POWER SAMACHARA | KANNADA NEWS | BREKING NEWS| 08-10-2023..
ದಾವಣಗೆರೆ : ದಾವಣಗೆರೆ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಗಾಗಿ ಸಿಎಂ ಸಿದ್ದರಾಮಯ್ಯ ಆಪ್ತರ ನಡುವೆ ಬಿಗ್ ಫೈಟ್ ನಡೆಯುತ್ತಿದೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಕಳೆದ ಭಾರೀ ಬಹಳ ಅಂತರದಲ್ಲಿ ಎಂಪಿ ಚುನಾವಣೆಯಲ್ಲಿ ಸೋತಿದ್ದ ಹೆಚ್ ಬಿ ಮಂಜಪ್ಪ ಹಾಗೂ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ವಿನಯ್ ಕುಮಾರ್ ನಡುವೆ ಟಿಕೆಟ್ ಗಾಗಿ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ..
ಅಹಿಂದ ಮತಗಳಿದ್ರು ಸತತ ಸೋಲು ಕಂಡಿರುವ ಕೈ..
ಅಹಿಂದ ಮತಗಳೇ ಹೆಚ್ಚಿರುವ ದಾವಣಗೆರೆಯಲ್ಲಿ ಈ ಹಿಂದೆ ಕುರುಬ ಸಮುದಾಯದ ಚನ್ನಯ್ಯ ಒಡೆಯರ್ ಸತತ ಗೆದ್ದು ಬರ್ತಾ ಇದ್ದರು, ಆದರೆ ಸುಮಾರು ಮೂವತ್ತು ವರ್ಷಗಳಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವನ್ನೇ ನೋಡಿಲ್ಲ, ಸತತ ನಾಲ್ಕು ಭಾರೀ ಬಿಜೆಪಿ ಪಕ್ಷದಿಂದ ಜಿಎಂ ಸಿದ್ದೇಶ್ವರ್ ಆಯ್ಕೆಗೊಂಡು ಇತಿಹಾಸ ನಿರ್ಮಿಸಿದ್ದಾರೆ, ಅದಕ್ಕೂ ಹಿಂದೇ ಸಿದ್ದೇಶ್ವರ್ ಅವರ ತಂದೆ ಮಲ್ಲಿಕಾರ್ಜುನಪ್ಪ ಎರಡು ಭಾರೀ ಸಂಸದರಾಗಿ ಆಯ್ಕೆಗೊಂಡಿದ್ದು ಇತಿಹಾಸ, ಅಹಿಂದ ಪ್ರಾಬಲ್ಯವಿದ್ದರು ಸಹ ಕಾಂಗ್ರೆಸ್ ಗೆ ಎಂಪಿ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ, ಸತತ ಮೂರು ಭಾರೀ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಜಿಎಂ ಸಿದ್ದೇಶ್ವರ್ ವಿರುದ್ದ ಸೋತಿದ್ದು ಯಾರು ಮರೆಯುವಂತಿಲ್ಲ, ಇನ್ನೂ ಕಳೆದ ಭಾರೀ ಕಾಂಗ್ರೆಸ್ ಜಿಲ್ಲಾಧ್ಯಕ್ಷ , ಸಿಎಂ ಸಿದ್ದರಾಮಯ್ಯ, ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತನೆಂದೆ ಗುರುತಿಸಿಕೊಂಡಿರುವ ಹೆಚ್ ಬಿ ಮಂಜಪ್ಪ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಕ್ಕಿತ್ತು, ಈ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಮಂಜಪ್ಪ ಸೋಲು ಕಾಣ ಬೇಕಾಯಿತು, 2024ರ ಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತದೇ ಜಿಎಂ ಸಿದ್ದೇಶ್ವರ್ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗ್ತಿದ್ದು, ಐದನೇ ಭಾರೀಯೂ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿ ಓಡಾಟ ಆರಂಭಿಸಿದ್ದಾರೆ.. ಆದರೆ ಇತ್ತ ಸತತ ಸೋಲು ಕಂಡಿರುವ ಕಾಂಗ್ರೆಸ್ ನಲ್ಲಿ ಎಲ್ಲವು ಸರಿ ಇಲ್ಲ ಎನ್ನೋದು ಎದ್ದು ಕಾಣ್ತಿದೆ, ಟಿಕೆಟ್ ಗಾಗಿ ಈಗಿನಿಂದಲೇ ಬಿಗ್ ಫೈಟ್ ನಡೀತಾ ಇದೆ.
ಕಾಂಗ್ರೆಸ್ ನಲ್ಲಿ ಯಾರ್ಯಾರು ಆಕಾಂಕ್ಷಿಗಳು..?
ಕಳೆದ ಭಾರೀ ಸೋತಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಮತ್ತೊಮ್ಮೆ ಕಣಕ್ಕೆ ಇಳಿಯುವ ಉತ್ಸಾಹದಲ್ಲಿದ್ದಾರೆ, ಇತ್ತ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಸಹ ಸ್ಪರ್ಧಿಸಬಹುದು ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಈ ಭಾರೀಯ ಕ್ಯಾಂಡಿಡೇಟ್ ಅಂತಾ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ, ಈ ಮಧ್ಯೆ ಹೊಸ ಮುಖವಾಗಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಕ್ಷೇತ್ರದಾದ್ಯಂತ ಸಮಾಜ ಸೇವೆಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನ ನೋಡಿದ ಜನರು, ಈ ಭಾರೀ ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್ ಅವರೇ ಸ್ಪರ್ಧಿಸ್ತಾರೆ ಅದಕ್ಕೇ ಓಡಾಟ ನಡೆಸಿದ್ದಾರೆ ಎಂಬ ಚರ್ಚೆ ಮಾಡುತ್ತಿದ್ದಾರೆ. ಇತ್ತ ಮತ್ತೊಂದು ಹೊಸ ಮುಖ ಅಂದರೆ ಅದುವೇ ಇನ್ ಸೈಟ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕರಾಗಿರುವ ವಿನಯ್ ಕುಮಾರ್, ಹೌದು.. ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿನಯ್ ಕುಮಾರ್, ದಾವಣಗೆರೆ ಸಮೀಪದ ಕಕ್ಕರಗೊಳ್ಳ ಗ್ರಾಮದವರು, ಸದ್ಯ ದಾವಣಗೆರೆಯಲ್ಲಿ ಚಾಲ್ತಿಯಲ್ಲಿ ಓಡುತ್ತಿರುವ ಹೆಸರು, ಏನೇ ಸಮಾರಂಭ, ಸಮಾಜ ಸೇವೆ ಕಾರ್ಯಗಳಿಗೆ ಬಿಡುವಿಲ್ಲದೇ ಓಡಾಡ್ತಾ ಇರೋದು ವಿನಯ್ ಕುಮಾರ್, ಎಲ್ಲಾ ಗ್ರಾಮಗಳಿಗೆ ಓಡಾಟ ಮಾಡಿ ಜನರ ವಿಶ್ವಾಸ ಗಳಿಸುತ್ತಿದ್ದಾರೆ, ಮೊನ್ನೆಯಷ್ಟೆ ದೊಡ್ಡ ಕಾರ್ಯಕ್ರಮ ಒಂದನ್ನ ಮಾಡಿ ವಿಕಲಚೇತನರಿಗೆ ವೀಲ್ ಚೇರ್, ಶ್ರವಣದೋಷವುಳ್ಳವರಿಗೆ ಕಿಟ್ ಸೇರಿದಂತೆ ಹಲವು ಸಮಾಜಮುಖಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೈಕಮಾಂಡ್ ನನಗೆ ಕ್ಷೇತ್ರದಲ್ಲಿ ಓಡಾಡಲು ಹೇಳಿದೆ, ಅದಕ್ಕೆ ನಾನು ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ವಿನಯ್ ಕುಮಾರ್ ಹೇಳಿದ್ದರು, ಈ ಹೇಳಿಕೆಯೇ ಜಿಲ್ಲಾ ಕಾಂಗ್ರೆಸ್ ಗೆ ನುಂಗಲಾರದ ತುಪ್ಪವಾಗಿದೆ..
ನಿನ್ನೆ ಮೊನ್ನೆ ಬಂದೋರಿಗೆಲ್ಲ ಟಿಕೆಟ್ ಇಲ್ಲ
ವಿನಯ್ ಕುಮಾರ್ ನಡೆಯಿಂದ ಸಿಟ್ಟಿಗೆದ್ದಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಸುದ್ದಿಗೋಷ್ಠಿ ಕರೆದು, ನಿನ್ನೆ ಮೊನ್ನೆ ಬಂದೋರಿಗೆಲ್ಲ ಟಿಕೆಟ್ ಇಲ್ಲ ಎಂದು ಹೇಳಿಕೆ ನೀಡಿದ್ದು ಕಿಡಿ ಹೊತ್ತಲು ಕಾರಣವಾಗಿದೆ, ಹೊರಗಡೆಯಿಂದ ಬಂದೋರಿಗೆ ಟಿಕೆಟ್ ಇಲ್ಲ, ಕಾರ್ಯಕರ್ತರಲ್ಲಿ ಗೊಂದಲ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ, ಪಕ್ಷಕ್ಕೆ ಇವರ ಕೊಡುಗೆ ಏನೂ ಎಂದು ಪರೋಕ್ಷವಾಗಿ ವಿನಯ್ ಕುಮಾರ್ ಗೆ ಟಾಂಗ್ ನೀಡಿದ್ದರು. ನಾನು ಕೂಡ ಎಂಪಿ ಟಿಕೆಟ್ ಆಕಾಂಕ್ಷಿ, ಆದರೆ ನಮಗೆ ಶಾಮನೂರು ಹೈಕಮಾಂಡ್ ಇದ್ದಂತೆ, ಈ ಭಾರೀ ಜನರು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನ ಕಣಕ್ಕೆ ಇಳಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು..
ಆರ್ಟಿಕಲ್ 19 ಏನೂ ಹೇಳುತ್ತೆ ಅಂದ್ರೆ..?
ಇನ್ನೂ ಹೆಚ್ ಬಿ ಮಂಜಪ್ಪ ಅವರಿಗೆ ಕೂಲಾಗಿ ಟಾಂಗ್ ನೀಡಿರುವ ದಾವಣಗೆರೆಯಲ್ಲಿ ಲೋಕಸಭೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್, ಇದು ಪ್ರಜಾಪ್ರಭುತ್ವ ಯಾರಾದರು ಸ್ಪರ್ಧೆ ಮಾಡಬಹುದು, ಸಂವಿಧಾನದಲ್ಲಿ ಆರ್ಟಿಕಲ್ 19 ಏನೂ ಹೇಳುತ್ತೆ ಅಂದರೆ, ದೇಶದಲ್ಲಿ ಸಂಘಟನೆ ಮಾಡಿ ಸೇವೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದೇನೆ, ಇದು ಪಕ್ಷ ದ್ರೋಹವೇ, ಜಿಲ್ಲೆಯಲ್ಲಿ ಸರಿಯಾಗಿ ಪಕ್ಷ ಸಂಘಟನೆ ಆಗಿಲ್ಲ, ನನ್ನ ಹಂತದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದಿದ್ದಾರೆ..
ಸರ್ವೆಯಲ್ಲಿ ಯಾರಿಗೆ ಮನ್ನಣೆ ಸಿಗುತ್ತೆ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುತ್ತೆ, ನಾನು ಹೊಸ ಮುಖ ಅಲ್ಲ, ಎಲ್ಲರಿಗೂ ಚಿರಪರಿಚಿತನೇ, ಬೆಳ್ಳೂಡಿ ಕನಕ ಮಠದಲ್ಲಿ ಐಎಎಸ್ ಕೋಚಿಂಗ್ ಸೆಂಟರ್ ತೆಗೆದು ಅನೇಕ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದೇನೆ, ಕೈಲಾದಷ್ಟು ಸಮಾಜ ಸೇವೆಯಲ್ಲಿ ತೊಡಗಿದ್ದೇನೆ, ನಾನು ಕಾಂಗ್ರೆಸ್ ಪಕ್ಷದ ಸದಸ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಇರೋರನ್ನ ಶಾಲು ಹಾಕಿ ಕರೆದುಕೊಳ್ಳಬೇಕು, ಆದರೆ ನಮ್ಮ ಸಮಾಜದ ದುರಂತ ಅಂದರೆ ಬರೀ ಅಡ್ಡ ಕಲ್ಲು ಹಾಕೋದೆ ಕೆಲಸವಾಗಿದೆ, ಯಾರೋ ಬರ್ತಾರೆ ಅಂದರೆ ಖುಷಿಪಡಲಿ, ವಿರೋಧ ಬೇಡ, ದಾವಣಗೆರೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿ ಇದೆ, ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಲೋಕಸಭೆಗೆ ಹೋಗಬೇಕು. ಕೊಪ್ಪ ಗ್ರಾಮದಲ್ಲಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದೇನೆ, ಬಿಜೆಪಿ ಸಂಸದರ ದುರಾಡಳಿತ ಬಗ್ಗೆ ಧ್ವನಿ ಎತ್ತುತ್ತಿದ್ದೇನೆ, ಇದು ನನ್ನ ಬೇಳೆ ಬೇಯಿಸಿಕೊಳ್ಳೋಕೆ ಅಲ್ಲ, ಇದು ಕಾಂಗ್ರೆಸ್ ಪಕ್ಷದ ಬೆಳವಣಿಗೆ ಕೂಡ ಆಗಿದೆ, ನನ್ನದು ಪಕ್ಷ ನಿಷ್ಠೆ ಕೆಲಸವಾಗಿದೆ, ಕೊನೆಯ ಉಸಿರು ಇರೋ ತನಕ ಕಾಂಗ್ರೆಸ್ ನಲ್ಲಿ ಇರುತ್ತೇನೆ, ಯಾರಿಗೆ ಟಿಕೆಟ್ ಸಿಕ್ಕರು ಕೆಲಸ ಮಾಡುತ್ತೇನೆ ಎಂದು ವಿನಯ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ…