POWER SAMACHARA | KANNADA NEWS | BREKING NEWS| 07-10-2023..
ದಾವಣಗೆರೆ: ಸದ್ಯ ಈಗಂತು ನಕಲಿಯದ್ದೆ ಹಾವಳಿ, ಎಲ್ಲಿ ನೋಡಿದ್ರು ನಕಲಿ.. ನಕಲಿ.. ಥೇಟ್ ಅಸಲಿಯಂತೆ ಕಾಣುವ ವಸ್ತುಗಳು ನಕಲಿ ಅಂತಾ ನಮಗೆ ಗೊತ್ತಾಗೋದು ಮೋಸ ಹೋದ ಬಳಿಕವೇ. ಇಲ್ಲೊಬ್ಬ ಗುತ್ತಿಗೆದಾರನಿಗೆ ಜೊತೆಗೆ ಕೆಲಸ ಮಾಡುವ ಕೆಲಸಗಾರರು, ಅಸಲಿ ಬಂಗಾರ ತೋರಿಸಿ ಕೊನೆಗೆ ನಕಲಿ ಬಿಲ್ಲೆ ನೀಡಿ ಪಂಗನಾಮ ಹಾಕಿದ್ದಾರೆ.. ಏನಿದು ನಕಲಿ ಬಂಗಾರ ಹಾವಳಿ ಅಂತೀರ ಈ ಸ್ಟೋರಿ ನೋಡಿ..
ಹೌದು.. ಈ ಪಳ ಪಳ ಹೊಳೆಯುವ ಬಂಗಾರ ನೋಡಿದರೆ ನಿಮಗೂ ಸಹ ಕಡಿಮೆ ರೇಟ್ ಗೆ ಖರೀದಿಸಿ ಆಭರಣ ಮಾಡಿಸಿ ಇಟ್ಟುಕೊಂಡರೇ ಆಯ್ತು ಎಂದೇನಿಸದಿರದು, ಹಾಗೇ ಮಾಡಿದರೆ ನೀವು ತಲೆ ಮೇಲೆ ಟೋಪಿ ಹಾಕಿಕೊಳ್ಳೋದು ಗ್ಯಾರಂಟಿ.. ಯಾಕಂದ್ರೆ ಅಸಲಿಯಂತೆ ಕಾಣುವ ಈ ಬಂಗಾರದ ಬಿಲ್ಲೆಗಳೆಲ್ಲ ಪಕ್ಕಾ ನಕಲಿ, ನಕಲಿ. ಹೌದು.. ಈಗಿನ ಜನ ಅಸಲಿಗಿಂತ ನಕಲಿ ನಂಬೋದೆ ಜಾಸ್ತಿ ಯಾಕಂದ್ರೆ ನಕಲಿ ಮೇಲೆ ಬಣ್ಣ ಬಳೆದು ಜನರ ಬಳಿ ನೈಸ್ ಮಾಡಿದ್ರೆ ಆಯ್ತು ನಮ್ ಜನ ದುಬುಕ್ಕನೇ ಗುಂಡಿಗೇ ಬೀಳೋದು ಫಿಕ್ಸ್.. ಅದರಂತೆ ಬೆಂಗಳೂರು ದೇವನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ದನ್ ಎಂಬಾತ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದಾತ, ಇತನ ಕೆಲಸದ ವೇಳೆ ಪರಿಚಯ ಆದ ಇಬ್ಬರು ನಮ್ಮ ಮನೆ ಕಟ್ಟುವಾಗ ಪಾಯ ತೆಗೆಯುವ ಸಂದರ್ಭದಲ್ಲಿ ಬಂಗಾರದ ಬಿಲ್ಲೆ ಸಿಕ್ಕಿವೆ ಎಂದು ನಂಬಿಸಿ ಬರೋಬ್ಬರಿ 60 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 44ಲಕ್ಷದ 50 ಸಾವಿರ ರೂಪಾಯಿ ಪೀಕಿ ಎರಡೂವರೆ ಕೆಜಿ ಬಂಗಾರ ಕೊಟ್ಟಿದ್ದರು, ಅದಾದ ಬಳಿಕ ಬಂಗಾರದ ಅಂಗಡಿಗೆ ಹೋಗಿ ಚೆಕ್ ಮಾಡಿದಾಗ ಇದು ನಕಲಿ ಚಿನ್ನ ಎಂದು ಗೊತ್ತಾಗಿದ್ದು, ಗುತ್ತಿಗೆದಾರ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದ..
ಕೆಲಸಗಾರರರಿಂದಲೇ ಪಂಗನಾಮ
ನಕಲಿ ಚಿನ್ನ ಜಾಲದ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಶಾಕ್ ಕಾದಿತ್ತು, ಗುತ್ತಿಗೆದಾರ ಗೋವರ್ಧನ್ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಈ ಪ್ರಕರಣದಲ್ಲಿ ಭಾಗೀಯಾಗಿದ್ದರ ಬಗ್ಗೆ ಮಾಹಿತಿ ಬಂದಿತ್ತು, ಚನ್ನಗಿರಿ ಪೊಲೀಸರು ಆರೋಪಿಗಳ ಎಡೆಮುರಿ ಕಟ್ಟಿದ್ದಾರೆ, ಹರಪನಹಳ್ಳಿ ತಾಲ್ಲೂಕಿನ ಪಾವನ ಪುರ ಗ್ರಾಮದ ಸಂದೀಪ್, ಹರಪನಹಳ್ಳಿ ತಾಲ್ಲೂಕಿನ ಚಿರಸ್ಥಹಳ್ಳಿ ಗ್ರಾಮದ ಈಶ್ವರಪ್ಪ ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರು ಗೋವರ್ಧನ ಬಳಿ ಕೆಲಸಕ್ಕೆ ಇದ್ದರು ಎಂದು ತಿಳಿದು ಬಂದಿದೆ, ಚಿನ್ನ ನೀಡುತ್ತೇವೆ ಎಂದು ಬೆಂಗಳೂರು ಮೂಲದ ಗೋವರ್ಧನ್ ಎಂಬ ಗುತ್ತಿಗೆದಾರನಿಗೆ 60 ಲಕ್ಷ ರೂಪಾಯಿಗೆ ಡೀಲ್ ಕುದರಿತ್ತು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ಈ ಘಟನೆ ನಡೆದಿತ್ತು, ನಮ್ಮ ಮನೆಯ ಪಾಯಾ ತೆಗೆಯುವಾಗಿ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಈ ಇಬ್ಬರು ಆರೋಪಿಗಳು, ಮೊದಲು ನಕಲಿ ನಾಣ್ಯ ತೋರಿಸಿ ನಂಬಿಸಿ ಬಿಟ್ಟಿದ್ದರು, ಇವರ ಮಾತು ನಂಬಿ 2.5 ಕೆಜಿ ನಕಲಿ ಚಿನ್ನದ ಬಿಲ್ಲೆಗಳನ್ನ ಪಡೆದ ಗುತ್ತಿಗೆದಾರ ಗೋವರ್ಧನ್ 44 ಲಕ್ಷದ 50 ಲಕ್ಷ ರೂಪಾಯಿ ನೀಡಿದ್ದ, ಬಿಲ್ಲೆ ತೆಗೆದುಕೊಂಡ ಬಳಿಕ ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಚಿನ್ನ ಎಂಬ ವಿಚಾರ ಬಯಲಿಗೆ ಬಂದಿದೆ, ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣ ಜಾಡು ಹಿಡಿದ ಚನ್ನಗಿರಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ, ಆರೋಪಿತರಿಂದ 40 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ದಾವಣಗೆರೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ..
ಒಟ್ಟಾರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ನಕಲಿ ಚಿನ್ನದ ಹಾವಳಿ ಹೇರಳವಾಗಿದೆ, ಅದರಲ್ಲೂ ಹರಪನಹಳ್ಳಿ ಭಾಗದಲ್ಲಿ ನಕಲಿ ಚಿನ್ನ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಚಿನ್ನದ ಆಸೆಗೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಇನ್ನಾದರು ನಕಲಿ ಚಿನ್ನದ ಬಗ್ಗೆ ಜನರು ಜಾಗೃತರಾಗಬೇಕಿದೆ..