POWER SAMACHARA | KANNADA NEWS | BREKING NEWS| 21-02-2024
ದಾವಣಗೆರೆ; ಕೆಲ ಇಲಾಖೆಗಳನ್ನ ಹೊರತುಪಡಿಸಿ ಬಹುತೇಕ ಸರ್ಕಾರಿ ಇಲಾಖೆಗಳು ಜನರನ್ನ ಸುಲಿದು ತಿನ್ನುತ್ತವೆ ಎನ್ನೋ ಮಾತು ಆಗಾಗ ಕೇಳಿ ಬರುತ್ತದೆ, ಆದ್ರೆ ಈ ಇಲಾಖೆ ಅನಾಥೆಯರ ಬಾಳಲ್ಲಿ ಬೆಳಕಾಗಿ ಬಂದಿದ್ದು ಬರೋಬ್ಬರಿ 43ಅನಾಥೆಯರಿಗೆ ಮದುವೆ ಮಾಡಿ ಹೊಸ ಬಾಳು ಕಲ್ಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.. ಈ ಕುರಿತ ಒಂದು ಸ್ಟೋರಿ ಇಲ್ಲಿದೆ..
ಹೊಸ ಜೀವನಕ್ಕೆ ಕಾಲಿಟ್ಟ ವಧು ವರ, ಮದುವೆ ಸಡಗರ ಸಂಭ್ರಮ, ಅಯ್ಯೋ ಇದೇನು ಮದುವೆ ಆಲ್ಬಂ ತೋರಿಸುತ್ತಿದ್ದಾರ ಎಂದುಕೊಳ್ಳಬೇಡಿ, ಇದು ಸಾಮಾನ್ಯ ಮದುವೆ ಅಲ್ಲ, ಇಲ್ಲಿ ಇದ್ದೋರೆಲ್ಲ ಸಂಬಂಧಿಕರಲ್ಲ. ಹೌದು.. ಇದೊಂದು ವಿಶೇಷ ಮದುವೆ, ಇಲ್ಲಿ ನಿಂತಿರುವ ವಧು ದಿವ್ಯಾ ಅಂತಾ ವಯಸ್ಸು 24ವರ್ಷ ಈಕೆಯ ತಂದೆ ತಾಯಿ ನಿಧನ ಹೊಂದಿದ್ದು, ಅನಾಥೆ, ಈ ಅನಾಥೆ ಮುಂದೇ ದಾವಣಗೆರೆ ನಗರದ ರಾಮನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಹಿಳಾ ನಿಲಯದಲ್ಲಿ ತುಮಕೂರಿನಿಂದ ವರ್ಗಾವಣೆಗೊಂಡಿದ್ದಳು, ಮದುವೆ ವಯಸ್ಸಿಗೆ ಬಂದ ಹಿನ್ನಲೆ ಮದುವೆ ಮಾಡಬೇಕಾಗಿ ಬಂದಿತ್ತು, ಆಗ ಸಿಕ್ಕವರೇ ಚಿತ್ರದುರ್ಗದ ಮುದ್ಲಾಪುರ ಗ್ರಾಮದ ಟಿ. ನಾಗರಾಜ್, ಈ ಇಬ್ಬರ ಸಂಬಂಧಿಕರೊಂದಿಗೆ ಮಾತನಾಡಿ ಒಪ್ಪಿಗೆ ಮೇರೆಗೆ ಇಂದು ದಾವಣಗೆರೆಯ ಮಹಿಳಾ ನಿಲಯದಲ್ಲಿ ಕುವೆಂಪು ಅವರ ಆಶಯ ನುಡಿ ಮಂತ್ರ ಮಾಂಗಲ್ಯದ ಪರಿಕಲ್ಪನೆಯಲ್ಲಿ ಮದುವೆ ಮಾಡಿಕೊಡಲಾಯಿತು. ಈಕೆಯನ್ನ ಸ್ವಂತ ಮಗಳಂತೆ ದಾರಿ ಎರೆದಿದ್ದು ಬೇರೆ ಯಾರು ಅಲ್ಲ, ಜಿಲ್ಲಾಧಿಕಾರಿ ಡಾ. ಎಂವಿ ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್, ಮಹಿಳಾ ಇಲಾಖೆ ಡಿಡಿ ವಾಸಂತಿ ಉಪ್ಪಾರ ದಾರೆ ಎರೆದುಕೊಟ್ಟಿದ್ದು ವಿಶೇಷವಾಗಿತ್ತು..
ಇನ್ನೂ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ ಸಡಗರ ಇತ್ತು, ತಂದೆ ತಾಯಿ ಮರಣದ ಹಿನ್ನಲೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಯುವತಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ, ಪೋಷಕರ ಸ್ಥಾನದಲ್ಲಿ ನಿಂತು ಜಿಲ್ಲಾಡಳಿತ ಈ ಕಲ್ಯಾಣ ಕಾರ್ಯ ನೆರವೇರಿಸಿದೆ, ಯುವತಿ ದಿವ್ಯಾ, ಚಿತ್ರದುರ್ಗದ ನಾಗರಾಜ್ ರ ಕಲ್ಯಾಣ ಕಾರ್ಯಕ್ರಮ ನಡೆದಿದೆ, ಪಾಯಸ, ಜಿಲೇಬಿ, ಪೂರಿ, ಪನ್ನಿರ್ ಮಸಾಲ, ಅನ್ನಸಾಂಬರ್ ಬೊಂಬಾಟ ಭೋಜನ ಸಿದ್ದಪಡಿಸಲಾಗಿತ್ತು, ಇನ್ನೂ ರಾಜ್ಯ ಮಹಿಳಾ ನಿಲಯದಲ್ಲಿ ಅನಾಥರ 43 ವಿವಾಹಗಳು,6 ನಾಮಕರಣ ಕಾರ್ಯಕ್ರಮಗಳು ನಡೆದಿವೆ, ಇಂದು ನಡೆದ ದಿವ್ಯಾ,ನಾಗರಾಜ್ ಮದುವೆ 43 ನೇ ಮದುವೆ ಆಗಿದ್ದು, ಇಂದು ಉಪನೊಂದಣಿ ಕಚೇರಿಯಲ್ಲಿ ನೋಂದಣಿ ಆಗಿದೆ. ಈ ಅನಾಥರ ಕಲ್ಯಾಣ ಕಾರ್ಯಗಳಿಂದ ಮಹಿಳಾ ಮತ್ತು ಮಕ್ಕಳ ನಿಲಯ ಮೆಚ್ಚುಗೆಗೆ ಪಾತ್ರವಾಗಿದೆ,ಮದುಮಗಳ ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್ ನೀಡಿದ್ದು,
ಇಲಾಖೆ ಮೂರು ವರ್ಷಗಳ ನಂತರ ಬಡ್ಡಿ ಸಮೇತ ವಾಪಸ್ ನೀಡಲಿದೆ.
ಒಟ್ಟಾರೆ ತಂದೆ ತಾಯಿ ಇಲ್ಲದ ಅನಾಥೆ ಬಾಳು ಬೆಳಕಾಗಿದೆ, ಆಕೆಯನ್ನ ಮಹಿಳಾ ಇಲಾಖೆ ಇಷ್ಟು ದಿನ ರಕ್ಷಣೆ ಮಾಡಿದ್ದು ಇನ್ನೂ ಮುಂದೇ ಪತಿಯೊಂದಿಗೆ ಸಂಸಾರದ ಸಾಗರಕ್ಕೆ ಕಾಲಿಟ್ಟಿದ್ದು ಮಹಿಳಾ ನಿಲಯದಲ್ಲಿ ಸಂಭ್ರಮ ಕಳೆಗಟ್ಟಿದೆ..