POWER SAMACHARA | KANNADA NEWS | BREKING NEWS| 26-02-2024 ಬಳ್ಳಾರಿ : ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಕಾರ್ಣಿಕ ವಾಣಿಯು ಮಳೆ,ಬೆಳೆ ಹಾಗೂ ರಾಜಕೀಯವನ್ನ ನಿರ್ಧರಿಸುತ್ತದೆ. ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣೀಕ, ಭವಿಷ್ಯವಾಣಿ ಏನು ಅಂತೀರಾ ಈ ಸ್ಟೋರಿ ನೋಡಿ...
ಸುಕ್ಷೇತ್ರ ಮೈಲಾರಲಿಂಗೇಶ್ವರ ಸನ್ನದಿಯಲ್ಲಿ ನುಡಿದ ಗೊರವಯ್ಯ ಸ್ವಾಮಿ ವರ್ಷದ ದೈವವಾಣಿ

ಸಂಪಾಯಿತಲೇ ಪರಾಕ್, ಅನ್ನೋ ದೈವವಾಣಿ ನುಡಿದ ಗೊರವಯ್ಯ
ಕಿಕ್ಕಿರಿದು ಸೇರಿರೋ ಜನರ ದಂಡು. ಮೊಳಗಿರೋ ಡಮರುಗದ ಸದ್ದು. ಮೆರವಣಿಯಲ್ಲಿ ಬರ್ತಿರೋ ಗೊರವಪ್ಪ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಾರ್ಣಿಕ ನುಡಿದ ಗೊರವಯ್ಯ. ಎಸ್ ಇದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಕಂಡುಬಂದ ದೃಶ್ಯಗಳಿವು. ಮೈಲಾರಲಿಂಗೇಶ್ವರ ಜಾತ್ರೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಸುಮಾರು ನೂರಾರು ವರ್ಷಗಳ ಇತಿಹಾಸವನ್ನ ಹೊಂದಿದೆ. ಪ್ರತಿ ವರ್ಷ ಭರತ್ ಹುಣ್ಣಿಮೆಯಾದ ಮೂರು ದಿನಕ್ಕೆ ವರ್ಷದ ದೈವವಾಣಿಯನ್ನ ನುಡಿಯಲಾಗುತ್ತಿದೆ. ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಮಧ್ಯ ಆಗಮಿಸಿದ ಗೊರವಯ್ಯ ಸ್ವಾಮೀ 18 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾನೆ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ರಾಮಪ್ಪ ಗೊರವಯ್ಯ ಸ್ವಾಮೀ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ. ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ 18 ಅಡಿ ಗೊರವಯ್ಯ ಸದ್ದಲೇ ಅನ್ನುತಾ" ಸಂಪಾಯಿತಲೇ ಪರಾಕ್" ಅನ್ನೋ ದೈವವಾಣಿ ನುಡಿದಿದ್ದಾನೆ... ವರ್ಷದ ಭವಿಷ್ಯವಾಣಿ ಅಂತಲೇ ನಂಬಿಕೊಂಡು ಬಂದಿರೋ ಕಾರ್ಣಿಕವಾಣಿ ಕೇಳಲು ಕೇವಲ ರಾಜ್ಯ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳ ಸಾವಿರಾರು ಜನರು ಆಗಮಿಸಿರ್ತಾರೆ. ಸಂಜೆಯಾಗುತ್ತಿದ್ದಂತೆ ಕಾರ್ಣಿಕ ನುಡಿಯೋ ಡೆಂಕನಮರಡಿಗೆ ಸ್ಥಳ ಜನರಿಂದ ತುಂಬಿ ಬಿಡುತ್ತದೆ. ಸುಮಾರು ವರ್ಷಗಳಿಂದ ರೈತರು ಮೈಲಾರಲಿಂಗೇಶ್ವರ ದೇವರ ಕಾರ್ಣಿಕವನ್ನು ಕೇಳಿ ಮಳೆ ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಕಾರ್ಣಿಕ ವಾಣಿ ಆಲಿಸಿದ ಕಿಕ್ಕಿರಿದು ಸೇರಿದ್ದ ರೈತಾಪಿ ವರ್ಗದ ಜನರಿಗೆ ಮಳೆ ಬೆಳೆಗಳು ಉತ್ತಮವಾಗಲಿದೆ. ಕಳೆದ ವರ್ಷ ಮಳೆ ಸರಿಯಾಗಿ ಆಗಿರಲಿಲ್ಲ, ಈ ಭಾರೀ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂದು ಹಿರಿಯರು ಮಾತನಾಡಿಕೊಳ್ಳುತ್ತಿದ್ದಂತು ಕಂಡು ಬಂತು ಆದರೆ ಈ ಭಾರೀ ಪೂರ್ಣ ಕಾರಣಿಕ ಆಗಲಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು.. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಫೇಮಸ್ ಆಗಿದೆ. ಸಾಕ್ಷಾತ್ ಮೈಲಾರಲಿಂಗೇಶ್ವರ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶೇಷತೆಗೆ ಸಾಕ್ಷಿಯಾಗಿದೆ...