POWER SAMACHARA | KANNADA NEWS | BREKING NEWS| 26-11-2023..

ದಾವಣಗೆರೆ: ಅವರು ಶೋಷಿತರ ಪಾಲಿನ ಗಟ್ಟಿ ಧ್ವನಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಹೃದಯವಂತ. ಕೊರೊನಾ ಸಂಕಷ್ಟದ ವೇಳೆಯಲ್ಲಿ ನೊಂದವರಿಗೆ ನೆರವಾದ ಕರುಣಾಮಯಿ. ಎಲ್ಲರೊಟ್ಟಿಗೂ ಅನೋನ್ಯ ಬಾಂಧವ್ಯ ಹೊಂದಿರುವ ಸೃಜನಶೀಲ ಹಾಗೂ ಮಮತೆಯ ಮಮಕಾರದ ಸಹೃದಯಿ, ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ, ಜನಪ್ರಿಯತೆಗೆ ಪಾತ್ರವಾಗಿರುವ ಹೋರಾಟಗಾರ ಬೆಣ್ಣೆನಗರಿಯ ಬಾಡದ ಆನಂದರಾಜು ಅವರಿಗೆ 51ರ ಹರೆಯದ ಸಂಭ್ರಮ... ಬಡ ಕುಟುಂಬದಲ್ಲಿ ಹುಟ್ಟಿ ನೊಂದು ಬೆಂದು ಬಳಿಕ ನಿರಂತರವಾಗಿ ಶೋಷಿತರಿಗೆ ಬೆಳಕಾಗಿ ನಿಂತಿರುವ ಬಾಡದ ಆನಂದರಾಜ್ ಅವರ ಹೋರಾಟದ ಬದುಕಿನ ಸಂಪೂರ್ಣ ಸ್ಟೋರಿ ಇಲ್ಲಿದೆ..

ಪ್ರಿಯ ವೀಕ್ಷಕರರೇ ರಟ್ಟೆ ಒಳಗೆ ಶಕ್ತಿ ಇದ್ದವನು, ಹಣ ಇದ್ದ ಧನಿಕ ಎಂದಿಗೂ ದೊಡ್ಡ ವ್ಯಕ್ತಿಯಾಗಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರ ಕಷ್ಟ ಅರ್ಥ ಮಾಡಿಕೊಂಡು ಕಷ್ಟಕ್ಕೆ ಮರುಗುವ, ಸಹಾಯ ಮಾಡುವ ಮನೋಭಾವದವರೇ ದೊಡ್ಡವರು. ಬಡತನ ಕಲಿಸಿದಷ್ಟು ಪಾಠ, ಯಾವ ಯುನಿವರ್ಸಿಟಿಗಳು ಕಲಿಸಿಕೊಡಲ್ಲ ಎಂಬುದು ಅಕ್ಷರಶ ಸತ್ಯ, ಅದರಂತೆ ಬಡತನದಲ್ಲಿ ಹುಟ್ಟಿ ಬೆಳೆದು ದೀನ ದಲಿತರ, ಬಡವರ, ಹಿಂದುಳಿದವರ ವರ್ಗದವರ ಶ್ರೇಯೋಭಿವೃದ್ಧಿಗೆ ತನ್ನ ಕೈಯಲ್ಲಾದಷ್ಟು ಸಹಾಯ ಮಾಡುವ, ಜಾತಿ ಬೇಧ ಎನ್ನದೇ ಸಹಕಾರ ನೀಡುವ ಶೋಷಿತ ವರ್ಗಗಳ ಹೃದಯವಂತ ಬಾಡದ ಆನಂದರಾಜು ಅವರ ಸಾಮಾಜಿಕ ಕೆಲಸಗಳೂ ನಿಜಕ್ಕೂ ಗ್ರೇಟ್ ಅನಿಸಿಬಿಡುತ್ತೆ. ಏಕಂದರೆ ಬೆಣ್ಣೆನಗರಿ ಬಸವಣ್ಣ ಅನ್ನೋ ಪದ ಎಲ್ಲರಿಗೂ ಕರೆಯೋಕೆ ಸಾಧ್ಯವಿಲ್ಲ, ಕೂಡಲಸಂಗಮ ಬಸವಣ್ಣ ಹಾಗೂ ಮುರುಘಾ ಶ್ರೀಗಳ ಮಾತುಗಳ ಪರಿಕಲ್ಪನೆಯಲ್ಲಿ ಬೆಳೆದ ಬಾಡದ ಆನಂದರಾಜ್ ನೂರಾರು ಸಮಾಜಮುಖಿ ಕೆಲಸಗಳ ಮೂಲಕ ಬಸವಣ್ಣ ಜೀವನ ಶೈಲಿ ಮುಂದುವರೆಸಿದವರು, ಬಸವ ಧರ್ಮ ಪರಿಕಲ್ಪನೆಯಲ್ಲಿ ಸರಳವಾಗಿ ವಿವಾಹವಾಗಿದ್ದು ಸಾಮಾಜಿಕ ಕಾರ್ಯಕ್ಕೆ ಹಿಡಿದ ಕೈಗನ್ನಡಿ..

*ಅಪ್ಪಟ ಸ್ನೇಹಜೀವಿ ಆನಂದರಾಜ್..*

*ನೊಂದವರ ಬಾಳಿನ ಬೆಳಕು ಕರುಣಾಮಯಿ*

ಅಷ್ಟಕ್ಕೂ ಬಾಡದ ಆನಂದರಾಜ್ ಅವರು ರಾಜಕಾರಣ ಮಾಡದೇ ದಾವಣಗೆರೆಯಲ್ಲಿ ಅತೀ ದೊಡ್ಡ ಹೆಸರುಗಳಿಸಿದ್ದು ಹೇಗೆ, ಅವ್ರು, ಮಾಡಿದ್ದಾದರು ಏನೂ ಅನ್ನೋ ಪ್ರಶ್ನೆಗಳಿದ್ದರೆ ಈ ಸ್ಟೋರಿ ಒಮ್ಮೆ ನೋಡಿ ಬಿಡಿ.. ಯೆಸ್ ಮಧ್ಯ ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ತಾಲೂಕಿನ ಬಾಡಾ ಗ್ರಾಮದ ರಾಮಣ್ಣ ಮತ್ತು ಸಾಕಮ್ಮ ದಂಪತಿಯ ಪುತ್ರ ಆನಂದರಾಜು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ಸಾಧನೆ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳೆಯುವ ಹಾದಿ ಹೂವಿನದ್ದಾಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿ ಕ್ರಮಿಸಿ ಬೆಳೆದವರು. ಎಲ್ಲರೊಟ್ಟಿಗೆ ಆತ್ಮೀಯತೆಯಿಂದ ಬೆರೆಯುವ, ನೊಂದವರ ಕಣ್ಣೀರು ಒರೆಸಲು ಶ್ರಮಿಸುವ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ಜೊತೆಗೆ ಸ್ಪಂದಿಸುವ ಪರಿ ಅನನ್ಯ. ಮಾತ್ರವಲ್ಲ, ಎಲ್ಲರನ್ನೂ ಬ್ರದರ್ ಎಂದು ಕರೆಯುವ ಮೂಲಕ ಆತ್ಮೀಯತೆಯ ಸಾಹುಕಾರ ಅಂತಾನೇ ಪ್ರಸಿದ್ಧಿ ಹೊಂದಿದ್ದಾರೆ.

ತಂದೆ ತಾಯಿ ಮಾತಿನಂತೆ ನಡೆದವರು:

ಸರಳ, ಸಜ್ಜನಿಕೆ ಮೊದಲಿನಿಂದಲೂ ಇದೆ. ಈಗಲೂ ಇದೆ. ಸ್ನೇಹಿತರ ಪಾಲಿಗೆ ಸ್ನೇಹಜೀವಿ, ಹೋರಾಟದಿಂದಲೇ ಬೆಳೆದು ಬಂದ ಆನಂದರಾಜ್ ಅವರು ಯುವಪೀಳಿಗೆಯ ಆಶಾಕಿರಣ, ರೈತರ ಮಿತ್ರರೂ ಹೌದು. ತಂದೆ ರಾಮಣ್ಣ ಅವರು ಕೆಇಬಿಯಲ್ಲಿ ನೌಕರರಾಗಿದ್ದವರು. ಮನೆಯಲ್ಲಿ ತುಂಬು ಕುಟುಂಬ. ಬಡತನದಲ್ಲೇ ಬೆಳೆದ ಕುಟುಂಬಕ್ಕೆ ತಂದೆ ಆಸರೆಯಾದರು, ಬಳಿಕ ಈ ಕುಟುಂಬವನ್ನು ಸುಂದರವಾಗಿ ಕಟ್ಟಿ ಪೋಷಿಸುವ ಕೆಲಸ ಆನಂದರಾಜ್ ಅವರ ಹೆಗಲ ಮೇಲೆ ಬಿದ್ದಿತ್ತು, ಇದರಲ್ಲಿ ತಾಯಿ ಸಾಕಮ್ಮರ ಪಾತ್ರವೂ ಬಹಳ ದೊಡ್ಡದಿದೆ. ತಂದೆ - ತಾಯಿಯ ಮಾತಿನಂತೆ ನಡೆದುಕೊಂಡ ಆನಂದರಾಜು ಅವರು ಯಾರಿಗೂ ಕೆಟ್ಟದ್ದು ಬಯಸಿದವರಲ್ಲ. ಆದಷ್ಟು ಸಹಾಯ ಮಾಡಿದವರೇ.

ಅನ್ಯಾಯ ವಿರುದ್ಧದ ಸಿಡಿಗುಂಡು, ಫೈಯರ್ ಬ್ರ್ಯಾಂಡ್..

ಆನಂದರಾಜ್ ಅವರು ಚಿಕ್ಕವರಾಗಿದ್ದಾಗಿನಿಂದಲೂ ಹೋರಾಟದಲ್ಲಿ ಪಾಲ್ಗೊಂಡವರು. ವಿದ್ಯಾರ್ಥಿ ಜೀವನದಲ್ಲಿ ಅನ್ಯಾಯ, ಮೋಸ, ವಂಚನೆ ವಿರುದ್ಧ ಧ್ವನಿ ಎತ್ತಿದವರು. ಇದರ ಪ್ರತಿಫಲವೇ 1993ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯ ಸ್ಥಾನ ಹುಡುಕಿಕೊಂಡು ಬಂದಿತ್ತು. ತನಗೆ ಕೊಟ್ಟ ಜವಾಬ್ದಾರಿ ನಿಭಾಯಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದವರು. ಜೊತೆಗೆ ಎಬಿವಿಪಿಯಲ್ಲಿ ಆನಂದರಾಜು ಅವರ ಜೊತೆಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಶಾಸಕ ಅರವಿಂದ ಲಿಂಬಾವಳಿ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಹಾಲಿ ಸದಸ್ಯ ಎಸ್. ಟಿ. ವೀರೇಶ್, ಸಿ. ವಿ. ನರೇಂದ್ರಕುಮಾರ್ ಅವರೆಲ್ಲಾ ಉನ್ನತ ಮಟ್ಟಕ್ಕೇರಿದ್ದಾರೆ. ಹಾಗಂತ ಎಲ್ಲಿಯೂ ಅವರ ಹೆಸರು ಬಳಸಿಕೊಂಡವರಲ್ಲ. ಎಲ್ಲರೊಟ್ಟಿಗೂ ಆತ್ಮೀಯತೆಯ ಜೊತೆಗೆ ಸ್ನೇಹ ಸಂಬಂಧ ಹಾಗೆ ಉಳಿಸಿಕೊಂಡು ಬಂದಿರುವ ನಿಸ್ವಾರ್ಥಿ ಅವರು. ರಾಜಕಾರಣ ಪ್ರವೇಶಿಸಿ ಮೇಯರ್, ಎಂಎಲ್ ಎ ಆಗುವ ಮಟ್ಟಿಗೆ ಬೆಳೆಯುವ ಅವಕಾಶ ಒದಗಿ ಬಂದಿದ್ದರು, ರಾಜಕಾರಣಕ್ಕೆ ದುಮುಕದೇ ಶೋಷಿತರ ಬಡವರ ಪರವಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ, ಈ ಹಿನ್ನಲೆ ಇವರಿಗೆ ಕೇಂದ್ರ ಸರ್ಕಾರದಿಂದ 2000 ನೇ ಇಸ್ವಿಯಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಒಲಿದು ಬಂದಿತ್ತು..

*ಕಷ್ಟ ಜೀವಿ, ಕಷ್ಟದಲ್ಲಿರುವವರಿಗೆ ಆಪತ್ಭಾಂಭವ*

ತುಂಬು ಕುಟುಂಬ ಆದ ಕಾರಣ ಬಾಲ್ಯದಿಂದಲೇ ತಂದೆ ಕಷ್ಟ ನೋಡಿ ಬೆಳೆದವರು. ರೈತರೆಂದರೆ ಇಂದಿಗೂ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಆನಂದರಾಜು ಅವರು, ರೈತರಿಗೆ ಅನ್ಯಾಯವಾದಾಗ ಸಿಡಿದೆದ್ದವರು. ಹಲವು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲಕ್ಕೆ ನಿಂತವರು. ಶೋಷಿತರ ವರ್ಗಗಳ ಒಕ್ಕೂಟದ ಅಧ್ಯಕ್ಷರು ಸಹ ಆಗಿರುವ ಆನಂದರಾಜ್, ಕೊರೊನಾ ವೇಳೆಯಲ್ಲಿ ಬಡವರಿಗೆ ಆಹಾರ ಕಿಟ್, ಅಕ್ಕಿ ಪ್ಯಾಕೇಟ್ ಜೊತೆಗೆ ಆಹಾರದ ಪ್ಯಾಕೇಟ್ ತಯಾರಿಸಿ ಗಾಡಿ ಮಾಡಿಕೊಂಡು ನಗರದ ಬಡವರಿಗೆಲ್ಲ ಹಂಚಿದ್ದು ಮಾತ್ರ ದಾವಣಗೆರೆ ಜನ ಮರೆಯುವಂತಿಲ್ಲ, ಎಲ್ಲಾ ಶೋಷಿತ ಸಮುದಾಯಗಳು ಕಷ್ಟದಲ್ಲಿದ್ದಾಗ ಅವರ ಪರವಾಗಿ ನಿಂತು ಹೋರಾಟ ಮಾಡಿದರು, ಸ್ವ ಸಮುದಾಯ ಯಾದವ ಸಮುದಾಯದ ಪರವಾಗಿಯೂ ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ, ಇನ್ನು ಯಾರೇ ಕಷ್ಟದಲ್ಲಿರಲಿ ಹಿಂದೂ ಮುಂದು ನೋಡುವುದಿಲ್ಲ. ತನ್ನ ಜೇಬಿನಲ್ಲಿದ್ದ ಹಣ ತೆಗೆದುಕೊಡುತ್ತಾರೆ. ಕಷ್ಟಕ್ಕೆ ಸ್ಪಂದನೆ ಜೊತೆಗೆ ನೆರವು ನೀಡುತ್ತಾರೆ. ತಮ್ಮ ಕೈಯಲ್ಲಿ ಆಗುವುದಿದ್ದರೆ ಓಡಾಡಿ ಕೆಲಸ ಪೂರ್ಣಗೊಳಿಸುವುದು ಎಲ್ಲರಿಗೂ ಇಷ್ಟವಾಗುತ್ತದೆ. ಎಂದಿಗೂ, ಎಲ್ಲಿಯೂ ಹೇಳಿಕೊಳ್ಳದೇ ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಮಾಡಿರುವ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.

ಅಷ್ಟೆ ಯಾಕೆ ತಮ್ಮ 50ನೇ ಜನ್ಮದಿನ ಪ್ರಯುಕ್ತ ದಾವಣಗೆರೆ ಸಮೀಪದಲ್ಲಿ ಇರುವ ಸಾಧನಾ ವೃದ್ದಾಶ್ರಮದಲ್ಲಿ ನೂರಾರು ಅನಾಥರಿಗೆ, ವೃದ್ದರಿಗೆ, ಅಂಧರಿಗೆ ಬಟ್ಟೆ ವಿತರಣೆ ಮಾಡಿ, ಊಟ ಬಡಿಸಿದ್ರು, ಜೊತೆಗೆ ನಗರವನ್ನ ಸ್ವಚ್ಚ ಮಾಡುವ ಪೌರ ಕಾರ್ಮಿಕರನ್ನ ಮನೆಗೆ ಕರೆಯಿಸಿ ಎಲ್ಲರಿಗೂ ಬಟ್ಟೆ ವಿತರಣೆ ಮಾಡಿದಾಗ ಇಡೀ ದಾವಣಗೆರೆ ಶಹಬ್ಬಾಶ್ ಗಿರಿ ನೀಡಿತ್ತು, ಇನ್ನೂ ಈ ಭಾರೀ 51ನೇ ಹುಟ್ಟುಹಬ್ಬಕ್ಕೆ ಸದ್ದಿಲದೇ ಸೇವೆ ಮಾಡಬೇಕು ಎಂಬ ಪಣ ಹೊತ್ತು ನೂರಾರು ಜನಕ್ಕೆ ಆಸರೆಯಾಗಿ ಹುಟ್ಟುಹಬ್ಬವನ್ನ ಸಾರ್ಥಕಗೊಳಿಸಿರೋದು ಹೆಮ್ಮೆಯ ಸಂಗತಿ..

ಬಾಡದ ಆನಂದರಾಜ್ ಎಂದಿಗೂ ಧರ್ಮ, ಜಾತಿ ಎಂದವರಲ್ಲ. ಎಲ್ಲರೂ ನಮ್ಮವರೇ ಅಂದುಕೊಂಡವರು. ಬಸವಣ್ಣನವರ ಸಿದ್ಧಾಂತ ಅಂದರೆ ತುಂಬಾ ಅಚ್ಚುಮೆಚ್ಚು, ವಿವಿಧತೆಯಲ್ಲಿ ಏಕತೆ, ಬಡತನ, ಸಿರಿವಂತ ಎಂಬ ಭೇದ ಭಾವ ತೋರದೇ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುವ ಅವರ ಹೃದಯವಂತಿಕೆ ಎಲ್ಲರಿಗೂ ಇಷ್ಟವಾಗುತ್ತದೆ. ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದಿದ್ದರೂ, ಬಡ ಕ್ರೀಡಾಪಟುಗಳಿಗೆ ಉತ್ತೇಜಿಸುವ ಮೂಲಕ ಸಹಕಾರ, ಪ್ರೀತಿ ನೀಡುತ್ತಲೇ ಬಂದಿದ್ದಾರೆ. ಎಲ್ಲಾ ಪಕ್ಷಗಳ ರಾಜಕಾರಣಿಗಳು, ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲಾ ಸಮುದಾಯದವರಿಗೆ ಬಾಡದ ಆನಂದರಾಜು ಅಂದ್ರೆ ಪ್ರೀತಿ ಜೊತೆಗೆ ಗೌರವ ನೀಡುತ್ತಾರೆ. ಮಠಾಧೀಶರ ಜೊತೆ ಕೂಡ ಆನಂದರಾಜ್ ಉತ್ತಮ ಬಾಂಧವ್ಯ ಹೊಂದಿದ್ದು, ಮುರುಘಾ ಮಠದ ಉಸ್ತುವಾರಿ ಆಗಿರುವ ಬಸವಪ್ರಭು ಸ್ವಾಮಿಜಿ, ಆನಂದರಾಜ್ ಅಂದರೆ ಕರುಣಾಮಯಿ, ಅವರ ಹೋರಾಟಗಳು, ಸಹಾಯ ಮಾಡುವ ಗುಣ ನಿಜಕ್ಕೂ ಮೆಚ್ಚುವಂತಾದ್ದಾಗಿದೆ ಎಂದು ಬಣ್ಣಿಸಿದ್ದಾರೆ..

ಪತಿ ಸಾಮಾಜಿಕ ಕಾರ್ಯಕ್ಕೆ ಪತ್ನಿ ಸಾಥ್:

ಕೃಷಿ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಉದ್ಯಮದಲ್ಲಿ ತೊಡಗಿರುವ ಬಾಡದ ಆನಂದರಾಜ್, ಬಂದ ಆದಾಯದಲ್ಲಿ ಅರ್ಧ ಹಣವನ್ನ ಸಮಾಜ ಸೇವೆಗೆಂದೆ ಮೀಸಲು ಇಡುತ್ತಾರೆ, ಯಾರ ಬಳಿಯೂ ಕೈ ಚಾಚದೇ ಸ್ವಂತ ಹಣದಲ್ಲಿ ಸಮಾಜ ಸೇವೆಯಲ್ಲಿ ತೊಡುಗುತ್ತಾರೆ, ಸದ್ಯ ದಾವಣಗೆರೆ ನಗರದ ತರಳುಬಾಳು ಬಡಾವಣೆಯಲ್ಲಿ ವಾಸವಿರುವ ಆನಂದರಾಜ್ ಅವರ ಸಹಾಯ ಗುಣ, ಸೇವೆ, ಬಡವರ ಕಷ್ಟಕ್ಕೆ ಸ್ಪಂದಿಸುವಂತಹ ಸಾಮಾಜಿಕ ಕಾರ್ಯಗಳಿಗೆ ಅವರ ಪತ್ನಿ ಶೋಭಾ ಆನಂದರಾಜು ಅವರ ಸಂಪೂರ್ಣ ಬೆಂಬಲ ಇದೆ. ಮಕ್ಕಳಾದ ಕವಿರಾಜ್ ಪ್ರಸಾದ್ ಯಾದವ್ ಹಾಗೂ ಧನುಷ್ ಪ್ರಸಾದ್ ಯಾದವ್ ಜೊತೆ ಸುಂದರ ಬದುಕು ಸಾಗಿಸುತ್ತಿದ್ದಾರೆ. ಜೀವನದಲ್ಲಿ ದುಡ್ಡು ತುಂಬಾ ಜನರು ಮಾಡಿರಬಹುದು. ಆದ್ರೆ, ಜನರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಇಂಥದ್ದನ್ನು ಸಾಧಿಸಿರುವ ಆನಂದರಾಜು ಅವರು ಸುವರ್ಣ ವರ್ಷೋತ್ಸವದ ಸಂಭ್ರಮದಲ್ಲಿದ್ದಾರೆ. ದೇವರು ಅವರಿಗೆ ಆರೋಗ್ಯ, ಆಯಸ್ಸು ಜೊತೆಗೆ ಮತ್ತಷ್ಟು ಜನಪರ ಕೆಲಸ ಮಾಡಲು ಶಕ್ತಿ ನೀಡುವಂತಾಗಲಿ...