POWER SAMACHARA | KANNADA NEWS | 08-04-2023
ದಾವಣಗೆರೆ: ಹರಿಹರ ಕಾಂಗ್ರೆಸ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ, ಕಾಂಗ್ರೆಸ್ ಹಾಲಿ ಶಾಸಕ ಎಸ್ ರಾಮಪ್ಪರಿಗೆ ಟಿಕೆಟ್ ನೀಡುವಂತೆ ದಾವಣಗೆರೆಯಲ್ಲಿ ದೂಡಾ ಮಾಜಿ ಸದಸ್ಯ ವೀರೇಶ್ ಹೇಳಿಕೆ ನೀಡಿದ್ದಾರೆ..
ಆಪರೇಷನ್ ಕಮಲಕ್ಕೆ ಒಳಗಾಗದೇ ಇದ್ದಿದ್ದೆ ತಪ್ಪಾಯ್ತಾ, ಕೋಟಿ ಕೋಟಿ ಹಣ ಕೊಡುತ್ತೇವೆ ಎಂದರು ಬಿಜೆಪಿಗೆ ಹೋಗಲಿಲ್ಲ,ಪಕ್ಷ ನಿಷ್ಟೆ, ನಿಯತ್ತು ತೋರಿದ್ದೆ ತಪ್ಪಾಗಿದೆ ಎಂದು ದಾವಣಗೆರೆ ನಗರದಲ್ಲಿ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿ ಗರಂ ಆಗಿದ್ದಾರೆ.
ದಲಿತರು, ಮುಸ್ಲಿಂರು, ಕುರುಬ ಸಮಾಜದಿಂದ ಆಕ್ರೋಶ ವ್ಯಕ್ತವಾಗಿದೆ, ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ, ಎಲ್ಲಾ ಸಮಾಜಕ್ಕೂ ರಾಮಪ್ಪ ಕೆಲಸ ಮಾಡಿದ್ದಾರೆ, ಟಿಕೆಟ್ ಕೊಡದೇ ಇದ್ದರೆ ಮುಂದೇ ಬೇರೆ ನಿರ್ಣಯ ಕೈಗೊಳ್ಳುತ್ತೇವೆ,ಯಾವುದೇ ಕಾರಣಕ್ಕೂ ಟಿಕೆಟ್ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ..