POWER SAMACHARA | KANNADA NEWS | BREKING NEWS| 21-02-2024
ದಾವಣಗೆರೆ ; ನಾನ್ಯಾವತ್ತು ಎಂಪಿ ಟಿಕೆಟ್ ಕೇಳಿಲ್ಲ, ಈಗಲೂ ಕೇಳಲ್ಲ, ಮುಂದೆಯೂ ಕೇಳಲ್ಲ, ನನಗೆ ಟಿಕೆಟ್ ಕೊಡ್ತಾರೆ ನಾನೇ ಗೆಲ್ತಿನಿ, ನಾನೇ ಎಂಪಿ, ಮಗನಿಗೆ ಟಿಕೆಟ್ ಕೊಡೋದು ಬಿಡೋದು ಗೊತ್ತಿಲ್ಲ, ಅದು ಭಗವಂತನ ಇಚ್ಚೆ, ಮಗ ಎಂಪಿ ಏಕೆ ಆಗಬಾರದು ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೊಸ ದಾಳ ಉರುಳಿಸಿದ್ದಾರೆ..
ದಾವಣಗೆರೆಯ ವಡ್ಡನಹಳ್ಳಿಯಲ್ಲಿ ಮಾತನಾಡಿರುವ ಅವರು, ಟಿಕೆಟ್ ಕೇಳೋದಕ್ಕೆ ನಾನು ದೆಹಲಿಗೆ ಹೋಗಿರಲಿಲ್ಲ, ದೆಹಲಿಯಲ್ಲಿ ನ್ಯಾಷನಲ್ ಕಾನ್ವೆನ್ಷನ್ ಇತ್ತು, ಅದಕ್ಕೆ ಹೋಗಿದ್ದೆ, ಲೋಕಸಭಾ ಚುನಾವಣೆಯಲ್ಲಿ ನಾನು ಎಂದೂ ಟಿಕೆಟ್ ಕೇಳಿಲ್ಲ, ನನಗೆ ಟಿಕೆಟ್ ಕೊಡುತ್ತಾ ಬಂದಿದ್ದಾರೆ, ಮುಂದೂ ನಂಗೆ ಕೊಡ್ತಾರೆ, ಜನ ಮುಂದೂ ಆಶೀರ್ವಾದ ಮಾಡ್ತಾರೆ ನಾನೇ ಲೋಕಸಭಾ ಸದಸ್ಯ, ನಾನೆಂದು ಟಿಕೆಟ್ ಕೇಳೋಕೆ ಹೋಗಲ್ಲ, ಯಾರಿಗೆ ಬೇಕೋ ಅವರು ಕೇಳೋಕೆ ಹೋಗ್ತಾರೆ, ಕಾಂಪಿಟೇಷನ್ ಯಾವತ್ತೂ ಇದೆ, ಈಗ ಸ್ವಲ್ಪ ಪ್ರಬಲ ಆಗಿದೆ, ಯಾರಿಗೆ ಕೊಟ್ರು ಕೆಲಸ ಮಾಡಬೇಕು ಪಕ್ಷದ ಅಂತಿಮ ತೀರ್ಮಾನ, ಅವರು ಯಾರಿಗೆ ಪ್ರಪೋಸ್ ಮಾಡ್ತಾರೆ ಅದಕ್ಕೆ ನಾನು ಸ್ವೀಕಾರ ಮಾಡುವೆ ಎಂದಿದ್ದಾರೆ..
ಮಗ ಎಂಪಿ ಆಗೋದು ತಪ್ಪಾ..!?
ಸ್ಥಳೀಯರಿಗೆ ಟಿಕೆಟ್ ನೀಡಬೇಕು ನಾನ್ ಲೋಕಲ್ ಗೆ ನೀಡಬಾರದು ಎಂದು ಈ ಹಿಂದೆ ಕಾಂಗ್ರೆಸ್ ನಲ್ಲಿ ಹೇಳ್ತಾ ಇದ್ರು, ಈಗ ನಮ್ಮಲ್ಲಿರುವ ಅವರಿಗೆ ನಾನು ಬೇಕಾಗಿಲ್ಲ ಅದಕ್ಕೆ ಹೇಳ್ತಾ ಇದ್ದಾರೆ ಎಂದರು. ಮಗನಿಗೆ ಟಿಕೆಟ್ ಕೊಡಿಸುತ್ತಾರೆ ಅನ್ನೋ ವಿಚಾರ ಮಾತನಾಡಿದ ಅವರು, ಅದು ಭಗವಂತನ ಇಚ್ಚೆ, ಮಗ ಅನಿತ್ ಯಾಕೆ ಎಂಪಿ ಆಗಬಾರದು ಎಂದಿದ್ದಾರೆ. ಈಗಲೂ ನಾನೇ ನಿಲ್ತಿನಿ, ಯಾರಿಗೆ ಕೊಟ್ರು ಸ್ವೀಕಾರ ಮಾಡ್ತೀನಿ, ಈಗ ಟೂರು ಮಾಡ್ತೀನಿ ಜನ ಆಶೀರ್ವಾದ ಮಾಡಿದ್ರೆ ಗೆಲ್ತಿನಿ ಎಂದು ಜಿಎಂ ಸಿದ್ದೇಶ್ವರ್ ಭರವಸೆ ವ್ಯಕ್ತಪಡಿಸಿದ್ದಾರೆ.
ಭಾರತ್ ಕಳಪೆ ಅಕ್ಕಿ ಆರೋಪ ವಿಚಾರ
ಭಾರತ್ ಅಕ್ಕಿ ಹೆಸರಲ್ಲಿ ಕಳಪೆ ಅಕ್ಕಿ ವಿತರಣೆ ಎಂಬ ಕೆ ಹೆಚ್ ಮುನಿಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿರುವ ಸಂಸದ ಜೆ ಎಂ ಸಿದ್ದೇಶ್ವರ್, ಹೇಳ್ತಾರೆ, ಅವ್ರಿಗೆ ಏನ ಕೆಲಸಾ…? ವಿರೋಧ ಪಕ್ಷದವರಿಗೆ ಏನ ಕೆಲಸಾ, ಹೀಯಾಳಿಸೋದೆ ಕೆಲಸ, ಭಾರತ್ ಅಕ್ಕಿ ಹೆಸರಲ್ಲಿ ಕಳಪೆ ಹೇಗೆ ಕೊಡೋಕೆ ಬರುತ್ತೆ, ಮುನಿಯಪ್ಪ ಕೊಡಬೇಕಾದ ಅಕ್ಕಿಯನ್ನೇ ಸರಿಯಾಗಿ ಕೊಟ್ಟಿಲ್ಲ, ಮೊದಲು ಅವರು ಹೇಳಿದಂತೆ 10 ಕೆಜಿ ಅಕ್ಕಿ ಕೊಡಲಿ, ಆಮೇಲೆ ಭಾರತ್ ಅಕ್ಕಿ ಬಗ್ಗೆ ಮಾತನಾಡಲಿ ಎಂದು ಮುನಿಯಪ್ಪ ಹೇಳಿಕೆಗೆ ಜಿ ಎಂ ಸಿದ್ದೇಶ್ವರ್ ಸಿಡಿ ಮಿಡಿಗೊಂಡಿದ್ದಾರೆ..