<strong>POWER SAMACHARA | KANNADA NEWS | BREKING NEWS| 25-11-2024</strong> <strong>ದಾವಣಗೆರೆ :</strong> ಕರ್ನಾಟಕ ಟಗರು ಕಾಳಗದ ಅಖಾಡದಲ್ಲಿ ಕಾಳಿ ಹೆಸರು ಕೇಳದ ಜನರಿಲ್ಲ, ಅಷ್ಟರ ಮಟ್ಟಿಗೆ ಕಿಂಗ್ ಕಾಳಿ ರಾಜ್ಯಾದ್ಯಂತ ಹೆಸರು ಮಾಡಿತ್ತು, ಸೋಲಿಲ್ಲದ ಸರದಾರ ಹೆಸರು ಗಿಟ್ಟಿಸಿದ್ದ ಬೆಳ್ಳೂಡಿ ಕಾಳಿ ಅನಾರೋಗ್ಯದಿಂದ ನಿಧನ ಹೊಂದಿದ್ದು ಸಾವಿರಾರು ಅಭಿಮಾನಿಗಳಿಗೆ ಬೇಸರ ತರಿಸಿದೆ.. <img class="aligncenter wp-image-3111 size-full" src="https://powersamachara.com/wp-content/uploads/2024/11/king-kaali-death3.jpg" alt="" width="750" height="550" /> ಹೌದು.. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಬೆಳ್ಳೂಡಿಯ ರಾಘವೇಂದ್ರ ಮಾಲೀಕತ್ವದ ಕಾಳಿ ಟಗರು ಕಾಳಗದಲ್ಲಿ ಭಾರೀ ಸದ್ದು ಮಾಡಿದ್ದ ಕುರಿ, ಎಲ್ಲೇ ಟಗರು ಕಾಳಗ ಇದ್ರು ಜಯ ಗ್ಯಾರಂಟಿ, ರಾಜ್ಯ ಅಷ್ಟೆ ಅಲ್ಲದೇ ದೇಶದಾದ್ಯಂತ ಕಾಳಿ ಫೆಮಸ್ಸು ಪಡೆದಿತ್ತು, ಕಾಳಿ ಬಂದ್ರೆ ಸಾಕು ಕೇಕೆ ಹಾಕುತ್ತಾ ನೋಡಲು ಸಾಗರೋಪಾದಿಯಲ್ಲಿ ಜನ ಬಂದು ಸೇರುತ್ತಿದ್ದರು. ಮನೆ ಮಗನಂತೆ ಟಗರನ್ನ ರಘು ಸಾಕಿದ್ದ, ಕಳೆದ 8ವರ್ಷಗಳಿಂದ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಬೆಳ್ಳೂಡಿ ಕಾಳಿ, ಕಾಗಿನೆಲೆ ಶ್ರೀ ನಿರಂಜನಾ ನಂದಪುರಿ ಸ್ವಾಮಿಗಳ ಅಚ್ಚುಮೆಚ್ಚಿನ ಕುರಿಯಾಗಿತ್ತು, ಯಾವುದೇ ಕುರಿ ಕಾಳಗಕ್ಕೆ ಹೋಗಬೇಕಾದ್ರು ಸ್ವಾಮಿಜಿ ಆಶೀರ್ವಾದ ಪಡೆದು ಹೋಗ್ತಾ ಇತ್ತು, ಅಷ್ಟೆ ಅಲ್ಲದೇ ರಾಜ್ಯಾದ್ಯಂತ ಸಾವಿರಾರು ಜನ ಅಭಿಮಾನಿಗಳನ್ನ ಹೊಂದಿದ್ದ ಕಾಳಿ ಅಗಲಿಕೆ ತುಂಬಲಾರದ ನಷ್ಟವಾಗಿದ್ದು, ಜನರು ತಂಡೋಪ ತಂಡವಾಗಿ ಆಗಮಿಸಿ ಕಾಳಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.. <img class="aligncenter wp-image-3112 size-full" src="https://powersamachara.com/wp-content/uploads/2024/11/king-kaali-death2.jpg" alt="" width="750" height="550" /> ಎರಡು ಬುಲೆಟ್ ಸೇರಿದಂತೆ 6 ಬೈಕು, ಹಣ, ಬಂಗಾರ, ಬೆಳ್ಳಿ ಗೆದ್ದಿತ್ತು, ಕಾಳಿಗೆ 10 ಲಕ್ಷ ಕೊಡುವುದಾಗಿ ಕೇಳಿದ್ದರು ಮಾಲೀಕ ರಘು ಕಾಳಿಯನ್ನ ಮಾರಾಟ ಮಾಡಿರಲಿಲ್ಲ, ಬೆಳ್ಳೂಡಿ ಗ್ರಾಮಕ್ಕೆ ಹೆಸರು ತಂದು ಕೊಟ್ಟ ಕಾಳಿಗೆ ಜನ ಕಂಬನಿ ಮಿಡಿಯುತ್ತಿದ್ದಾರೆ. ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ, ಮನುಷ್ಯರ ರೀತಿಯೆ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಲಾಗುತ್ತಿದೆ..