POWER SAMACHARA | KANNADA NEWS | 08-04-2023
ದಾವಣಗೆರೆ: ಚುನಾವಣೆ ಸಂಹಿತೆ ಜಾರಿಯಾದ ದಿನದಿಂದ ಶನಿವಾರದವರೆಗೂ ಒಟ್ಟು 93,42,496 ರೂಪಾಯಿ ಮೊತ್ತದ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಶನಿವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಏರ್ಪಡಿಸಿದ್ದ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಕ್ರಮ ಮದ್ಯ ಮಾರಾಟದ ಮೇಲೆ ಪೊಲೀಸ್ ಹಾಗೂ ಅಬಕಾರಿ ನಡೆಸಿದ್ದು, 627 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ, ಇದರ ಮೊತ್ತ 2ಲಕ್ಷ 56 ಸಾವಿರ ರೂಪಾಯಿಯಾಗಿದೆ ಎಂದರು. 48,06,208 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ನಾರ್ಕೋಟಿಕ್ಸ್ ವಶಪಡಿಸಿಕೊಳ್ಳಲಾಗಿದೆ, ಚೆನ್ನೈಯಿಂದ ಮುಂಬೈಗೆ ಸಾಗಿಸಲಾಗುತ್ತಿದ್ದ 34 ಲಕ್ಷ ಮೊತ್ತದ 66 ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳಲಾಗಿದ್ದು, ಒಟ್ಟಾರೆ ಇದುವರೆಗೂ 93,43,496 ರೂಪಾಯಿ ಮೊತ್ತದ ಬೆಲೆಬಾಳುವ ನಗದು ಹಾಗೂ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.