ್ಟಿ – 15000
ಮರಾಠ – 8000
ಇತರೆ – 30000
ಒಟ್ಟು – 200006
ಆಪರೇಷನ್ ಕಮಲಕ್ಕೆ ಒಳಗಾಗದೇ ಇದ್ದಿದ್ದಕ್ಕೆ ಈ ಶಿಕ್ಷಿಯೇ..?
ಕಾಂಗ್ರೆಸ್ 162 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪಟ್ಟಿಯಲ್ಲಿ ಹರಿಹರ ಶಾಸಕ ಎಸ್. ರಾಮಪ್ಪ ಅವರ ಹೆಸರಿಲ್ಲದೇ ಇರುವುದು ಕ್ಷೇತ್ರದ ಮತದಾರರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಪರೇಷನ್ ಕಮಲ ಸಂದರ್ಭದಲ್ಲಿ ಹಣಕ್ಕೆ ಬೆಲೆ ಕೊಡದೇ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗದೇ ಇದ್ದ ರಾಮಪ್ಪರಿಗೆ ಟಿಕೆಟ್ ನೀಡಲು ಮೀನಾಮೇಶ ಎಣಿಸುತ್ತಿರುವ ಕಾಂಗ್ರೆಸ್ ವಿರುದ್ದ ಕಾರ್ಯಕರ್ತರು, ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ.. ನಿಯತ್ತಾಗಿ ಪಕ್ಷದಲ್ಲಿ ಇದ್ದಿದ್ದೆ ತಪ್ಪಾಯ್ತೆ ಎಂದು ಕೆಂಡಕಾರುತ್ತಿದ್ದಾರೆ..
ಮಾಜಿ ಸಚಿವ ಹೆಚ್ ಎಂ ರೇವಣ್ಣ, ಹಾಲಿ ಶಾಸಕ ಎಸ್ ರಾಮಪ್ಪರಿಗೆ ಟಿಕೆಟ್ ಸಿಗದೇ ಇದ್ದರೆ ಹಿರಿಯ ವಕೀಲ ನಾಗೇಂದ್ರಪ್ಪರಿಗೆ ಟಿಕೆಟ್ ಸಿಕ್ಕರು ಸಿಗಬಹುದು ಎಂಬ ಮಾತು ಸಹ ಕೇಳಿ ಬರುತ್ತಿದೆ..ಇತ್ತೀಚೆಗಷ್ಟೆ ಪಕ್ಷ ಸೇರ್ಪಡೆ ಆಗಿ ಪ್ರಬಲವಾಗಿ ಟಿಕೆಟ್ ಕೇಳುತ್ತಿರುವ ಎನ್ ಎಚ್ ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದ್ದು, ಒಟ್ಟಾರೆ ಬೆಳವಣಿಗೆ ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಟೆನ್ಶನ್ ತರಿಸಿದೆ..