BIG EXCLUSIVE
ದಾವಣಗೆರೆ : ಗಣೇಶ ಮೆರವಣಿಗೆ ಮೇಲೆ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಿದ ಸಂಬಂಧ ಬೆಣ್ಣೆನಗರಿ ದಾವಣಗೆರೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕೇಸ್ ಸಂಬಂಧ ನ್ಯಾಯಾಧೀಶರ ಮುಂದೆ 18 ಜನ ಆರೋಪಿಗಳನ್ನೂ ಪೊಲೀಸರು ಹಾಜರುಪಡಿಸಿದ್ದಾರೆ. ದಾವಣಗೆರೆಯ MCC ಎ ಬ್ಲಾಕ್ ನಲ್ಲಿರೋ ಜಡ್ಜ್ ಮನೆಗೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಜಡ್ಜ್ ಮನೆಗೆ ಕರೆತಂದಿದ್ದಾರೆ.
18 ಜನ ಆರೋಪಿಗಳಲ್ಲಿ ಕಲ್ಲು ತೂರಿದ 10 ಜನ ಮುಸ್ಲಿಂ ಯುವಕರು, 8 ಜನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಯುವಕರನ್ನು ಬಂಧಿಸಲಾಗಿದೆ. ನಿನ್ನೆ ದಾವಣಗೆರೆಯ ಅರಳಿ ಮರ ಸರ್ಕಲ್ ನಲ್ಲಿ ವೆಂಕೋಭೋವಿ ಕಾಲೋನಿ ಗಣೇಶ ಮೆರವಣಿಗೆ ನಡೆಯುತ್ತಿದ್ದಾಗ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿ ಅಟ್ಟಹಾಸ ಮೆರೆದಿದ್ದರು..
ದಾವಣಗೆರೆಯಲ್ಲಿ ಕಲ್ಲು ತೂರಾಟ ಮತ್ತು ಕೋಮು ಗಲಭೆ ವಿಚಾರ 20 ಜನರ ವಿರುದ್ಧ ದೂರು ದಾಖಲಾಗಿದೆ, ಮುಸ್ಲಿಂ ಸಮುದಾಯದ 20 ಜನರ ವಿರುದ್ಧ ಆನೆಕೊಂಡ ನಿವಾಸಿ ಅಜಯ್ ಎಂಬುವವರು ದೂರು ದಾಖಲು ಮಾಡಿದ್ದಾರೆ. ದಾವಣಗೆರೆಯ ಆನೆಕೊಂಡ ಬಳಿ ಮನೆಗಳ ಮೇಲೆ ಕಲ್ಲು ಎಸೆಯಲಾಗಿದೆ, ಮೆಹಬೂಬ್ ಖಾನ್, ಮೊಹಮ್ಮದ್, ಸೈಯದ್ ರಫಿಕ್, ನಬೀವುಲ್ಲಾ, ಇಲಿಯಾಜ್, ಸಿಖಂದರ್, ಮಲ್ಲಿಕಗ ರಿಯಾನ್, ಭಾಷಾ ಸೇರಿದಂತೆ ಅನೇಕರ ಮೇಲೆ ದೂರು ದಾಖಲಾಗಿದೆ. ಆನೆಕೊಂಡದ ಬಳಿ ಗುಂಪು ಕಟ್ಟಿಕೊಂಡು ಹಿಂದುಗಳ ಮನೆ ಮೇಲೆ ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕೈಯಲ್ಲಿ ಕೋಲು, ಕಣಗ, ಕಲ್ಲು ಹಿಡಿದುಕೊಂಡು ಕೊಲೆಗೆ ಯತ್ನ ನಡೆಸಿದ್ದಾರೆ, ಅಲ್ಲಾ-ವು-ಅಕ್ಬರ್ ಘೋಷಣೆ ಜೊತೆ ಹಿಂದೂಗಳ ಮಾರೋ ಎಂಬ ಪದ ಬಳಕೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದ್ದು, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ಬೇತೂರು ರಸ್ತೆಯಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಟೀಮ್ ಮನೆಗಳ ಮೇಲೆ ಕಲ್ಲು ತೂರಾಟ ಕ್ಕೆಮುಂದಾಗಿದೆ.. ಮಟ್ಟಿಕಲ್ಲು, ಅನೆಕೊಂಡ ದ ಹಲವು ಕಡೆಗಳಲ್ಲಿ 60 ರಿಂದ 70 ಜನ ಯುವಕರ ಗುಂಪು ಮಟ್ಟಿಕಲ್ಲು ಏರಿಯಾದ ಮೇಲೆ ಕಲ್ಲು ತೂರಾಟ ನಡೆಸುವ ಜೊತೆ ಮನೆ ಮುಂಭಾಗ ಇರುವ ವಾಹನಗಳಿಗೆ ಹಾನಿ ಮಾಡಿದ್ದಾರೆ.. ಅಲ್ಲದೆ ಏಕಾಎಕಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನಲೆ ಭಯದ ವಾತಾವರಣ ಸೃಷ್ಟಿಯಾಗಿದೆ.. ಮನೆಗಳಿಗೂ ಕೂಡ ಬೀಗ ಹಾಕಿಕೊಂಡು ಹೋಗಿದ್ದಾರೆ..