POWER SAMACHARA | KANNADA NEWS | BREKING NEWS| 30-09-2023..
ದಾವಣಗೆರೆ : ಟೌನ್ ಪ್ಲಾನ್ ಅಪ್ರೂವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹರಿಹರ ತಾಲ್ಲೂಕು ಪಂಚಾಯಿತ ಇಓ ಎನ್ ರವಿ, ಪಿಡಿಓ ರಾಘವೇಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ..
ದಾವಣಗೆರೆ ನಗರದ ಮಾವನ ಮನೆಯಲ್ಲಿದ್ದಾಗ ಇಓ ಎನ್ ರವಿ ಅವರು ಲಂಚ ಸ್ವೀಕಾರ ಸ್ವೀಕಾರ ಮಾಡಿದ್ದಾರೆ ಎನ್ನಲಾಗಿದ್ದು, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್ ಅವರ ಅಳಿಯ ಎಂದು ತಿಳಿದು ಬಂದಿದೆ, ಶ್ರೀ ರಾಮಸೇನೆ ಕಾರ್ಯಕರ್ತ ಶ್ರೀನಿವಾಸ್ ಎಂಬುವವರು ಟೌನ್ ಪ್ಲಾನಿಂಗ್ ಮಾಡಿಕೊಡಲು ಸುಮಾರು 1.60 ಲಕ್ಷ ರೂಪಾಯಿಗೆ ಇಓ ಎನ್ ರವಿ , ಪಿಡಿಓ ಶ್ರೀನಿವಾಸ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಈ ಸಂಬಂಧ ದಾವಣಗೆರೆ ನಗರದ ಪಾಲಿಕೆ ಸದಸ್ಯೆ ಗೌರಮ್ಮ ಚಂದ್ರಪ್ಪ ಅವರ ಮನೆಯಲ್ಲಿ ಎನ್ ರವಿ ಅವರು ಶ್ರೀನಿವಾಸ್ ಅವರನ್ನು ಕರೆಸಿದ್ದು, 1.50 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಇಓ ಎನ್ ರವಿ ಹಾಗೂ ಸಾರಥಿ ಗ್ರಾಮದ ಪಿಡಿಒ ಶ್ರೀನಿವಾಸ್ ಲೋಕಾ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಎಸ್ಪಿ ಕೌಲ್ಯಾಪುರೆ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ..
ಮಣಿ ಸರ್ಕಾರ್ ಹೇಳಿದ್ದೇನು, ನಾಳೆ ಸುದ್ದಿಗೋಷ್ಠಿ..?
ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್ ಅವರ ಸ್ವಂತ ಅಳಿಯ ಎನ್ ರವಿ ಲೋಕಾಯುಕ್ತ ಬಲೆ ಬಿದ್ದಿದ್ದಾರೆ, ಪಾಲಿಕೆ ಸದಸ್ಯರ ಮನೇಯಲ್ಲಿಯೇ ಟ್ರ್ಯಾಪ್ ಆಗಿದೆ, ಲೋಕಾಯುಕ್ತರು ಸಾಕಷ್ಟು ಬೇಟೆಯಾಡುತ್ತಿದ್ದಾರೆ. ಸಾಕಷ್ಟು ಭ್ರಷ್ಟ ಅಧಿಕಾರಿಗಳು ಟ್ರ್ಯಾಪ್ ಆಗುತ್ತಿದ್ದಾರೆ, ಆದರೂ ಸಹ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಇನ್ನಾದರು ಲಂಚ ಪಡೆಯದೇ ಅಧಿಕಾರಿಗಳು ಜನರ ಕೆಲಸ ಮಾಡಿಕೊಡಬೇಕಿದೆ. ಇಲ್ಲದಿದ್ದರೆ ಎಲ್ಲರು ಲೋಕಾಯುಕ್ತ ಬಲೆಗೆ ಬೀಳಬೇಕಾಗುತ್ತದೆ ಎಂದು ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಹೇಳಿಕೆ ನೀಡಿದ್ದಾರೆ..