POWER SAMACHARA | KANNADA NEWS | BREKING NEWS| 15-05-2024
ದಾವಣಗೆರೆ : ದಾವಣಗೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮ ನಡೆದಿದ್ದು, ವಿಷ ಹಾಕಿ ಮೀನುಗಳನ್ನ ಕೊಲ್ಲಲಾಯಿತ ಎಂಬ ಶಂಕೆ ವ್ಯಕ್ತವಾಗಿದೆ.
ದಾವಣಗೆರೆ ಸಮೀಪದ ಎಲೆಬೇತೂರಿನ ಕೆರೆಯಲ್ಲಿ ಈ ಮನ ಕಲುಕುವ ಘಟನೆ ನಡೆದಿದ್ದು, ಸಾವಿರಾರು ಮೀನುಗಳ ಸಾವು ಕಂಡಿವೆ, ಕೆರೆಯಲ್ಲಿ 1.50 ಲಕ್ಷ ಮೀನುಗಳನ್ನ ಬಿಡಲಾಗಿತ್ತು, ಅದ್ರಲ್ಲಿ 40 ಸಾವಿರ ಮೀನು ಹಿಡಿಯಲಾಗಿತ್ತು, ಈಗ ಸುಮಾರು ಲಕ್ಷಕ್ಕೂ ಅಧಿಕ ಮೀನು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ, ಬರೋಬ್ಬರಿ 5ರಿಂದ 10 ಕೆಜಿ ಮೀನುಗಳು ತೂಕ ಇದ್ದು, ಸಾವನ್ನಪ್ಪಿದ ಮೀನುಗಳು ತೇಲುತ್ತಿವೆ, ಸಾವನ್ನಪ್ಪಿದ ಮೀನು ನೋಡಿ ಮೀನುಗಾರರು ಮನ ನೊಂದಿದ್ದಾರೆ, ಇನ್ನೂ ಹಳೇ ವೈಷಮ್ಯ ಹಿನ್ನಲೆ ಕೆರೆಗೆ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ಗ್ರಾಮದ ಮುಖಂಡ ಮಂಜುನಾಥ್ ಆರೋಪಿಸಿದ್ದು, ವಿಷದಿಂದ ಮೀನುಗಳ ಸಾವನ್ನಪ್ಪಿದ್ದಾವ ಅಥವಾ ಬಿರು ಬಿಸಿಲಿನ ತಾಪಕ್ಕೆ ಸಾವನ್ನಪ್ಪಿರಬಹುದು ಅನ್ನೋದು ತಿಳಿದು ಬರಬೇಕಿದೆ..