POWER SAMACHARA | KANNADA NEWS | BREKING NEWS| 13-05-2024
ದಾವಣಗೆರೆ: ಹಚ್ಚ ಹಸಿರಿನಿಂದ ಕೂಡಿದ್ದ ಆ ಗ್ರಾಮಗಳಿಗೆ ಇದ್ದಕ್ಕಿದ್ದಂತೆ ಜೀವ ಭಯ ಎದುರಾಗಿದೆ, ಪಾಲಿಕೆ ಮಾಡಿದ ಆ ಒಂದು ಯಡವಟ್ಟಿನಿಂದ ಜೀವ ಕೈಲಿ ಹಿಡಿದು ಓಡಾಡೋ ಪರಿಸ್ಥಿತಿ ಬಂದೊದಗಿದೆ, ಇಷ್ಟಿದ್ರು ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು, ಪಾಲಿಕೆ ದಿವ್ಯ ನಿರ್ಲಕ್ಷ್ಯಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ..
ಹೌದು.. ಸುಮಾರು ಮೂವತ್ತು ಎಕರೆ ಪ್ರದೇಶದಲ್ಲಿ ಶೇಖರಣೆ ಆಗಿರುವ ಕಸದ ಕೊಂಪೆಗೆ ಬೆಂಕಿ ತಗುಲಿದ್ದು ಆ ಬೆಂಕಿ ಗ್ರಾಮಗಳಿಗೆ ಆವರಿಸೋ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ, ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದಲ್ಲಿ ಮಹಾನಗರ ಪಾಲಿಕೆ ಹಲವು ವರ್ಷಗಳಿಂದ ಕಸ ವಿಲೇವಾರಿ ಘಟಕದಲ್ಲಿ ಕಸ ಡಂಪಿಂಗ್ ಮಾಡ್ತಾ ಇತ್ತು, ಆದ್ರೆ ಅದ್ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಮೂವತ್ತು ಎಕರೆಯಲ್ಲಿ ಕಸದ ಗುಡಕ್ಕೆ ಬೆಂಕಿ ಆವರಿಸಿದೆ, ಎಷ್ಟೆ ಪ್ರಯತ್ನ ಪಟ್ಟರು ಬೆಂಕಿ ನಂದಿಸಲು ಆಗ್ತಿಲ್ಲ, ಈ ಬೆಂಕಿ ಇನ್ನೂ ಎರಡು ತಿಂಗಳವರೆಗೆ ಮುಂದುವರೆಯಲಿದೆ ಎನ್ನಲಾಗ್ತಿದೆ, ಇದರಿಂದ ಆವರಗೊಳ್ಳ, ಕಕ್ಕರಗೊಳ್ಳ, ಕಲ್ಪನಹಳ್ಳಿ, ಮಾಗನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಜೀವ ಭಯದಲ್ಲಿರೋ ಗ್ರಾಮಸ್ಥರು ಇಂದು ಬೀದಿಗಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಬೆಂಕಿ ರುದ್ರ ನರ್ತನದಿಂದ ಐದಾರು ಗ್ರಾಮಗಳಿಗೆ ತೊಂದರೆ ಆಗ್ತಿದೆ, ಕಸವಿಲೇವಾರಿ ಘಟಕದ ಪಕ್ಕದಲ್ಲೇ ರೈತರ ಜಮೀನುಗಳಿದ್ದು ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿದ್ದು ಭತ್ತದ ಗದ್ದೆಗಳ ಮೇಲೆಲ್ಲಾ ಬೂದಿ ಆವರಿಸಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಅಷ್ಟೇ ಅಲ್ಲದೇ ಕಸವಿಲೇವಾರಿ ಘಟಕದಿಂದ ಕೂಗಳತೆ ದೂರದಲ್ಲೇ ಅವರಗೊಳ್ಳ ಗ್ರಾಮವಿದ್ದು ಎಲ್ಲಿ ಗ್ರಾಮಕ್ಕೆ ಬೆಂಕಿ ಆವರಿಸುತ್ತೋ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ, ಭತ್ತದ ಬಣವೆಗಳಿಗೆ ಬೆಂಕಿ ತಗಲುವ ಆತಂಕ ಇದೆ, ಬಿರುಬಿಸಿಲು ಇರೋದ್ರಿಂದ ಬೆಂಕಿ ಹೆಚ್ಚಾಗ ತೊಡಗಿದ್ದು ಮನೆಗಳಿಗೂ ಬೆಂಕಿ ತಗಲು ಬಹುದು, ಇಡೀ ಗ್ರಾಮಕ್ಕೆ ಬೆಂಕಿ ತಗಲಿದರೆ ಮುಂದೆ ಗತಿ ಏನೂ ಅನ್ನೋ ಭಯದಲ್ಲಿ ಗ್ರಾಮಸ್ಥರಿದ್ದಾರೆ, ಇತ್ತ ಮಹಾ ನಗರ ಪಾಲಿಕೆ ಕಣ್ಣಿದ್ದು ಕುರುಡನ ರೀತಿ ವರ್ತಿಸುತ್ತಿದೆ, ದೊಡ್ಡ ಸಿಟಿ ದಾವಣಗೆರೆಯ ಕಸ ಎಲ್ಲವು ಈ ಘಟಕದಲ್ಲಿ ಡಂಪ್ ಆಗುತ್ತೆ, ಇಷ್ಟಿದ್ರು ಇಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನ ಬಳಸಿಲ್ಲ, ಬೆಂಕಿ ನಂದಿಸಲು ಅಗ್ನಿಶಾಮಕ ತಂತ್ರಜ್ಞಾನ ಇಲ್ಲ, ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ಕಸ ಘಟಕವೂ ಕಸವೇ ಆಗಿ ಹೋಗಿದೆ, ಸುತ್ತಾ ಕೆಟ್ಟ ವಾಸನೆ ಬರುತ್ತಿದ್ದರು ವಾಸನೆ ನಿಯಂತ್ರಣಕ್ಕೆ ಕ್ರಮ ವಹಿಸದೇ ಪಾಲಿಕೆ ಕಣ್ಮುಚ್ಚಿ ಕುಳಿತಿದೆ, ಇನ್ನೂ ಸ್ಥಳಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಆಗಮಿಸಿ ಹಾರಿಕೆ ಉತ್ತರ ನೀಡಿ ಹೋಗಿದ್ದು, ಇತ್ತ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದು ಕೂತಿದ್ದಾರೆ..
ಒಟ್ಟಾರೆ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ತೀವ್ರತೆ ಹೆಚ್ಚುತ್ತಲೇ ಇದೆ, ಬೆಂಕಿ ನಂದಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ, ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿ, ಆತಂಕದಲ್ಲಿರೋ ಗ್ರಾಮಗಳಿಗೆ ಮುಕ್ತಿ ನೀಡಬೇಕಿದೆ..