POWER SAMACHARA | KANNADA NEWS | BREKING NEWS| 07-10-2023..
ದಾವಣಗೆರೆ : ನಕಲಿ ಚಿನ್ನ ನೀಡಿ ವಂಚನೆ ಪ್ರಕರಣದಲ್ಲಿ ಚನ್ನಗಿರಿ ಪೊಲೀಸರು ಆರೋಪಿಗಳ ಎಡೆಮುರಿ ಕಟ್ಟಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ..
ಹರಪನಹಳ್ಳಿ ತಾಲ್ಲೂಕಿನ ಪಾವನ ಪುರ ಗ್ರಾಮದ ಸಂದೀಪ್, ಹರಪನಹಳ್ಳಿ ತಾಲ್ಲೂಕಿನ ಚಿರಸ್ಥಹಳ್ಳಿ ಗ್ರಾಮದ ಈಶ್ವರಪ್ಪ ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರು ಗೋವರ್ಧನ ಬಳಿ ಕೆಲಸಕ್ಕೆ ಇದ್ದರು ಎಂದು ತಿಳಿದು ಬಂದಿದೆ, ಚಿನ್ನ ನೀಡುತ್ತೇವೆ ಎಂದು ಬೆಂಗಳೂರು ಮೂಲದ ಗೋವರ್ಧನ್ ಎಂಬ ಗುತ್ತಿಗೆದಾರನಿಗೆ 60 ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತು, ಮುಂಗಡವಾಗಿ 44ಲಕ್ಷ 50 ಸಾವಿರ ರೂಪಾಯಿ ಕೊಡಲಾಗಿತ್ತು ಎನ್ನಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ಈ ಘಟನೆ ನಡೆದಿತ್ತು.
ನಮ್ಮ ಮನೆಯ ಪಾಯಾ ತೆಗೆಯುವಾಗಿ ಚಿನ್ನ ನಿಕ್ಷೇಪ ಪತ್ತೆಯಾಗಿದೆ ಎಂದು ಈ ಇಬ್ಬರು ಆರೋಪಿಗಳು ನಂಬಿಸಿದ್ದರು, ಇವರ ಮಾತು ನಂಬಿ 2.5 ಕೆಜಿ ನಕಲಿ ಚಿನ್ನದ ಬಿಲ್ಲೆಗಳನ್ನ ಪಡೆದ ಗುತ್ತಿಗೆದಾರ ಗೋವರ್ಧನ್ 44 ಲಕ್ಷದ 50 ಲಕ್ಷ ರೂಪಾಯಿ ನೀಡಿದ್ದ, ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಚಿನ್ನ ಎಂಬ ವಿಚಾರ ಬಯಲಿಗೆ ಬಂದಿದೆ, ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣ ಜಾಡು ಹಿಡಿದ ಚನ್ನಗಿರಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ, ಆರೋಪಿತರಿಂದ 40 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ದಾವಣಗೆರೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ..