POWER SAMACHARA | KANNADA NEWS | BREKING NEWS| 23-09-2023..
ದಾವಣಗೆರೆ : ಕಾವೇರಿ ನೀರಿಗಾಗಿ ಮಂಡ್ಯ ಬಂದ್ ಆದ ಬೆನ್ನಲ್ಲೆ ಭದ್ರಾ ನೀರಿಗಾಗಿ ದಾವಣಗೆರೆ ಬಂದ್ ಗೆ ರೈತರು ಕರೆ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಭುಗಿಲೆದ್ದಿದೆ, 100ದಿನ ನಿರಂತರ ನೀರು ಬಿಡುವುದಾಗಿ ಕಾಡಾ ಪ್ರಾಧಿಕಾರ ಆದೇಶ ಮಾಡಿದ ಹಿನ್ನಲೆ ಭತ್ತ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿ ಮಾಡಿದ್ದರು, ಆದರೆ ಹೀಗ ಏಕಾಏಕಿ ನೀರು ಬಂದ್ ಮಾಡಲಾಗಿದೆ..
ಸಂಪೂರ್ಣ ಬೆಳೆ ನಾಶ: ರೈತ ಕಣ್ಣೀರು..
ಎರಡು ಹಂತಗಳಲ್ಲಿ ಆನ್ ಅಂಡ್ ಆಫ್ ಗೆ ನಿರ್ಧಾರ ಮಾಡಿ ಕಾಡಾ ಸಮಿತಿ ಎರಡನೇ ಆದೇಶ ಮಾಡಿದೆ, 100 ದಿನ ನೀರು ಬಿಡುತ್ತೇವೆ ಎಂದ ಹಿನ್ನಲೆ ಭದ್ರಾ ಅಚ್ಚುಕಟ್ಟು ಭಾಗದ ರೈತರು, ಸುಮಾರು 62 ಸಾವಿರ ಹೆಕ್ಟೇರ್ ಭತ್ತ ನಾಟಿ ಮಾಡಿದ್ದಾರೆ, ಆನ್ ಅಂಡ್ ಆಫ್ ಮಾಡುವುದರಿಂದ ಭತ್ತ ಸಂಪೂರ್ಣ ನಾಶವಾಗಲಿದೆ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ದ ರೈತರು ಕೆಂಡಕಾರಿದ್ದಾರೆ, ಈ ಹಿನ್ನಲೆ ಅನ್ನದಾತರು ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ದಾವಣಗೆರೆ ಬಂದ್ ಗೆ ಕರೆ ನೀಡಿದ್ದಾರೆ, ದಾವಣಗೆರೆ ಭಾರತೀಯ ರೈತ ಒಕ್ಕೂಟ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಬಂದ್ ಗೆ ರೈಸ್ ಮಿಲ್ ಮಾಲೀಕರು, ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್ ಮಾಲೀಕರ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ.
ಮಧು ಬಂಗಾರಪ್ಪ ರಾಜಕೀಯ..
ಸಚಿವ ಮಧು ಬಂಗಾರಪ್ಪ ವಿರುದ್ಧ ದಾವಣಗೆರೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಭದ್ರಾದಿಂದ ನೀರು ಹರಿಸುವ ವಿಚಾರದಲ್ಲಿ ಸಚಿವ ಮಧು ಬಂಗಾರಪ್ಪ ರಾಜಕೀಯ ಮಾಡುತ್ತಿದ್ದಾರೆ, ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನ ಶಿವಮೊಗ್ಗ ಎಂಪಿ ಚುನಾವಣೆ ನಿಲ್ಲಿಸಲು ಸಲುವಾಗಿ ಅಲ್ಲಿನ ಜನರ ವಿಶ್ವಾಸ ಗಳಿಸಲು ನೀರು ಬಂದ್ ಮಾಡಿದ್ದಾರೆ, ಶಿವಮೊಗ್ಗ ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರಿಗೆ ನೀರು ನೀಡಲು ಈ ರೀತಿ ಮಾಡಿದ್ದಾರೆ, ಶಿವಮೊಗ್ಗದಲ್ಲಿ ಅಡಿಕೆ ಬೆಳೆಯುವ ರೈತರನ್ನ ಓಲೈಸಲು ತಂಗಿಯನ್ನ ಚುನಾವಣೆಗೆ ನಿಲ್ಲಿಸಲು ಓಲೈಕೆ ರಾಜಕಾರಣ ಮಾಡುತಿದ್ದಾರೆ ಅಂತ ಕಿಡಿಕಾರಿದ್ದಾರೆ, ಭಾನುವಾರ ಸಾಯಂಕಾಲದ ಒಳಗೆ ನೀರು ಬಿಡಲು ಆದೇಶವಾಗದೆ ಇದ್ದಲ್ಲಿ ದಾವಣಗೆರೆ ಸಂಪೂರ್ಣ ಬಂದ್ ಮಾಡಲಾಗುವುದು, ಶಾಲಾ ಕಾಲೇಜು, ಆಸ್ಪತ್ರೆ ಹೊರತು ಪಡಿಸಿ ಎಲ್ಲರೂ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ..
ಈ ಸಂದರ್ಭದಲ್ಲಿ ರೈತ ಹೋರಾಟಗಾರರಾದ ಬಿಎಂ ಸತೀಶ್, ಕುಂದುವಾಡ ಹೆಚ್ ಜಿ ಗಣೇಶಪ್ಪ, ಬೆಳವನೂರು ನಾಗೇಶ್ವರ್ ರಾವ್, ಕುಂದುವಾಡ ಹೆಚ್ ಎನ್ ಗುರುನಾಥ್, ಶಾಮನೂರು ಲಿಂಗರಾಜ್, ಮಹೇಶಪ್ಪ, ಪುನೀತ್, ಕಲ್ಲಿಂಗಪ್ಪ, ಮಂಜುನಾಥ್ ಸೇರಿದಂತೆ ಮತ್ತಿತರರಿದ್ದರು..