POWER SAMACHARA | CM KANNADA NEWS | 24-04-2023
ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಇನ್ನೇನು ಕೆಲ ದಿನಗಳು ಉಳಿದಿದ್ದು ನಾಯಕರಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ, ಅದರಂತೆ ಸಿಎಂ ಬಸವರಾಜ್ ಬೊಮ್ಮಾಯಿ ಜಯವಾಹಿನಿ ಮೂಲಕ ಕ್ಷೇತ್ರವಾರು ರ್ಯಾಲಿ ನಡೆಸಿ ಬಿಜೆಪಿ ಅಭ್ಯರ್ಥಿಗಳಿಗೆ ಬೂಸ್ಟ್ ತುಂಬೋ ಕೆಲಸ ಮಾಡ್ತಿದ್ದು, ಹರಿಹರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ..
ದಾವಣಗೆರೆ ಜಿ. ಹರಿಹರ ವಿಧಾನಸಭಾ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ಬಿಪಿ ಹರೀಶ್ ಪರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅಬ್ಬರದ ಪ್ರಚಾರ ನಡೆಸಿದ್ರು, ಜಯವಾಹಿನಿಯಲ್ಲಿ ರ್ಯಾಲಿ ನಡೆಸಿದ ಸಿಎಂ ಬಿಪಿ ಹರೀಶ್ ರವರನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.ಇನ್ನೂ ರ್ಯಾಲಿ ಯುದ್ದಕ್ಕೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ರು, ಕಾಂಗ್ರೆಸ್ 100% ಭ್ರಷ್ಟಾಚಾರ ಪಕ್ಷ, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಬ್ರಿಟಿಷರು ಬಿಟ್ಟು ಹೋಗಿರುವ ಬೀಜ, ಬ್ರಿಟೀಷ್ ರು ಮಾಡಿದ್ದು ಹೊಡೆದು ಹಾಳುವ ನೀತಿ, ಕಾಂಗ್ರೆಸ್ ನದ್ದು ಸಹ ಒಡೆದು ಹಾಳು ನೀತಿಯಾಗಿದೆ, ಜಾತಿ ಧರ್ಮ ಒಡೆದಿದ್ದಾರೆ, ತುಕ್ಕಡಿಯಾಗಿ ಸಮಾಜ ಹೊಡೆದಿದ್ದಾರೆ, ಹೀಗಾಗಿ ಬ್ರಿಟೀಶ್ ರನ್ನ ಕಿತ್ತಾಕಿದಂತೆ ಶಾಶ್ವತವಾಗಿ ಕಾಂಗ್ರೆಸ್ ನೆಲೆ ಕಿತ್ತೋಗೆಯಬೇಕು ಎಂದ್ರು.
ಹರಿಹರಕ್ಕೆ ಕೈಗಾರಿಕೆ ಕೊಡುತ್ತೇವೆ..
ಕಾಂಗ್ರೆಸ್ ಕಾಲದಲ್ಲಿ ಎಲ್ಲವು ಮುಚ್ಚಿ ಹೋಗಿದೆ, ನಾವು ಹರಿಹರಕ್ಕೆ ದೊಡ್ಡಮಟ್ಟದ ಕೈಗಾರಿಕೆ ಕೊಡುತ್ತೇವೆ, ನಮ್ಮ ಸರ್ಕಾರ ಬಂದು ಒಂದು ತಿಂಗಳ ಒಳಗೆ ಹರಿಹರ ಬೈರನಪಾದ ಯೋಜನೆಗೆ ಅನುಮೋದನೆ ತರುತ್ತೇವೆ ಎಂದರು..
ದಲಿತರ ಮೂಗಿಗೆ ತುಪ್ಪಾ ಸವರಿದ್ದ ಕಾಂಗ್ರೆಸ್..
ಕಾಂಗ್ರೆಸ್ ನವರು ಎಸ್ ಸಿ ಎಸ್ಟಿಗೆ ಏನ್ ಮಾಡಿದ್ದಾರೆ, ದಲಿತರು ಒಳ ಮೀಸಲಾತಿಗೆ ಹೋರಾಟ ಮಾಡ್ತಾ ಇದ್ರು ತಿರುಗಿ ನೋಡಲಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಅಂತಾ ಬಾಬಾ ಸಾಹೇಬರು ಹೇಳಿದ್ದಾರೆ, ಡಿಎಸ್ ಎಸ್ ಕಟ್ಟಿ ಹೋರಾಟ ಮಾಡಿದ್ದವರು ಹರಿಹರದ ಪ್ರೋ. ಕೃಷ್ಣಪ್ಪನವರು, ಅವರ ಕನಸನ್ನು ಕಾಂಗ್ರೆಸ್ ನನಸು ಮಾಡಲಿಲ್ಲ.. ನಾವು ಮಾಡಿದ್ದೇವೆ, ನಿಜವಾದ ನೈಜ ನಾಯಕ ಪ್ರೋ. ಕೃಷ್ಣಪ್ಪ, ಕೃಷ್ಣಪ್ಪ ಅವರ ಸಣ್ಣ ಸ್ಮಾರಕವನ್ನ ಕಾಂಗ್ರೆಸ್ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು..
ಜೇನು ಗೂಡಿಗೆ ಕೈ ಹಾಕಬೇಡಿ ಎಂದು ಕಾಂಗ್ರೆಸ್ ನವರು ಹೇಳಿದ್ದರು, ನಾನು ಜೇನು ಗೂಡಿಗೆ ಕೈ ಹಾಕಿ ಹುಳ ಕಡಿಸಿಕೊಂಡು ನಿಮಗೆ ಜೇನು ಕೊಟ್ಟಿದ್ದೇನೆ, ಒಳಮೀಸಲಾತಿ ನೀಡಿದ್ದು ಬಿಜೆಪಿ, ಒಕ್ಕಲಿಗರಿಗೆ, ಪಂಚಮಸಾಲಿಗೆ ಮೀಸಲಾತಿ ಕೊಟ್ಟಿದ್ದೇವೆ, ಒಳಮೀಸಲಾತಿ ಕೊಟ್ಟಾಗ ಫ್ರೋ. ಕೃಷ್ಣಪ್ಪ, ಬಸವಲಿಂಗಪ್ಪ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು..
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಸಿಎಂ ವ್ಯಂಗ್ಯ ಮಾಡಿದ್ದು, 2013ರಲ್ಲಿ ಸಿದ್ದರಾಮಯ್ಯ ಬರೋಕೆ ಮುಂಚೆ 10 ಕೆಜಿ ಅಕ್ಕಿ ಸಿಗ್ತಾ ಇತ್ತು, ಸಿದ್ದರಾಮಯ್ಯ ಬಂದಾಗ ಐದು ಕೆಜಿ ಮಾಡಿದ್ರು, ಹತ್ತು ಕೆಜಿ ಕೊಡ್ತಿವಿ ಅಂತಾ ಸಿದ್ದರಾಮಯ್ಯ ರನ್ನ ಸಿಎಂ ಅಣಕಿಸಿದರು, ನರೇಂದ್ರ ಮೋದಿ ಅಕ್ಕಿ ಕೊಟ್ಟಿದ್ದು, ಇವರು ಚೀಲಕ್ಕೆ ಹಣ ಕೊಟ್ಟಿದ್ದಾರೆ, ಬಿಜೆಪಿ ಹರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿ, ನಮ್ಮ ಸರ್ಕಾರ ಬಂದು ಒಂದು ತಿಂಗಳ ಒಳಗೆ ಬೈರನಪಾದ ಯೋಜನೆಗೆ ಅನುಮೋದನೆ ತರುತ್ತೇವೆ ಎಂದರು..
ಕಾಂಗ್ರೆಸ್ ಹಾಲಿ ಶಾಸಕ ಒಳ್ಳೆಯ ಮನುಷ್ಯ..!
ಹಾಲಿ ಶಾಸಕ ಎಸ್ ರಾಮಪ್ಪ ಒಳ್ಳೆಯ ಮನುಷ್ಯ, ಆದರೆ ಹಿಂದುಳಿದ ವರ್ಗದ ಒಳ್ಳೆಯ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ, ಒಳ್ಳೆಯವರಿಗೆ ಕಾಂಗ್ರೆಸ್ ನಲ್ಲಿ ಕಾಲ ಇಲ್ಲ, 10ಕ್ಕೆ ಬಿಜೆಪಿಗೆ ಮತದಾನ ಮಾಡಿ, 13ಕ್ಕೆ ವಿಜಯೋತ್ಸವ ಮಾಡೋಣ ಎಂದ ಸಿಎಂ ಕರೆ ನೀಡಿದ್ದಾರೆ..