POWER SAMACHARA | KANNADA NEWS | BREKING NEWS| 22-03-2024
ದಾವಣಗೆರೆ: ಬೆಣ್ಣೆನಗರಿ ರಾಜಕೀಯದಲ್ಲಿ ಕಾಂಗ್ರೆಸ್ ಅಂದರೆ ಶಾಮನೂರು, ಬಿಜೆಪಿ ಅಂದ್ರೆ ಸಿದ್ದೇಶ್ವರ್ ಫ್ಯಾಮಿಲಿಯದ್ದೇ ಪಾರುಪಾತ್ಯ,. ಆದ್ರೀಗ ಲೋಕ ಅಖಾಡದಲ್ಲಿ ಈ ಎರಡು ಕುಟುಂಬಗಳ ಮಧ್ಯೆ ಸ್ತ್ರೀ ಶಕ್ತಿ ಕದನ ಫಿಕ್ಸ್ ಆಗಿದೆ, ಇದೇ ಮೊದಲ ಭಾರೀಗೆ ಮಹಿಳೆಯರ ಮಧ್ಯೆ ಕಾದಾಟ ಏರ್ಪಟ್ಟಿದ್ದು, ದಾವಣಗೆರೆ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದೆ..
ಶಾಮನೂರು VS ಸಿದ್ದೇಶ್ವರ್
ಹೌದು.. ಮಧ್ಯಕರ್ನಾಟಕದ ಕೇಂದ್ರಬಿಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಲೋಕಸಭಾ ಸಮರದಲ್ಲಿ ಎರಡು ಪ್ರತಿಷ್ಟಿತ ಕುಟುಂಬಗಳ ಮಧ್ಯೆ ಮತ್ತೆ ಫೈಟ್ ಏರ್ಪಡೋದು ಪಕ್ಕಾ ಆಗಿದೆ.. ಲಿಂಗಾಯತ ಸಮುದಾಯದ ಫ್ಯಾಮಿಲಿಗಳ ನಡುವೆ ಹೈವೋಲ್ಟೇಜ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬ Vs ಜಿ. ಮಲ್ಲಿಕಾರ್ಜುನಪ್ಪ ಫ್ಯಾಮಿಲಿ ಮಧ್ಯೆ ಮತ್ತೊಮ್ಮೆ ಪ್ರಜಾಪ್ರಭುತ್ವದ ಯುದ್ಧ ನಡೆಯೋದು ಖಚಿತವಾಗಿದೆ. ಈ ಕುಟುಂಬಗಳು ಆರು ಭಾರೀ ಎದುರಾಗಿದ್ದು ಒಂದು ಭಾರೀ ಮಾತ್ರ ಶಾಮನೂರು ಶಿವಶಂಕರಪ್ಪ ಗೆದ್ದಿದ್ದು ಬಿಟ್ರೆ ಐದು ಭಾರೀ ಶಾಮನೂರು ಕುಟುಂಬ ಸೋಲು ಕಂಡಿದೆ, ಕಳೆದ ಭಾರೀ ಶಾಮನೂರು ಕುಟುಂಬ ಆಪ್ತ ಹೆಚ್ ಬಿ ಮಂಜಪ್ಪ ಕೂಡ ಜಿಎಂ ಸಿದ್ದೇಶ್ವರ್ ವಿರುದ್ದ ಸೋಲು ಕಂಡಿದ್ರು, 28ವರ್ಷಗಳಿಂದ ಜಿಎಂ ಕುಟುಂಬ ಗೆಲ್ಲುತ್ತಲೇ ಬರ್ತಿದೆ, ಎರಡು ಭಾರೀ ಜಿ ಮಲ್ಲಿಕಾರ್ಜುನಪ್ಪ, ಸತತ ನಾಲ್ಕು ಭಾರೀ ಜಿಎಂ ಸಿದ್ದೇಶ್ವರ್ ಗೆದ್ದು ಕೋಟೆ ನಿರ್ಮಿಸಿಕೊಂಡಿದ್ದಾರೆ, ಈ ಭಾರೀ ಗಾಯತ್ರಿ ಸಿದ್ದೇಶ್ವರ್ಗೆ ಬಿಜೆಪಿ ಟಿಕೆಟ್ ನೀಡಿದ್ದು, ಈಗಾಗಲೇ ಅಬ್ಬರದ ಪ್ರಚಾರ ನಡೆಸ್ತಾ ಇದ್ದಾರೆ, ಸಿದ್ದೇಶ್ವರ್ ಪತ್ನಿ ಗಾಯತ್ರಿ ಲೋಕ ಅಖಾಡಕ್ಕೆ ಇಳಿಯುತ್ತಿದ್ದಂತೆ ಇತ್ತ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.. ಬಿಜೆಪಿ ಸಂಸದ ಸಿದ್ದೇಶ್ವರ್ ಕುಟುಂಬಕ್ಕೆ ಸೋಲಿನ ರುಚಿ ತೋರಿಸಲು ಎಸ್. ಎಸ್. ಮಲ್ಲಿಕಾರ್ಜುನ್ ರಾಜಕೀಯ ಚದುರಂಗದಾಟದಲ್ಲಿ ರಾಣಿ ಪಾನ್ನ ಮೂವ್ ಮಾಡಿದ್ದು, ಎಸ್ ಎಸ್ ಟ್ರಸ್ಟ್ ಮೂಲಕ ಆರೋಗ್ಯ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಶಾಮನೂರು ಶಿವಶಂಕರಪ್ಪ ಅವರ ಕಿರಿಯ ಸೊಸೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದೆ, ಆರು ಭಾರೀ ಸತತವಾಗಿ ಗೆದ್ದು ಬೀಗಿರುವ ಜಿಎಂ ಸಿದ್ದೇಶ್ವರ್ ಕುಟುಂಬಕ್ಕೆ ಬ್ರೇಕ್ ಹಾಕ್ತಿವಿ, ಯಾವುದೋ ಅಲೆಯಲ್ಲಿ ಗೆದ್ದು ಬರೋದಲ್ಲ, ಬಡವರ ಸೇವೆ ಮಾಡಬೇಕು, ಈ ಭಾರೀ ಅಭ್ಯರ್ಥಿ ನೋಡಿ ಜನ ಮತ ಚಲಾವಣೆ ಮಾಡ್ತಾರೆ ಎಂದು ಹೇಳುವ ಮೂಲಕ ಪ್ರಭಾ ಮಲ್ಲಿಕಾರ್ಜುನ್ ರಾಜಕೀಯ ಯುದ್ದ ಪ್ರಾರಂಭಿಸಿದ್ದಾರೆ.
ಬಿಜೆಪಿ ಓಟಕ್ಕೆ ಬ್ರೇಕ್ ಗ್ಯಾರಂಟಿ
ನೂರಕ್ಕೆ ನೂರರಷ್ಟು ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್ ಮಾಡ್ತಿವಿ, ಯಾವುದೊ ಅಲೆಯಲ್ಲಿ ಗೆದ್ದು ಬರೋದು ಡೆಮಾಕ್ರಸಿ ಅಲ್ಲ, ಅಭ್ಯರ್ಥಿ ಕೆಲಸ ನೋಡಿ ಮತ ಹಾಕಬೇಕಿದೆ. ಮಹಿಳೆಯರು, ರೈತರು ಸಮಸ್ಯೆ ಆಲಿಸಿ ಕೆಲಸ ಮಾಡಬೇಕಿದೆ, ಯಾವುದೋ ಅಲೆ, ಸೆಂಟ್ರಲ್ ಲೀಡರ್ಸ್ ಶಿಪ್ ಗೆ ವೋಟ್ ಹಾಕೋದು ಸರಿಯಲ್ಲ, ಎಸ್ ಎಸ್ ಕೇರ್ ಟ್ರಸ್ಟ್ ಮುಲಕ ಆರೋಗ್ಯ ಸೇವೆ, ಶಿಕ್ಷಣ ಸೇವೆ ನೀಡಿದ್ದೇವೆ. ಈ ಭಾರೀ ಬಿಜೆಪಿಗೆ ಬ್ರೇಕ್ ಹಾಕೇ ಹಾಕ್ತಿವಿ, ಗ್ಯಾರಂಟಿ ಯೋಜನೆ, ಸರ್ಕಾರದ ಕೆಲಸವನ್ನ ಜನರು ಮೆಚ್ಚಿದ್ದಾರೆ. ನಾವು ಟಿಕೆಟ್ ಕೇಳಿಲ್ಲ, ಸರ್ವೆ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದಾರೆ, ಪೈಪೋಟಿ, ಗೆಲ್ಲುವ ಅಭ್ಯರ್ಥಿ ಎಂದು ಗುರುತಿಸಿ ಟಿಕೆಟ್ ನೀಡಿದ್ದಾರೆ, ಸರ್ವೆ ಪ್ರಕಾರ ಒಲವು ಇದೇ ಈಗಾಗಿ ಪಕ್ಷ ನನಗೆ ಟಿಕೆಟ್ ನೀಡಿದೆ, ಕುಟುಂಬ ರಾಜಕಾರಣ ಎಂದು ಸಂಸದ ಜಿಎಂ ಸಿದ್ದೇಶ್ವರ್ ಆರೋಪ ವಿಚಾರ ಮಾತನಾಡಿರುವ ಪ್ರಭಾ ಮಲ್ಲಿಕಾರ್ಜುನ್, ಅವರು ಮನೆಯವರೇ ಸ್ಪರ್ಧೆ ಮಾಡಿದ್ದಾರೆ, ಅವರದು ಕುಟುಂಬ ರಾಜಕಾರಣ ಅಲ್ವಾ..!? ಈ ಹಿಂದೇ ಎಸ್ ಎಸ್ ಮಲ್ಲಿಕಾರ್ಜುನ್ ಅವರ
ಸೋಲಿನ ಅಂತರ ಕಡಿಮೆ ಇತ್ತು, ಈ ಭಾರೀ ನೂರಕ್ಕೆ ನೂರ ಹತ್ತು ಪರ್ಸೆಂಟ್ ಗೆದ್ದೆ ಗೆಲ್ತೇವೆ, ವಿನಯ್ ಕುಮಾರ್ ಗೆ ಟಿಕೆಟ್ ತಪ್ಪಿದ ವಿಚಾರವಾಗಿ ಅಪ್ಪಾಜಿ ಶಾಮನೂರು, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕರೆದು ಮಾತನಾಡುತ್ತಾರೆ ಎಂದಿದ್ದಾರೆ..
ಬಿಜೆಪಿ ಸೋಲಿಸೋದು ಅಷ್ಟು ಸುಲಭವಲ್ಲ
ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆಗ್ತಿದ್ದಂತೆ ಶಾಮನೂರು ಮನೆಯಲ್ಲಿ ‘ರಾಜಕೀಯ’ ಚಟುವಟಿಕೆಗಳು ಗರಿಗೆದರಿವೆ.. ದಾವಣಗೆರೆ ಜಿಲ್ಲಾ ಮುಖಂಡರ ಸಭೆ ಕರೆದು ಎಸ್. ಎಸ್. ಮಲ್ಲಿಕಾರ್ಜುನ್ ಮಾಹಿತಿ ಪಡೆದುಕೊಳ್ಳುತ್ತಿದ್ದು, ಪತ್ನಿಯನ್ನ ಬೆಂಬಲಿಸುವಂತೆ ಮತದಾರರನ್ನ ಸೆಳೆಯಲು ರಣತಂತ್ರ ರೂಪಿಸಿದ್ದಾರೆ, ಇತ್ತ ಆರು ಭಾರೀ ಗೆದ್ದು ಬೀಗಿರುವ ಜಿಎಂ ಸಿದ್ದೇಶ್ವರ್ ಕುಟುಂಬವನ್ನೂ ಸೋಲಿಸೋದು ಅಷ್ಟು ಸುಲಭದ ಮಾತಲ್ಲ, ಏಳನೇ ಭಾರೀ ಬಿಜೆಪಿ ಬಾವುಟ ಹಾರಿಸೋ ಲೆಕ್ಕಾಚಾರದಲ್ಲಿ ಜಿಎಂ ಸಿದ್ದೇಶ್ವರ್ ಕುಟುಂಬ ತೊಡಗಿದ್ದು, ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ನಡೆಸ್ತಾ ಇದ್ದಾರೆ, ಸಂಸದ ಜಿಎಂ ಸಿದ್ದೇಶ್ವರ್ ಅವರ ಸಾಧನೆಗಳ ರಿಪೋರ್ಟ್ ಕಾರ್ಡ್ ಹಿಡಿದು ಮತ ಕೇಳ್ತಾ ಇದ್ದಾರೆ, ಜೊತೆಗೆ ಮೋದಿಯವರನ್ನ ಮತ್ತೆ ಪ್ರಧಾನಿ ಮಾಡಬೇಕು, ಬಿಜೆಪಿ ಗೆಲ್ಲಿಸಿ, ಎಂದು ಇಡೀ ಕುಟುಂಬ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದು ಮತ್ತೆ ನಾವೇ ಗೆಲ್ತಿವಿ ಎಂತಿದ್ದಾರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್..
ಬಂಡಾಯದ ಬಿಸಿ ಯಾರಿಗೆ..!?
ಇನ್ನೂ ಇತ್ತ ಎರಡು ಪಕ್ಷಗಳಿಗೂ ರೆಬೆಲ್ಸ್ ಮಗ್ಗಲು ಮುಳ್ಳಾಗೋ ಸಾಧ್ಯತೆ ಇದೆ, ಬಿಜೆಪಿ ಅಭ್ಯರ್ಥಿ ಬದಲಾಯಿಸಿ ಎಂದು ರೇಣುಕಾಚಾರ್ಯ ಅಂಡ್ ಟೀಂ ಪಟ್ಟು ಹಿಡಿದು ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿಸೋ ಮುನ್ಸೂಚನೆ ನೀಡಿದೆ, ಇತ್ತ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆ ಅಹಿಂದ ವರ್ಗದ ವಿನಯ್ ಕುಮಾರ್ ಅವರು ಜನರ ಅಭಿಪ್ರಾಯ ಸಂಗ್ರಹಿಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಇಳಿಯೋ ಸಾಧ್ಯತೆ ಇದ್ದು ಬೆಣ್ಣೆನಗರಿ ರಾಜಕೀಯ ಬಿಸಿಲು ಹೆಚ್ಚಾದಂತೆ ರಂಗೇರ ತೊಡಗಿದೆ..