POWER SAMACHARA
ಕಿಡಿಗೇಡಿಗಳ ಕಲ್ಲೇಟಿಗೆ ಶಾಂತಿಯಿಂದ ಇದ್ದ ಬೆಣ್ಣೆನಗರಿ ದಾವಣಗೆರೆಯಲ್ಲಿ ಅಶಾಂತಿ ನಿರ್ಮಾಣವಾಗಿದೆ, ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ದುರುಳರು ಮನಸ್ಸೋ ಇಚ್ಚೆ ಕಲ್ಲು ತೂರಿದ್ದು, ದಾವಣಗೆರೆ ಬೂದಿ ಮುಚ್ಚಿದ ಕೆಂಡವಾಗಿ ಬಿಟ್ಟಿದೆ. ಮೂವತ್ತಕ್ಕೂ ಹೆಚ್ಚು ಜನರ ಬಂಧನವಾಗಿದ್ದು, ತಣ್ಣಗಾಗಿಸಲು ಪೊಲೀಸರು ಸರ್ಕಸ್ ಮಾಡ್ತಿದ್ದಾರೆ.. ಈ ಕುರಿತ ಡಿಟೈಲ್ಸ್ ಇಲ್ಲಿದೆ..
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳ ಕಲ್ಲು ತೂರಾಟ, ನಗರದ ಹಲವೆಡೆ ಮನೆ ಮೇಲೆ ಕಲ್ಲು ಬಾಟಲಿ ತೂರಿ ಅಟ್ಟಹಾಸ, ಕಾರು, ಬೈಕ್ ಗಳು ಜಖಂ, ಹದ್ದು ಬಸ್ತ್ ಗೆ ತರಲು ಪೊಲೀಸರ ಹರಸಾಹಸ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಬೆಣ್ಣೆನಗರಿ ದಾವಣಗೆರೆಯಲ್ಲಿ.. ಹೌದು.. ಗಣೇಶ ಹಬ್ಬ ಇನ್ನೇನು ಮುಗಿಯುತ್ತಾ ಬರೋ ಹೊತ್ತಲ್ಲಿ ದಾವಣಗೆರೆಯಲ್ಲಿ ಕೋಮು ಸಂಘರ್ಷದ ಕಿಡಿ ಹೊತ್ತಿಕೊಂಡು ಬಿಟ್ಟಿದ್ದು, ತಣ್ಣಗಾಗುವ ಲಕ್ಷಣ ಇನ್ನೂ ಕಾಣ್ತಿಲ್ಲ.. ದಾವಣಗೆರೆ ನಗರದ ಮುದ್ದಾ ಭೋವಿ ನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಶುರುವಾಗಿತ್ತು, ಆ ಮೆರವಣಿಗೆ ಇನ್ನೇನು ಅರಳಿ ಮರ ಸರ್ಕಲ್ ಗೆ ಆಗಮಿಸುತ್ತಿದಂತೆ ಒಳ ಜ್ವಾಲೆ ಒತ್ತಿಕೊಂಡಿತ್ತು, ಡಿಜೆ ಸದ್ದಿಗೆ ಯುವಕರು ಕುಣಿಯುತ್ತಾ ಅವರ ಪಾಡಿಗೆ ಅವರು ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸ್ತಾ ಇದ್ರು, ಅಲ್ಲಿಗೆ ಬಂದ ಮುಸ್ಲಿಂ ಯುವಕರ ಗುಂಪೊಂದು ಅಲ್ಲಾಹು ಅಕ್ಬರ್ ಅಲ್ಲಾ, ಜಿಂದಾಬಾದ್ ಮುಸ್ಲಿಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ರು, ಈ ಮಧ್ಯೆ ತಳ್ಳಾಟ, ನೂಕಾಟ ಉಂಟಾಯಿತು, ಬಳಿಕ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಪಕ್ಕದ ರಸ್ತೆಗೆ ಬಂದ ಕಿಡಿಗೇಡಿಗಳು ಗಣೇಶ ಮೆರವಣಿಗೆ ಮೇಲೆ ಮನಸ್ಸೋ ಇಚ್ಚೆ ಕಲ್ಲು ತೂರಾಟ ಮಾಡಿದ್ರು, ಘಟನೆಯಲ್ಲಿ ಸಿಪಿಐ ಬಸವರಾಜ್ ಸೇರಿ ಮೂವರು ಪೊಲೀಸರು, ಹತ್ತಕ್ಕೂ ಹೆಚ್ಚು ಹಿಂದೂ ಯುವಕರು ಗಾಯಗೊಂಡರು.
*ದಾವಣಗೆರೆಗೆ ಆಗಮಿಸಿದ ಎಡಿಜಿಪಿ ಹಿತೇಂದ್ರ*
ಇನ್ನೂ ಗಣೇಶ ವಿಸರ್ಜನಾ ಮೆರವಣಿಗೆ ಮೇಲಷ್ಟೆ ಅಲ್ಲದೇ ಮಟ್ಟಿಕಲ್ಲು ನಗರದಲ್ಲಿ ಬಂದ ಕಿಡಿಗೇಡಿಗಳ ಗುಂಪು ಮನೆಗಳಿಗೆ, ಕಲ್ಲು ತೂರಿದ್ದಾರೆ, ಜೊತೆಗೆ ಬಿಯರ್ ಬಾಟಲಿ ಎಸೆದು ಎಸ್ಕೇಪ್ ಆಗಿದ್ದಾರೆ, ಕಾರು, ಬೈಕ್ ಗಳಿಗೆ ಹಾನಿ ಮಾಡಿ ಹೋಗಿದ್ದು, ಜನ ರಾತ್ರಿಯಿಡಿ ಮಲಗದೆ ಭಯದಲ್ಲೆ ರಾತ್ರಿ ಕಳೆದಿದ್ದಾರೆ. ಇನ್ನೂ ಘಟನೆಯಲ್ಲಿ ಮಸೀದಿ ಮೌಲ್ವಿಗೂ ಕಲ್ಲೇಟು ಬಿದ್ದಿದೆ ಎನ್ನಲಾಗಿದೆ, ಇನ್ನೂ ಪ್ರಕರಣ ಗಂಭೀರ ಆಗುತ್ತಿದಂತೆ ಲಾ ಅಂಡ್ ಆರ್ಡರ್ ಎಡಿಜಿಪಿ ಆರ್ ಹಿತೀಂದ್ರ ದಾವಣಗೆರೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ, ದಾವಣಗೆರೆ ಗಲಾಟೆ ಸಂಬಂಧ ಎರಡು ದೂರು, ಎರಡು ಸುಮೋಟೊ ಕೇಸ್ ದಾಖಲಾಗಿದೆ, ಇದುವರೆಗೂ ಮೂವತ್ತು ಮಂದಿ ಬಂಧನವಾಗಿದೆ, ಸದ್ಯ ದಾವಣಗೆರೆ ಶಾಂತಿಯುತವಾಗಿದೆ, ಇದ್ದಕ್ಕಿದ್ದಂತೆ ಪ್ರಚೋದನೆಗಳಿಗೆ ಒಳಗಾಗಿ ಗಲಾಟೆ ಎದ್ದಿದೆ, ಜನಗಳ ಮನಸ್ಸು ಸರಿ ಇಲ್ಲ, ಇದನ್ನ ಹೇಗೆ ಸರಿಪಡಿಸಬೇಕೋ ನೋಡ್ತೇವೆ, ಶಾಂತಿ ಕಾಪಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿವಿ ಎಂದು ಎಡಿಜಿಪಿ ಹಿತೇಂದ್ರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ..
ಘಟನೆಗೆ ಕಾರಣ ಏನೂ ಗೊತ್ತಾ..?
ಘಟನೆಗೆ ಪ್ರಮುಖ ಕಾರಣ ಅಂದ್ರೆ ಗಾಂಧಿ ನಗರ ಪೊಲೀಸ್ ಠಾಣೆ ಬಳಿಯ ಮೊಬೈಲ್ ಟವರ್ ಮೇಲೆ ಕಟ್ಟಿದ್ದ ಭಗ್ವಾಧ್ವಜವನ್ನ ಮುಸ್ಲಿಂ ಯುವಕರು ಕಿತ್ತಿದ್ದಾರೆ ಎಂದು ಏರಿಯಾದಲ್ಲಿ ಹಿಂದುಗಳಿಗೂ ಮುಸ್ಲಿಂರಿಗೂ ಸಣ್ಣಪುಟ್ಟ ಜಗಳವಾಗಿರುತ್ತೆ, ಈ ಹಿನ್ನಲೆ ನಾಗಮಂಗಲ ಪ್ರಕರಣ ಹಾಗೂ ಭಗ್ವಧ್ವಜ ಕಿತ್ತಿದ್ದಾರೆ ಎಂದು ಹಿಂದು ಪರ ಕಾರ್ಯಕರ್ತರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದರು, ಈ ವೇಳೆ ಹಿಂದೂ ಮುಖಂಡ ಸತೀಶ್ ಪೂಜಾರಿ ಮಂಡಕ್ಕಿ ಭಟ್ಟಿ ನಾಯಿಗಳೇ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಚೋಧನಕಾರಿ ಭಾಷಣ ಮಾಡಿದ್ರು, ಇದಾದ ಬಳಿಕ ಮುಸ್ಲಿಂ ವ್ಯಕ್ತಿ ಓರ್ವ ಅವ್ಯಾಚ್ಯ ಶಬ್ದಗಳಿಂದ ಸತೀಶ್ ಪೂಜಾರಿಗೆ ನಿಂದಿಸಿದ್ದು ಇಷ್ಟೆಲ್ಲ ಗಲಭೆಗೆ ಕಾರಣವಾಗಿದೆ ಎನ್ನಲಾಗಿದೆ, ಈ ಗಣೇಶ ಮೆರವಣಿಗೂ ಮುನ್ನ ಸತೀಶ್ ಪೂಜಾರಿ ಗಣೇಶ ಹಾರ ಹಾಕಿ ವಾಪಸ್ ತೆರಳಿದ್ದರು, ಇದನ್ನೆ ಮನಸ್ಸಿನಲ್ಲಿಟ್ಟು ಕೋಮು ಸಂಘರ್ಷ ಉಂಟಾಗಿದೆ ಎನ್ನಲಾಗಿದೆ. ಆದ್ರೆ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಇರಲಿಲ್ಲ, ಇಷ್ಟಿದ್ದರು ಯುವಕರ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ್ದು ಯಾಕೆ ಎಂಬ ಪ್ರಶ್ನೆ ಹಿಂದು ಸಂಘಟನೆಯದ್ದಾಗಿದೆ, ಇನ್ನೂ ಯಾವುದೇ ಕಾರಣಕ್ಕೂ ನಾವು ಹೆದರೋದಿಲ್ಲ ಮುಂದೆ ಅನಾಹುತಗಳಾದರೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ಶಾಸಕ ಬಿಪಿ ಹರೀಶ್ ಎಚ್ಚರಿಕೆ ನೀಡಿದ್ದರೆ, ಶಾಂತಿ ಕಾಪಾಡಿ ಎಂದು ಮುಸ್ಲಿಂ ಸಂಘಟನೆಗಳು ಯುವಕರಿಗೆ ಕರೆ ನೀಡಿವೆ..
ಇನ್ನೂ ಕೇಸ್ ಸಂಬಂಧ ಪೊಲೀಸರು ನ್ಯಾಯಾಧೀಶರ ಮುಂದೆ 18 ಜನ ಆರೋಪಿಗಳನ್ನೂ ಪೊಲೀಸರು ಹಾಜರುಪಡಿಸಿದ್ದು, ಒಟ್ಟು ಮೂವತ್ತಕ್ಕೂ ಹೆಚ್ಚು ಜನರ ಬಂಧನವಾಗಿದೆ, ಒಟ್ಟಾರೆ ಶಾಂತಿಯಿಂದ ಇದ್ದ ದಾವಣಗೆರೆ ಸಹಜ ಸ್ಥಿತಿಗೆ ಬಂದಿದ್ದಾದರೂ ಬೆಣ್ಣೆನಗರಿ ದಾವಣಗೆರೆ ಬೂದಿ ಮುಚ್ಚಿದ ಕೆಂಡದಂತಾಗಿದೆ.