POWER SAMACHARA | KANNADA NEWS | BREKING NEWS| 11-04-2024
ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣಾ ಕಣಾ ಬಿಸಿಲು ಏರಿದಂತೆ ರಂಗೇರುತ್ತಾ ಇದ್ದು, ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದೆ, ಲಿಂಗಾಯತ ಸಮಾಜದ ಮುಖಂಡ, ಮಹಾನಗರ ಪಾಲಿಕೆ ಕಾಂಗ್ರೆಸ್ ನ ಮಾಜಿ ಸದಸ್ಯ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಶಿವನಹಳ್ಳಿ ರಮೇಶ್ ಬಿಜೆಪಿ ಸೇರ್ಪಡೆ ಸುದ್ದಿ ಪಕ್ಕಾ ಆಗಿದ್ದು ಕಾಂಗ್ರೆಸ್ ಗೆ ತಳಮಳ ಶುರುವಾಗಿದೆ..
ಹೌದು.. ಮಹಾನಗರ ಪಾಲಿಕೆ ಸದಸ್ಯರಾಗಿದ್ದಾಗ ಶಿವನಹಳ್ಳಿ ರಮೇಶ್ ಉತ್ತಮವಾದ ಕೆಲಸಗಳ ಮೂಲಕ ಗಮನ ಸೆಳೆದಿದ್ದವರು, ಜೊತೆಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದವರು, ಆದರೆ ಅದ್ಯಾಕೋ ಗೊತ್ತಿಲ್ಲ ಕೈ ಪಕ್ಷ ಶಿವನಹಳ್ಳಿ ರಮೇಶ್ ಅವರನ್ನ ಸರಿಯಾಗಿ ನಡೆಸಿಕೊಂಡಿಲ್ಲ ಅನ್ನೋ ಆರೋಪ ಇದೆ, ಮತ್ತೊಂದು ಅವಧಿಗೆ ಸುಲಭವಾಗಿ ಗೆದ್ದು ಮೇಯರ್ ಆಗೋ ಅವಕಾಶ ಇದ್ರು ಸಹ ಪಕ್ಷದ ಜೊತೆಗಿನ ಮುನಿಸಿನಿಂದ ಅವಕಾಶ ಕೈ ತಪ್ಪಿ ಹೋಗಿತ್ತು, ಜೊತೆಗೆ ಪಕ್ಷದಲ್ಲೂ ಉನ್ನತ ಸ್ಥಾನಮಾನ ಸಿಗದೇ ಮೂಲೆ ಗುಂಪು ಮಾಡುವ ಹುನ್ನಾರ ನಡೆದಿತ್ತು ಎನ್ನಲಾಗಿದೆ, ಈ ಹಿನ್ನಲೆಯಲ್ಲೇ ಕಾಂಗ್ರೆಸ್ ಪಕ್ಷದ ನಡೆಗೆ ಬೇಸತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆ ಆಗಲು ರಮೇಶ್ ನಿರ್ಧರಿಸಿದ್ದು ಇಂದು ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ಚುನಾವಣಾ ಕಚೇರಿಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುವುದು ಪಕ್ಕಾ ಎಂದು ಅಧಿಕೃತ ಮೂಲಗಳು ತಿಳಿಸಿವೆ, ಇತ್ತ ನಿನ್ನೆ ತಡರಾತ್ರಿಯವರೆಗೂ ಹೈಡ್ರಾಮಾ ನಡೆದಿದೆ ಎನ್ನಲಾಗಿದ್ದು, ಕಾಂಗ್ರೆಸ್ ಬಿಡದಂತೆ ಎಸ್ ಎಸ್ ಮಲ್ಲಿಕಾರ್ಜುನ್
ಮನವಿ ಮಾಡಿದರು, ಶಿವನಹಳ್ಳಿ ರಮೇಶ್ ತಮ್ಮ ನಿರ್ಧಾರದಿಂದ ಹಿಂದೇ ಸರಿದಿಲ್ಲ ಎನ್ನಲಾಗಿದೆ