POWER SAMACHARA | KANNADA NEWS | 18-04-2023
ದಾವಣಗೆರೆ: ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಅಭ್ಯರ್ಥಿಗಳು ಆಸ್ತಿ ಘೋಷಣೆ ಮಾಡಿದ್ದಾರೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ₹337.49 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ..
ಶಾಮನೂರು ಶಿವಶಂಕರಪ್ಪ ₹337.49 ಕೋಟಿ ಒಡೆಯ.!
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿರುವ ಶಾಮನೂರು ಶಾಮನೂರು ಶಿವಶಂಕರಪ್ಪನವರು ₹257.83 ಕೋಟಿ, ರೂ.ಗಳ ಚರಾಸ್ತಿ ಹೊಂದಿದ್ದಾರೆ. ₹19.66 ಕೋಟಿ ರೂ.ಗಳ ಚರಾಸ್ತಿ ಮಾಲೀಕರಾಗಿದ್ದಾರೆ. ₹ 35 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಕುಟುಂಬದ ಮೂಲಕ 25 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಒಟ್ಟು ಆಸ್ತಿ ಮೌಲ್ಯ 337.49 ಕೋಟಿ ರೂ. ಆಗಿದೆ..
ಬಿಜಿ ಅಜಯ್ ಕುಮಾರ್ ಸಂಪತ್ತೆಷ್ಟು..?
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಮೇಯರ್ ಬಿಜಿ ಅಜಯ್ ಕುಮಾರ್ ಅವರು ₹ 2.18 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಪತ್ನಿ ಮಂಗಳ ₹36.20 ಲಕ್ಷ ರೂ., ಮಗಳು ಬಿ.ಎ. ನೇಹ 19.37 ಲಕ್ಷ ರೂ., ಮಗ ಎ.ಜಿ. ಭರತ್ 40.41 ಲಕ್ಷ ರೂ. ಹಾಗೂ ತಾಯಿ ಜಯಮ್ಮ 5 ಸಾವಿರ ರೂ. ಚರಾಸ್ತಿ ಹೊಂದಿದ್ದಾರೆ, ಅಜಯ್ ಕುಮಾರ್ ಬಳಿ 8.72 ಕೋಟಿ ರೂ.ಗಳ ಸ್ಥಿರಾಸ್ತಿ ಇದೆ. ಪತ್ನಿ ಮಂಗಳ 40.10 ಲಕ್ಷ ರೂ., ಮಗಳು ನೇಹ 5 ಲಕ್ಷ ರೂ. ಹಾಗೂ ಮಗ ಭರತ್ ಹೆಸರಿನಲ್ಲಿ 19 ಲಕ್ಷ ರೂ.ಗಳ ಸ್ಥಿರಾಸ್ತಿ ಇದೆ..
ಲೋಕಿಕೆರೆ ನಾಗರಾಜ್ ಬಳಿ ಇರೋ ಹಣವೆಷ್ಟು..?
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ನಡೆಸಿರೋ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರ ಬಳಿ 4.48 ಕೋಟಿ ರೂ. ಚರಾಸ್ತಿ ಇದೆ, 8.92 ಕೋಟಿ ರೂ. ಸ್ಥಿರಾಸ್ತಿ ಇದೆ, ಪತ್ನಿ ಎನ್. ಲತಾ ಹೊಂದಿರುವ ಚರಾಸ್ತಿ 92.62 ಲಕ್ಷ ರೂ. ಇದೆ..
152 ಕೋಟಿಯ ಒಡೆಯ ಎಸ್ ಎಸ್ ಮಲ್ಲಿಕಾರ್ಜುನ್.!
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರು 152 ಕೋಟಿ ಆಸ್ತಿ ಒಡೆಯ ಆಗಿದ್ದಾರೆ, ಎಸ್ ಎಸ್ ಮಲ್ಲಿಕಾರ್ಜುನ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ 2017-18ನೇ ಸಾಲಿನಲ್ಲಿ 20.34 ಕೋಟಿ ರೂ ಆದಾಯ ಇದ್ದರೆ, 2021-2202ರಲ್ಲಿ 2.07 ರೂ. ಆದಾಯ ಇದೆ ಎಂದು ತೋರಿಸಿದ್ದಾರೆ. 16.545 ಕೆಜಿ ಚಿನ್ನ, 628.840 ಕೆ.ಜಿ. ಬೆಳ್ಳಿ ಇದೆ, ಚಿನ್ನಾಭರಣ ಸೇರಿದಂತೆ ಚರಾಸ್ತಿಯು ಮಲ್ಲಿಕಾರ್ಜುನ ಅವರಲ್ಲಿ 81.93 ಕೋಟಿ ಇದೆ. ಪ್ರಭಾ ಅವರಲ್ಲಿ 5.88 ಕೋಟಿ ಮೌಲ್ಯದ ಚರಾಸ್ತಿ ಇದೆ.226.03 ಎಕರೆ ಕೃಷಿಭೂಮಿ, 22,17,055 ಚದರ ಅಡಿ ಕೃಷಿಯೇತರ ಭೂಮಿ ಸೇರಿದಂತೆ 70.77 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಎಸ್ ಎಸ್ ಎಂ ಹೊಂದಿದ್ದಾರೆ. 47.11 ಎಕರೆ ಕೃಷಿ ಭೂಮಿ, 11,050 ಕೃಷಿಯೇತರ ಭೂಮಿ ಸೇರಿದಂತೆ 30.61ಕೋಟಿ ಮೌಲ್ಯದ ಸ್ಥಿರಾಸ್ತಿ ಪ್ರಭಾ ಮಲ್ಲಿಕಾರ್ಜುನ್ ಅವರಿಗಿದೆ. 23.60 ಕೋಟಿ ಸಾಲ ಮಲ್ಲಿಕಾರ್ಜುನ ಅವರಿಗಿದ್ದರೆ, 97.28 ಲಕ್ಷ ಸಾಲ ಪ್ರಭಾ ಅವರಿಗಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ..
ಹೆಚ್ ಎಸ್ ಶಿವಶಂಕರ್ ಬಳಿ ಇರೋ ಆಸ್ತಿ ಎಷ್ಟು..?
ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಬಳಿ ಚರಾಸ್ತಿ ಮೌಲ್ಯ 1 ಕೋಟಿ ರೂ. ಸ್ಥಿರಾಸ್ತಿಗಳ ಒಟ್ಟು ಮೌಲ್ಯ 7.48 ಕೋಟಿ ರೂ. ಇದೆ..
ಮಾಜಿ ಶಾಸಕ ಡಿಜಿ ಶಾಂತನಗೌಡ ಬಳಿ ಇರುವ ಸಂಪತ್ತು ಎಷ್ಟು..?
ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಡಿಜಿ ಶಾಂತನಗೌಡ ಅವರ ಬಳಿ ಚರಾಸ್ತಿ ಮೌಲ್ಯ 69.05 ಲಕ್ಷ ರೂ. ಹಾಗೂ ಸ್ಥಿರಾಸ್ತಿ ಮೌಲ್ಯ 39.49 ಲಕ್ಷ ರೂ.ಇದೆ, ಪತ್ನಿ ರತ್ನಮ್ಮ ಬಳಿ ಚರಾಸ್ತಿ 67.87 ಲಕ್ಷ ರೂ. ಮಗ ಡಿ.ಎಸ್. ಪ್ರದೀಪ್ 1.51 ಕೋಟಿ ರೂ., ಸುರೇಂದ್ರ 1.09 ಕೋಟಿ ರೂ., ಸೊಸೆ ಪಿ. ಸೌಮ್ಯ 81.51 ಲಕ್ಷ ರೂ. ಹಾಗೂ ಸೊಸೆ ಎ.ಎನ್. ವಾಣಿ ಹೊಂದಿರುವ ಚರಾಸ್ತಿ 1.44 ಕೋಟಿ ರೂ. ಇದೆ.
ಹೆಚ್ ಆನಂದಪ್ಪ ಬಳಿ ಇರುವ ಹಣವೆಷ್ಟು..?
ಮಾಯಕೊಂಡ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಚ್. ಆನಂದಪ್ಪ ಅವರ ಬಳಿ ಚರಾಸ್ತಿಯ ಮೌಲ್ಯ 57.45 ಲಕ್ಷ ರೂ, ಪತ್ನಿ ನಿರ್ಮಲಮ್ಮ 30.31 ಲಕ್ಷ ರೂ., ಮಗ ಮಲ್ಲಿಕಾರ್ಜುನ್ ಬಳಿ 1.62 ಕೋಟಿ ರೂ, ಮಗ ರುದ್ರೇಶ್ ಚರಾಸ್ತಿ ಮೌಲ್ಯ 22.53 ಲಕ್ಷ ರೂ. ಆಸ್ತಿ ಇದೆ, ಆನಂದಪ್ಪ ಹೊಂದಿರುವ ಸ್ಥಿರಾಸ್ತಿ ಮೌಲ್ಯ 7.10 ಕೋಟಿ ರೂ, ಆಗಿದೆ, ಪತ್ನಿ ನಿರ್ಮಲಮ್ಮ5 ಕೋಟಿ ರೂ. ಹಾಗೂ ಮಗ ಮಲ್ಲಿಕಾರ್ಜುನ 8 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ಬಸವರಾಜ್ ನಾಯ್ಕ್ ಬಳಿ ಇರುವ ಹಣವೆಷ್ಟು..?
ಮಾಯಕೊಂಡ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ. ಬಸವರಾಜ ನಾಯ್ಕ ಅವರು ಬಳಿ 27 ಲಕ್ಷ ರೂ.ಗಳ ಚರಾಸ್ತಿ ಇದೆ, ಪತ್ನಿ ಮಮತಾ ಅವರ ಬಳಿ 55 ಲಕ್ಷ ರೂ. ಚರಾಸ್ತಿ ಇದೆ. ಬಸವರಾಜನಾಯ್ಕ ಹೊಂದಿರುವ ಸ್ಥಿರಾಸ್ತಿ 4 ಕೋಟಿ ರೂ. ಹಾಗೂ ಪತ್ನಿ 12 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ…
ಕೆಎಸ್ ಬಸವಂತಪ್ಪ ಬಳಿ ಇರುವ ಆಸ್ತಿ..?
ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಬಳಿ ಚರಾಸ್ತಿಯ ಮೌಲ್ಯ 18.70 ಲಕ್ಷ ರೂ. ಪತ್ನಿ ಮಮತ ಚರಾಸ್ತಿ 4.61 ಲಕ್ಷ ರೂ. ಇದೆ, ಸ್ಥಿರಾಸ್ತಿ ಮೌಲ್ಯ 78 ಲಕ್ಷ ರೂ. ಇದೆ..
ಎಸ್ ಬಿ ರಾಮಚಂದ್ರಪ್ಪ ಬಳಿ ಇರುವ ಆಸ್ತಿ ಎಷ್ಟು..?
ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಶಾಸಕ ಎಸ್ ವಿ ರಾಮಚಂದ್ರಪ್ಪ ಅವರ ಬಳಿ ಚರಾಸ್ತಿ ಮೌಲ್ಯ 4.02 ಕೋಟಿ ರೂ ಇದೆ, ಪತ್ನಿ ಎಸ್.ಆರ್. ಇಂದಿರಾ ಅವರ ಬಳಿ ಚರಾಸ್ತಿ 54.18 ಲಕ್ಷ ರೂ. ಮತ್ತು ಮಗ ಅಜಯೇಂದ್ರ ಸಿಂಹ ಹೊಂದಿರುವ ಚರಾಸ್ತಿ 4,95 ಆಗಿದೆ. ರಾಮಚಂದ್ರ ಹೊಂದಿರುವ ಸ್ಥಿರಾಸ್ತಿ ಮೌಲ್ಯ 9.33 ಕೋಟಿ ರೂ, ಪತ್ನಿ ಇಂದಿರಾ ಹೊಂದಿರುವ ಸ್ಥಿರಾಸ್ತಿ ಮೌಲ್ಯ 70 ಲಕ್ಷ ರೂ. ಇದೆ..