POWER SAMACHARA | KANNADA NEWS | 14-04-2023
ದಾವಣಗೆರೆ: ಬಿಜೆಪಿ ಬಂಡಾಯ ಬೇಗುದಿ ಹೇಳತೀರದಾಗಿದೆ, ಬಂಡಾಯ ಶಮನಕ್ಕೆ ವರಿಷ್ಠರು ಶತ ಪ್ರಯತ್ನ ಮಾಡಿದ್ರು, ಬಂಡಾಯ ಮಾತ್ರ ನಿಲ್ತಿಲ್ಲ, ಮಾಯಕೊಂಡ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿ ಟಿಕೆಟ್ ವಂಚಿತರೆಲ್ಲ ಒಂದಾಗಿ ಬಂಡಾಯ ಅಭ್ಯರ್ಥಿ ಘೋಷಣೆ ಮಾಡಿ ಸೆಡ್ಡು ಹೊಡೆದಿದ್ದು, ವರಿಷ್ಠರಿಗೆ ಟೆನ್ಶನ್ ತರಿಸಿದೆ..
ಆರ್ ಎಲ್ ಶಿವಪ್ರಕಾಶ್ ಬಂಡಾಯ ಬಿಜೆಪಿ ಅಭ್ಯರ್ಥಿ..
ರಾಜ್ಯ ಬಿಜೆಪಿಯಲ್ಲಿ ಒಂದಿಲ್ಲೊಂದು ಬಂಡಾಯ ಹೇಳುತ್ತಲೇ ಇದೆ, ದಾವಣಗೆರೆ ಬಿಜೆಪಿಯಲ್ಲೂ ಬಂಡಾಯದ ಬಾವುಟ ಹಾರಾಡುತ್ತಿದೆ, ಅತೀ ಹೆಚ್ಚು ಆಕಾಂಕ್ಷಿಗಳು ಇರೋ ಕ್ಷೇತ್ರ ಮಾಯಕೊಂಡ ವಿಧಾನಸಭಾ ಕ್ಷೇತ್ರ, ಬಿಜೆಪಿಯಿಂದ ಬರೋಬ್ಬರಿ 12ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದು, ಮಾಜಿ ಶಾಸಕ ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ, ಇದರಿಂದ ಆಕ್ರೋಶಗೊಂಡಿರೋ 11ಕ್ಕೂ ಹೆಚ್ಚು ಆಕಾಂಕ್ಷಿಗಳು ಒಗ್ಗಟ್ಟಾಗಿ ನಿಂತಿದ್ದಾರೆ, ಸಭೆ ಕರೆದು ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಾರ್ಪೋರೇಟರ್ ಆರ್ ಎಲ್ ಶಿವಪ್ರಕಾಶ್ ಹೆಸರು ಘೋಷಣೆ ಮಾಡಿದ್ದಾರೆ..
ಮುನಿಸಿಕೊಂಡ ಹನ್ನೊಂದು ಆಕಾಂಕ್ಷಿಗಳು..!
ಜೆ ಮಂಜಾನಾಯ್ಕ್
ಹೆಚ್ ಕೆ ಬಸವರಾಜ್
ಶಿವಪ್ರಕಾಶ್
ಎಮ್ ಹನುಮಂತನಾಯ್ಕ್
ಬಿ ರಮೇಶ್ ಕುಮಾರ್
ಮೋಹನ್ ಕುಮಾರ್
ಆಲೂರು ಲಿಂಗರಾಜ್
ಬಿಟಿ ಸಿದ್ದಪ್ಪ
ಶಿವಾನಂದ
ಅನಿಲ್ ಕುಮಾರ್
ಕೊಡಗನೂರು ವೆಂಕಟೇಶ್..
ಪ್ರಾಮಾಣಿಕರಿಗೆ ಬೆಲೆ ಇಲ್ಲವೇ..?
ಪ್ರಾಮಾಣಿಕವಾಗಿ ದುಡಿದವರಿಗೆ ಟಿಕೆಟ್ ಕೊಟ್ಟಿಲ್ಲ, ಪಕ್ಷದ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದವರಿಗೆ ಟಿಕೆಟ್ ನೀಡಿಲ್ಲ, ಕಳೆದ ಭಾರೀ ಬೇರೆ ಪಕ್ಷಕ್ಕೆ ಹೋಗಿ ಬಂದವರಿಗೆ ಟಿಕೆಟ್ ನೀಡಲಾಗಿದೆ, ಬಸವರಾಜ್ ನಾಯ್ಕ್, ಕಳೆದ ಭಾರೀ ಜೆಡಿಯುಗೆ ಹೋಗಿ ಸ್ಪರ್ಧಿಸಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು, ಮತ್ತೆ ವಾಪಾಸ್ ಬಿಜೆಪಿಗೆ ಬಂದಿದ್ದು, ಅವರಿಗೆ ಟಿಕೆಟ್ ಕೊಡಲಾಗಿದೆ, ಒಬ್ಬ ಕಾರ್ಯಕರ್ತನ ವಿಶ್ವಾಸ ಗಳಿಸದವರಿಗೆ ಅಭ್ಯರ್ಥಿ ಮಾಡಲಾಗಿದೆ ಎಂದು ದೂರಿದ್ದಾರೆ.. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ್ ನಾಯ್ಕ್, ವರಿಷ್ಠರು ಎಲ್ಲವನ್ನು ಸರಿ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ..
ಇಬ್ಬರ ಜಗಳ ಮೂರನೇಯವರಿಗೆ ಲಾಭ..?
ಒಟ್ಟಾರೆ ಮಾಯಕೊಂಡ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಇಬ್ಬರ ಜಗಳ ಮೂರನೇಯವರಿಗೆ ಲಾಭ ಆಗುತ್ತಾ ಅಥವಾ ವರಿಷ್ಠರು ಎಲ್ಲರನ್ನು ಕರೆದು ಸಮಾಧಾನಪಡಿಸ್ತಾರ ಕಾದು ನೋಡಬೇಕಿದೆ…